ಹೆಚ್ಚುವರಿ ಮಾಹಿತಿ
ವಿವರಣೆ
"ಹೇ, ಇದೆಲ್ಲ ಏನು ಕಣ್ರೀ!” ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲ್ಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನು ನಡೆಸಿದ್ದ ಅನ್ನಪೂರ್ಣ ಅಂದು ಇಹಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ದೇಹವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ. ಗುಸುಗುಸು ಅನ್ನಪೂರ್ಣರ ತಮ್ಮನ ಕಿವಿಗೆ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಮ್ಮ ಅಪ್ಪನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ. ಆಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವಿಕೆಯ ಮಾಹಿತಿಯಿದ್ದರೂ ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಶಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ "ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರ ಜೊತೆನಾದರೂ ಇರು, ಖುಷಿಯಾಗಿರು, ಆದರೆ ನನಗಿಂತ ಮುಂಚೆ ಈ ಭೂಮಿ ಬಿಟ್ಟೋಗಬೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ'. ಹೇಳು ಯಾಕೆ ಬಿಟ್ಟೋದೇ!” ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ. #ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ. ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್... - ಅರ್ಜುನ್ ದೇವಾಲದಕೆರೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.