{"product_id":"naavu-namma-nudi","title":"ನಾವು ನಮ್ಮ ನುಡಿ","description":"\u003cp\u003eನುಡಿ ಅಥವಾ ಭಾಷೆ ಎಂಬುದು ಸಾವಿರಾರು ವರ್ಷಗಳ ಕಾಲ ನಡೆಸಿಕೊಂಡು ಬಂದ ಬದುಕು ಮತ್ತು ಚಿಂತನಕ್ರಮಗಳ ಸಂಚಿತ ರೂಪ. ನುಡಿಯ ಒಳಗೆ ಇಳಿದಾಗ ಮಾತ್ರ ಇಲ್ಲಿಯ ಚರಿತ್ರೆ, ಸಂಸ್ಕೃತಿ, ಜ್ಞಾನ, ವಿಜ್ಞಾನ, ರಾಜಕಾರಣ, ಶಿಕ್ಷಣ, ನೆನಪು, ಧರ್ಮ ಮುಂತಾದವುಗಳ ಜತೆ ಬದುಕು ಹೆಣೆದುಕೊಂಡಿರುವ ಒಳಸುಳಿಗಳು ಗೋಚರಿಸುತ್ತವೆ.\u003c\/p\u003e\n\u003cp\u003eವಿಪರ್ಯಾಸವೆಂದರೆ, ಸಮೂಹಗಳ ಏಳಿಗೆಗಾಗಿ, ಸಾಮಾಜಿಕ\u003c\/p\u003e\n\u003cp\u003eಸಮಾನತೆಗಾಗಿ ಇಲ್ಲವೇ ಜ್ಞಾನಮೀಮಾಂಸೆಗಳನ್ನು ರೂಪಿಸಲು ಭಾಷೆಯನ್ನು ಒಂದು ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಪನ್ಮೂಲವನ್ನಾಗಿ (ಕಲ್ಬರಲ್ ಕ್ಯಾಪಿಟಲ್) ಸಜ್ಜುಗೊಳಿಸುವ ವಿವೇಕ ನಮ್ಮದಾಗಲಿಲ್ಲ.\u003c\/p\u003e\n\u003cp\u003eನಮ್ಮ ಬದುಕಿನ ಸಂದರ್ಭದಲ್ಲಿ ಕಗ್ಗಂಟಾಗುತ್ತಲೇ ನಡೆದಿರುವ ಶಿಕ್ಷಣದ ದಾರಿ, ಗುರಿ ಮತ್ತು ಅದು ಉಂಟುಮಾಡುತ್ತಿರುವ ಪಲ್ಲಟಗಳು ಹಾಗೂ ಹೊಸ ಶಿಕ್ಷಣ ನೀತಿಗಳನ್ನು ಈ ಕೃತಿಯ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನುಡಿಯ ಸಾಮಾಜಿಕ ಅಸ್ಮಿತೆ ಮತ್ತು ವೈವಿಧ್ಯತೆ ಅದರ ಸಮಕಾಲೀನತೆ ಮತ್ತು ಸಬಾಲ್ಟರ್ನಿಟಿಗಳನ್ನು ಕುರಿತ ಖಚಿತವಾದ ಒಳನೋಟಗಳು ಎರಡನೇ ಭಾಗದಲ್ಲಿವೆ. ಅಂಬೇಡ್ಕರ್ ಮತ್ತು ಗಾಂಧಿ ಎಂಬ ಚೇತನಗಳು ಕಳೆದ ಶತಮಾನದ ಭಾರತವನ್ನು ಪ್ರಭಾವಿಸಿದ ಬಗೆ, ಅವರು ಮುಖಾಮುಖಿಯಾದ ರಾಜಕಾರಣ ಮತ್ತು ಪರ್ಯಾಯವಾಗಿ ಕಟ್ಟಿಕೊಟ್ಟ ದರ್ಶನ ಇತ್ಯಾದಿಗಳನ್ನು ಈ ಕೃತಿಯ ಮೂರನೇ ಭಾಗದಲ್ಲಿ ಧ್ಯಾನಿಸಲಾಗಿದೆ.\u003c\/p\u003e\n\u003cp\u003eನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಹಿಂದಿರುವ ರಾಜಕಾರಣದ ಆಳ ಅಗಲಗಳನ್ನು ಚರ್ಚಿಸುವ ಮಲ್ಲಿಕಾರ್ಜುನ ಮೇಟಿಯವರ ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಓದಿಗೆ ಒಂದು ವಿಶಿಷ್ಟ ಬಗೆಯ ಪ್ರವೇಶವನ್ನು ಮತ್ತು ಕನ್ನಡದ ತಿಳಿವಿಗೇ ಒಂದು ಓಟವನ್ನು ದೊರಕಿಸುತ್ತದೆ.\u003c\/p\u003e\n\u003cp\u003eಬಿ ಎಲ್ ರಾಜು\u003c\/p\u003e","brand":"BEETLE BOOK SHOP","offers":[{"title":"Default Title","offer_id":48075645288731,"sku":"","price":171.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naavu-namma-nudi-4365054.jpg?v=1767533887","url":"https:\/\/beetlebookshop.com\/kn\/products\/naavu-namma-nudi","provider":"Beetle Book Shop","version":"1.0","type":"link"}