{"product_id":"naalige-nettaru-mattu-buddha-short-stories","title":"ನಾಲಿಗೆ, ನೆಟ್ಟಾರು ಮತ್ತು ಬುದ್ಧ ( ಸಣ್ಣ ಕಥೆಗಳು )","description":"\u003cp\u003eಇದು ಕಲ್ಲು, ಮರಳು, ಸಿಮೆಂಟುಗಳಿಂದ ಕಟ್ಟೋಣ ಕಟ್ಟುವ ಸಿವಿಲ್ ಇಂಜಿನಿಯರೊಬ್ಬರ ಮೂರನೇ ಕಥಾ ಸಂಕಲನ ಹಿಂದಿನ ಸಂಕಲನಗಳಲ್ಲಿ ಕನ್ನಡಕ್ಕೆ ಹೊಸತೆನ್ನಿಸುವ ವೃತ್ತಿಪರ ಅನುಭವಗಳು ದಟ್ಟವಾಗಿದ್ದರೆ, ಈ ಸಂಕಲನದ ಹರವು ವಿಸ್ತಾರವಾಗಿದೆ.\u003c\/p\u003e\n\u003cp\u003eಅಭಿವ್ಯಕ್ತಿ ಸಲೀಸಲ್ಲದ ಈ ಹೊತ್ತಿನಲ್ಲಿ ಸಮಕಾಲೀನ ಸಂಕಟ, ವೈರುಧ್ಯಗಳನ್ನು ಕಂಡರಿಸುವುದು ಕಷ್ಟದ ಕೆಲಸ. ಚಂದ್ರಪ್ರಭ ಕಠಾರಿ ಇಂತಹ ಸವಾಲುಗಳಿಗೆ ಮುಖಾಮುಖಿಯಾಗಲು ಬಯಸುತ್ತಾರೆ. ವಲಸೆ ಕಾರ್ಮಿಕರ ಸಮಸ್ಯೆಗಳು, ಕಟ್ಟಡ ಕಾರ್ಮಿಕರ ಬವಣೆಗಳು, ಕೋವಿಡ್ ಅವಾಂತರಗಳು ತಾಜಾ ಎನ್ನುವಂತೆ ಶಬ್ದಚಿತ್ರಗಳಲ್ಲಿ ಮೂಡುತ್ತವೆ; ತೀಕ್ಷ್ಯ ವಿಡಂಬನೆಯ ಮೂಲಕ ಸುಳ್ಳಿನ ಸಾಮ್ರಾಜ್ಯವನ್ನು ಬೆತ್ತಲುಮಾಡುತ್ತಾರೆ. ಇಲ್ಲಿನ ಕತೆಗಳಲ್ಲಿ ಹೆಣ್ಣುಮಕ್ಕಳು ಸಮಸ್ಯೆಗಳಿಗೆ ಹೆದರಿ ಪಲಾಯನ ಮಾಡುವವರಲ್ಲ; ದಿಟ್ಟವಾಗಿ ಎದುರಿಸುವ ಸಬಲೆಯರು.\u003c\/p\u003e\n\u003cp\u003eಬೆಂಗಳೂರಲ್ಲಿ ಹುಟ್ಟಿ ಬೆಳೆದ ಕಠಾರಿಯವರ ಕತೆಗಳಿಗೆ ಕಾಸ್ಕೋಪೊಲಿಟನ್ ಗುಣವಿದೆ. ಸಾಮಾಜಿಕ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವುದು ಲೇಖಕನೊಬ್ಬನ ಜವಾಬ್ದಾರಿ ಎನ್ನುವ ಎಚ್ಚರದಲ್ಲಿ ಅವರು ಬರೆಯುತ್ತಾರೆ.\u003c\/p\u003e\n\u003cp\u003eಎಂ ನಾಗರಾಜ ಶೆಟ್ಟಿ ಸಿನಿಮಾ ವಿಶ್ಲೇಷಕರು\u003c\/p\u003e","brand":"BEETLE BOOK SHOP","offers":[{"title":"Default Title","offer_id":48657127473435,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naalige-nettaru-mattu-buddha-short-stories-3756539.jpg?v=1767534007","url":"https:\/\/beetlebookshop.com\/kn\/products\/naalige-nettaru-mattu-buddha-short-stories","provider":"Beetle Book Shop","version":"1.0","type":"link"}