{"product_id":"mithya-sukha-novel","title":"ಮಿಥ್ಯಾ ಸುಖ ( ಕಾದಂಬರಿ )","description":"\u003cp\u003eನಮ್ಮೊಡನೆ ಜೈವಿಕವಾಗಿ ಹೆಣೆದುಕೊಂಡಿರದ ಆದರೆ ನಾವು ಅನಿವಾರ್ಯವಾಗಿ ಕಟ್ಟಿಕೊಂಡ ಬದುಕಿನ ದೈನಿಕ ಲಯಗಳಲ್ಲಿ ಏನನ್ನೊ ಹುಡುಕುವುದು; ಅನೂಹ್ಯವಾದ, ಅತೀತವಾದ ಹಾಗೆಯೇ ಅಗಮ್ಯವಾದ ಮತ್ತಾವುದೋ ಸೆಳೆತಕ್ಕೆ ಈ ದೈನಿಕ ಲಯಗಳ ನಡುವೆ ಸಿಲುಕುವುದು; ಈ ಎರಡು ತುಯ್ತಗಳ ನಡುವೆ ಸಾಗುವ ಕಥನವಿದು. ಈ ಸೆಳೆತ ಕಾಣದುದರ ಎಡೆಗಿನ ತುಯ್ತವೋ ಅಥವಾ ಕಳೆದ ಅನುಭವವೊಂದರ ಮರುಕಳಿಕೆಯೋ ಎಂಬ ದ್ವಂದ್ವ ಕಾಣುತ್ತದೆ.\u003c\/p\u003e\n\u003cp\u003eದೈನಿಕ ಲಯಗಳ ನಿರೂಪಣೆಯಲ್ಲಿ ನಿರೂಪಕರು ಹೊರಗೆ ನಿಂತು ನೋಡುವ, ಮತ್ತು ಒಳಹೊಕ್ಕು ವಿವರಿಸುವುದನ್ನು ಎಚ್ಚರದಿಂದ ನಿವಾರಿಸಿಕೊಳ್ಳುವ ನೆಲೆಯನ್ನು ಅನುಸರಿಸುತ್ತಾರೆ. ಆದರೆ ಈ ದೈನಿಕ ಲಯಗಳ ನಡುವೆ ತಲೆಯೆತ್ತುವ ದೂರದ ಕರೆಯು ಪದಗಳಲ್ಲಿ, ಕವಿತೆಗಳಲ್ಲಿ, ನಾದದಲ್ಲಿ ಮೈಮುರಿದೇಳುತ್ತಿರುತ್ತದೆ. ಈ ಸೆಳೆತದ ಉತ್ಕಟತೆಗಳು ಒಂದು ಕಡೆ. ಆ ದೂರದ ಕರೆಯು ವಾಸ್ತವವಾಗಿ ಮೈದಳೆಯುವಾಗಿನ ಅನುಭವದಲ್ಲಿ ದಿಟ ಸಟೆಗಳ ನಡುವಣ ಗಡಿಗೆರೆಗಳು ಅಳಿಸಿ ಹೋಗುವುದು ಇನ್ನೊಂದು ಕಡೆ. ಈ ಎರಡು ತುದಿಗಳ ನಡುವಣ ಶೋಧವೇ ಈ ಕಾದಂಬರಿಯ ಗುರಿ ಎಂದು ತಿಳಿದಿರುವೆ.\u003c\/p\u003e\n\u003cp\u003eಅನುಭವ ಕಥನದ ನುಡಿಗಟ್ಟಿಗೂ ಅನುಭವ ಮಂಥನದ ನುಡಿಗಟ್ಟಿಗೂ ಇಲ್ಲಿ ಅಪಾರ ವ್ಯತ್ಯಾಸವಿದೆ. ಅನುಭವ ಕಥನದಲ್ಲಿ ಲೋಕದ ಬಿಂಬವಾಗಲು ನುಡಿಯು ಹವಣಿಸುತ್ತದೆ. ಆದರೆ ಅನುಭವ ಮಂಥನದಲ್ಲಿ ನುಡಿಯು ಮೈದಳೆಯುವ ಮೂಲಕವೇ ಅನುಭವವು ಆಕಾರ ಪಡೆಯುತ್ತದೆ. ಇದೇ ಕಾರಣದಿಂದ ಈ ಎರಡನೆಯ ನೆಲೆಯ ನಿರೂಪಣೆಯು ತೀವ್ರಗೊಂಡಾಗ ಕವಿತೆಗಳಾಗಿ ಮಾರ್ಪಡುವುದನ್ನು ಕಾಣುತ್ತೇವೆ.\u003c\/p\u003e\n\u003cp\u003eಅನುಭವ ಶೋಧದ ಹೊಸ ಮಾದರಿಯನ್ನು ಈ ಕಾದಂಬರಿಯಲ್ಲಿ ಭಾಷಿಕವಾಗಿ ಶೋಧಿಸಿರುವ ಕಾವ್ಯಾ ಕಡಮೆಯವರನ್ನು ಅಭಿನಂದಿಸಲೇಬೇಕು.\u003c\/p\u003e\n\u003cp\u003eಕೆ. ವಿ. ನಾರಾಯಣ\u003c\/p\u003e","brand":"BEETLE BOOK SHOP","offers":[{"title":"Default Title","offer_id":49990414795035,"sku":"","price":292.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mithya-sukha-novel-3414043.jpg?v=1767530885","url":"https:\/\/beetlebookshop.com\/kn\/products\/mithya-sukha-novel","provider":"Beetle Book Shop","version":"1.0","type":"link"}