{"product_id":"mystery-of-maarikatte","title":"ಮಿಸ್ಟರಿ ಆಫ್‌ ಮಾರಿಕಟ್ಟೆ | Mystery Of Maarikatte Crime Thriller Kannada Book","description":"\u003cp\u003eಫೈಲಿನೊಳಗಿದ್ದ ಡಾಕ್ಯೂಮೆಂಟ್ ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದು ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!!\u003c\/p\u003e\n\u003cp\u003eತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ “ಇನ್ನಿಗೆ ಹೇಳೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ. ನನ್ನ ಮಾತೇ ಕೇಳಲ್ಲ\" ಎಂದು ಕಿರಿಕಿರಿಗೊಂಡ ಹಿಮವಂತನು, ತನ್ನ ಕೈಯಲ್ಲಿದ್ದ ಫೈಲನ್ನು ಆತುರಾತುರವಾಗಿ ಕಾರಿನೊಳಗಿಟ್ಟು ನಂತರ ಅದೇ ಆತುರದಲ್ಲಿ ತನ್ನೆದುರಿಗಿದ್ದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ. ಗಾಢ ಮೌನವನ್ನು ತುಂಬಿಕೊಂಡಿದ್ದ ದೇವಸ್ಥಾನದ ಒಳಗೆ ನಡೆದು ಬ೦ದು \"ಮಯೂರಿ, ಮಯೂರಿ.. ಏನದು ಸದ್ದು?\" ಎ೦ದು ಕೇಳುತ್ತಾ ಗರ್ಭಗುಡಿಯ ಸನಿಹಕ್ಕೆ ಬಂದವನಿಗೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಯಿರಲಿಲ್ಲ. ಇದು ಹಿಮವಂತನಲ್ಲಿ ಸಣ್ಣನೆಯ ಆತಂಕವನ್ನು ಹುಟ್ಟಿಸಿ \"ಮಯೂರಿ.. ಮಯೂರಿ\" ಎಂದು ಕೂಗುತ್ತಾ ತನ್ನೆದುರಿಗಿದ್ದ ಗರ್ಭಗುಡಿಯನ್ನು ಪ್ರವೇಶಿಸಿದವನಿಗೆ ಅಲ್ಲೊಂದು ಬಹುದೊಡ್ಡ ಅಚ್ಚರಿ ಕಾದಿತ್ತು. ಗರ್ಭಗುಡಿಯೊಳಗೆ ಮಯೂರಿಯಿರಲಿಲ್ಲ. ಹಾಗೆಯೇ ಶಕುನವೆಂಬಂತೆ ಗರ್ಭಗುಡಿಯೊಳಗಿದ್ದ ದೀಪವೂ ಆರಿತ್ತು!!\u003cbr\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":51430207881499,"sku":null,"price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mystery-of-maarikatte-7579265.jpg?v=1767528246","url":"https:\/\/beetlebookshop.com\/kn\/products\/mystery-of-maarikatte","provider":"Beetle Book Shop","version":"1.0","type":"link"}