{"product_id":"nadavargal-sampanara-nadenudi-collection-of-portraits","title":"ನಾಡವರ್ಗಳ್ | NADAVARGAL","description":"\u003cp\u003eಇಲ್ಲಿರುವ ಪ್ರತಿಯೊಬ್ಬರ ಜೊತೆಯಲ್ಲೂ ನನಗೆ ವೈಯಕ್ತಿಕ\u003cbr\u003eಸಂಬಂಧವಿತ್ತು ಮತ್ತು ಈಗಲೂ ಇದೆ.  ದೇವರಾಜ ಅರಸರನ್ನು ಮಾತ್ರ ನಾನು\u003cbr\u003eಹತ್ತಿರದಿಂದ ಕಂಡಿದ್ದರೂ ಎಂದೂ ಅವರೊಡನೆ ಮಾತು ಸಾಧ್ಯವಾಗಿರಲ್ಲ.\u003cbr\u003eಉಳಿದವರೆಲ್ಲರ ಜೊತೆ ಕೆಲವೇ ತಾಸುಗಳು, ದಿನಗಳು, ತಿಂಗಳುಗಳ ಸಾಪೇಕ್ಷತೆಯಲ್ಲಿ\u003cbr\u003eಸಂಪರ್ಕ. ಇನ್ನು ಕೆಲವರ ಜೊತೆಯಲ್ಲಂತೂ ಅವರ ಪರಿಚಯವಾದಾಗಿನಿಂದ\u003cbr\u003eಇಲ್ಲಿಯವರೆಗೂ ಉಳಿದು ಬಂದಂಥದ್ದು.\u003cbr\u003eವ್ಯಕ್ತಿಚಿತ್ರ ಬರವಣಿಗೆ ಸಾಹಿತ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನೇ ಪಡೆದಿದೆ.\u003cbr\u003eಕನ್ನಡದಲ್ಲಿ ನವರತ್ನ ರಾಮರಾಯರು, ಎ.ಎನ್. ಮೂರ್ತಿರಾಯರು, ಪ್ರಭುಶಂಕರ,\u003cbr\u003eಲಂಕೇಶ್ ಮುಂತಾದವರು ಈ ಪ್ರಕಾರವನ್ನು ಸಮೃದ್ಧಗೊಳಿಸಿದ್ದಾರೆ. ಡಿವಿಜಿಯವರಂತೂ\u003cbr\u003eತಮ್ಮ ‘ಜ್ಞಾಪಕ ಚಿತ್ರಶಾಲೆ’ಯ ಸಂಪುಟಗಳ ಮೂಲಕ ತಮ್ಮ ಸಂಪರ್ಕಕ್ಕೆ ಬಂದಿದ್ದ,\u003cbr\u003eಬಾರದಿದ್ದ ಮಹಾನುಭಾವರ ಬಗ್ಗೆ ಮನೋಜ್ಞವಾಗಿ ಬರೆದಿದ್ದಾರೆ.\u003cbr\u003eನನ್ನ ಈ ‘ನಾಡವರ್ಗಳ್’ ಪುಸ್ತಕವನ್ನು ಸಿದ್ಧಗೊಳಿಸುತ್ತಿರುವಾಗ ನಾನು ಇನ್ನೂ\u003cbr\u003eಎಷ್ಟೊಂದು ಸಂಪನ್ನರ ಬಗ್ಗೆ ಬರೆಯಬಹುದು ಎಂಬ ಅಚ್ಚರಿ ಮನಸ್ಸಿನಲ್ಲಿ ಮೂಡಿತು.\u003cbr\u003eಅವರೆಲ್ಲರ ಚಿತ್ರಗಳು ಮೂಡಿಬಂದವು. ಮುಂದೆ ಎಂದಾದರೂ ಬರೆದೇನು. ಈ\u003cbr\u003eಬರಹಗಳಲ್ಲಿ ಇತರ ವ್ಯಕ್ತಿತ್ವಗಳನ್ನು ಕಂಡರಿಸುವುದಕ್ಕಿಂತ ಹೆಚ್ಚಾಗಿ ನನ್ನ ಬದುಕಿನ\u003cbr\u003eವಿವರಗಳೇ ಮುನ್ನೆಲೆಗೆ ಬಂದಂತೆ ಕಾಣಿಸಬಹುದು!\u003c\/p\u003e","brand":"BEETLE BOOK SHOP","offers":[{"title":"Default Title","offer_id":49681074323739,"sku":"","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nadavargal-sampanara-nadenudi-collection-of-portraits-7716143.jpg?v=1767534066","url":"https:\/\/beetlebookshop.com\/kn\/products\/nadavargal-sampanara-nadenudi-collection-of-portraits","provider":"Beetle Book Shop","version":"1.0","type":"link"}