{"product_id":"mussanje-maatu","title":"ಮುಸ್ಸಂಜೆ ಮಾತು","description":"\u003cdiv class=\"border-product\" style=\"box-sizing: border-box; padding-top: 15px; padding-bottom: 20px; border-top: 1px dashed rgb(221, 221, 221); color: rgb(33, 37, 41); font-family: Lato, sans-serif; font-size: 14px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial;\"\u003e\n\u003cp style=\"box-sizing: border-box; margin-top: 0px; margin-bottom: 0px; font-size: 14px; color: rgb(119, 119, 119); line-height: 1.5em;\"\u003eವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿನ ಹಾದಿಯಲ್ಲಿ ಬರುವ ಒಂದು ಹಂತವಾದ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಾಶ್ರಮಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ಧಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಲ್ಲಿ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು. ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. \"ಮುಸ್ಸಂಜೆ ಮಾತು\" ಬದುಕಿನ ಮುಸ್ಸಂಜೆಯ ಕತೆಗಳನ್ನು ನಿಮಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು ಎಂದು ವಿನಯದಿಂದ ಹೇಳಬಲ್ಲೆ! - ಪ್ರಸಾದ್ ನಾಯ್ಕ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50086497911067,"sku":"","price":189.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mussanje-maatu-2290823.jpg?v=1767529807","url":"https:\/\/beetlebookshop.com\/kn\/products\/mussanje-maatu","provider":"Beetle Book Shop","version":"1.0","type":"link"}