{"product_id":"naanu-yaaru-emba-aala-niraala","title":"ನಾನು ಯಾರು? ಎಂಬ ಆಳ ನಿರಾಳ","description":"\u003cp\u003eಆಧ್ಯಾತ್ಮಿಕ ಚಿಂತಕಿಯಾಗಿ ಕಂಡು ಬಂದಿರುವ ಮಂಗಳಾ ಅವರು ‘ನಾನಾರು’ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸತತ ಪ್ರಯತ್ನ ಮಾಡುವಲ್ಲಿ ತಮ್ಮ ಕೃತಿಯುದ್ದಕ್ಕೂ ಹಲವಾರು ಬಸವಾದಿ ಶಿವಶರಣರ ವಚನಗಳನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ಅವರ ಈ ಕೃತಿಯನ್ನು ಓದುತ್ತಾ ಹೋದರೆ ಓದಿಸಿಕೊಳ್ಳುತ್ತಾ ಹೋಗುತ್ತದೆ.\u003c\/p\u003e\n\u003cp\u003e- ಶಿವಾಜಿ ಗಣೇಶನ್\u003c\/p\u003e\n\u003cp\u003e*****\u003c\/p\u003e\n\u003cp\u003eಇದೊಂದು ವಿಶಿಷ್ಟವಾದ ಕೃತಿ. ಇಲ್ಲಿನ ತಾತ್ವಿಕ ವಸ್ತುವು ಹಳೆಯದಾದರೂ ಚಿಂತನೆ ಮತ್ತು ಬರಹದ ಶೈಲಿಗಳು ಆಧುನಿಕವಾಗಿವೆ. ಅನೇಕ ಓದುಗರಿಗೆ ಹಲವು ಕಾರಣಗಳಿಗೆ ಈ ಕೃತಿಯು ಇಷ್ಟವಾಗುತ್ತದೆಂದು ನಂಬಿದ್ದೇನೆ.\u003c\/p\u003e\n\u003cp\u003e- ಪ್ರೊ. ರಾಜೇಂದ್ರ ಚೆನ್ನಿ\u003c\/p\u003e\n\u003cp\u003e*******\u003c\/p\u003e\n\u003cp\u003eಮಾನವನಿರ್ಮಿತ ಖೆಡ್ಡಾರಚನೆಗಳಲ್ಲಿ ಬಿದ್ದು ಒದ್ದಾಡುವವರಿಗೆ ವಚನಸಾಹಿತ್ಯದ ಓದು ದಕ್ಕದೇ ಹೋಗುವುದನ್ನು ಪ್ರಸ್ತಾಪಿಸುವ ಮಂಗಳಾ ಅವರು ಮುಕ್ತಮನಸ್ಸಿನಿಂದ ವಚನಗಳನ್ನು ಎದುರುಗೊಳ್ಳಬೇಕಾದ ಸವಾಲನ್ನು ನಮ್ಮ ಮುಂದಿಟ್ಟಿದ್ದಾರೆ. ತತ್ವ ಚಿಂತನೆಯೇ ಪ್ರಧಾನವಾದ ಈ ಕೃತಿ ತನ್ನ ಒಟ್ಟು ಪರಿಣಾಮದಲ್ಲಿ \"ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ\" ಎಂದು ಕರೆಕೊಟ್ಟಿದೆ. ಇಂಥ ಕೃತಿ ಮಹಿಳೆಯ ಮೂಲಕ ಹೊಮ್ಮಿದೆ ಎಂಬುದು ಮಂಗಳಾ ಅವರ ಆತ್ಮೀಯನಾದ ನನಗೆ ಖುಷಿಕೊಟ್ಟಿದೆ ...\u003c\/p\u003e\n\u003cp\u003e \u003c\/p\u003e\n\u003cp\u003e- ಪ್ರೊ. ವಿ.ಚಂದ್ರಶೇಖರ ನಂಗಲಿ\u003c\/p\u003e","brand":"Beetle Book Shop","offers":[{"title":"Default Title","offer_id":45119164449051,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naanu-yaaru-emba-aala-niraala-5044312.jpg?v=1767536346","url":"https:\/\/beetlebookshop.com\/kn\/products\/naanu-yaaru-emba-aala-niraala","provider":"Beetle Book Shop","version":"1.0","type":"link"}