{"product_id":"munduduvudannu-tadegattuvudu-hege","title":"How to stop procrastination?","description":"\u003cp\u003e\u003cspan\u003eಮುಂದೂಡುವುದನ್ನು ತಡೆಗಟ್ಟುವುದು ಹೇಗೆ? | \u003c\/span\u003e\u003cspan lang=\"KN\"\u003eಮುಂದೂಡುವುದನ್ನು ತಡೆಗಟ್ಟುವುದು ಹೇಗೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp\u003e \u003c\/p\u003e\n\u003cp\u003e\u003cspan lang=\"KN\"\u003eನೀವು ಮಾಡಬೇಕಾದ ಕೆಲಸಗಳ ಬಗ್ಗೆ ಬಹಳವಾಗಿ ಅಲೋಚಿಸಿದರೂ ಅದನ್ನು ಕಾರ್ಯಗತಮಾಡುವುದಿಲ್ಲವೆ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಉತ್ಸಾಹದಿಂದ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲವೆ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಿಮ್ಮ ಕಲ್ಪನೆಯ ಗುಣಮಟ್ಟಕ್ಕೆ ತಕ್ಕಂತೆ ಕೆಲಸ ಮಾಡಲಾಗದೆ ಅದನ್ನು ಮುಂದೂಡುತ್ತಿದ್ದೀರಾ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಿಮಗಿಷ್ಟವಿಲ್ಲದ ಕೆಲಸವನ್ನು ಮಾಡುವಂತೆ ಇತರರು ಒತ್ತಾಯಿಸಿದರೆ ಅದರಿಂದ ಕುಪಿತಗೊಳ್ಳುತ್ತಿದ್ದೀರಾ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮುಖ್ಯ ಕೆಲಸಗಳನ್ನು ಮಾಡಲು ಕೊನೆಗಳಿಗೆಯ ವರೆಗೆ ಕಾದು ನಂತರ ಮಾಡುತ್ತೀರಾ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನೀವು ನಿರ್ವಹಿಸಬೇಕಾದ ಕೆಲಸಗಳೇ ಸಾಕಷ್ಟು ಇರುವಾಗ ಮತ್ತೊಬ್ಬರ ಕೋರಿಕೆಯನ್ನು ನಿರಾಕರಿಸಲು ನಿಮ್ಮಿಂದ ಸಾಧ್ಯವಿಲ್ಲವೆ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅಥವಾ ಮತ್ತೊಬ್ಬರನ್ನು ಮೆಚ್ಚಿಸಲು ಅವರು ಹೇಳುವ ಕೆಲಸವನ್ನು ಮಾಡುತ್ತೇನೆ ಎಂದು ಒಪ್ಪಿಕೊಂಡು ಅದನ್ನು ನಿಗದಿತ ಸಮಯದಲ್ಲಿ ಮಾಡಲು ಸಾಧ್ಯವಾಗದೆ ಅವರಲ್ಲಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ಆಗಾಗ ಉದ್ಭವಿಸುತ್ತಿದೆಯೇ\u003c\/span\u003e\u003cspan lang=\"EN-US\"\u003e?\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಇವುಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ನಿಮ್ಮ ಉತ್ತರ\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003e`\u003c\/span\u003e\u003cspan lang=\"KN\"\u003eಹೌದು\u003c\/span\u003e\u003cspan lang=\"EN-US\"\u003e'\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಎಂದಾದರೆ ನಿಮ್ಮಲ್ಲಿ ಮುಂದೂಡುವ (ಪ್ರೊಕ್ರ್ಯಾಸ್ಟಿನೇಶನ್) ವರ್ತನೆ ಎಂದರ್ಥ. ಮುಂದೂಡುವುದು ಪ್ರತಿಯೊಬ್ಬರಲ್ಲೂ ಕಂಡುಬರುವ ವರ್ತನೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆದರೆ ಅದೇ ಒಂದು ರೂಢಿ ಆಗಿಬಿಟ್ಟರೆ ನೀವು ನಾನಾ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿಶ್ವಾದ್ಯಂತ ಶೇಕಡಾ 20ರಷ್ಟು ಜನರು ಈ ದೀರ್ಘಕಾಲಿಕ (\u003c\/span\u003e\u003cspan lang=\"EN-US\"\u003eChronic Procrastination)\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮುಂದೂಡುವ ರೂಢಿಗೆ ಬಲಿಯಾಗಿದ್ದಾರೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eನಿಮ್ಮಲ್ಲಿ ಮುಂದೂಡುವ ಪ್ರವೃತ್ತಿ ಇದ್ದಲ್ಲಿ ಅದಕ್ಕೆ ವ್ಯಥೆ ಪಡಬೇಕಿಲ್ಲ. ಈ ಸಮಸ್ಯೆ ಕುರಿತು ವಿಜ್ಞಾನಿಗಳು ಮತ್ತು ಮನೋಶಾಸ್ತ್ರಜ್ಞರು ದೀರ್ಘ ಅಧ್ಯಯನ ನಡೆಸಿ ಆ ವ್ಯೂಹದಿಂದ ಹೊರಬರಲು ಅನೇಕ ಮಾರ್ಗ ಸೂಚಿಸಿದ್ದಾರೆ. ಅವುಗಳಲ್ಲಿ ನಿಮಗಿಷ್ಟವಾದ ಸೂಚನೆಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದೂಡುವ ಅಭ್ಯಾಸದಿಂದ ಹೊರಬರಲು ಸಾಧ್ಯವಿದೆ. ಇನ್ನೇಕೆ ತಡ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಈ ಪುಸ್ತಕ ಓದಲು ಆರಂಭಿಸಿ. ಅದನ್ನೂ ಮುಂದೂಡಬೇಡಿ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49341911433499,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/munduduvudannu-tadegattuvudu-hege-9390949.jpg?v=1767533225","url":"https:\/\/beetlebookshop.com\/kn\/products\/munduduvudannu-tadegattuvudu-hege","provider":"Beetle Book Shop","version":"1.0","type":"link"}