{"product_id":"mithileya-maavina-mara","title":"ಮಿಥಿಲೆಯ ಮಾವಿನ ಮರ | Mithileya Maavina Mara","description":"\u003cp\u003eನೆಲ್ಲುಕುಂಟೆ ವೆಂಕಟೇಶ್ ಕಾವ್ಯದಲ್ಲಿ, ಬಿಡದೆ ಬೆನ್ನಟ್ಟಿ ಬರುವ ಕಡಲ ತೆರೆಗಳಂತಹ ರೂಪಕಗಳು, ಪ್ರತಿಮೆಗಳು, ಕವಿಯ ಕಾಲಘಟ್ಟದ ತಳಮಳವನ್ನು ಲಯಗಾರಿಕೆಯ ಸಮೇತ ನಮಗೆ ತಲುಪಿಸುತ್ತವೆ. ವೆಂಕಟೇಶ್ ಹೊರತರುತ್ತಿರುವ ಮೊದಲ ಕೃತಿ ಇದು. ಪತ್ರಿಕೆಗಳಲ್ಲಿ ಬರೆದ ಬರವಣಿಗೆಗಳ ಲೆಕ್ಕದಲ್ಲಿ ಹೇಳಬೇಕೆಂದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪುಸ್ತಕ ಪ್ರಕಟಣೆಗೂ ಮೊದಲೇ ಬಹಳ ಭರವಸೆ ಮೂಡಿಸಿರುವ ಕವಿ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡ ಪ್ರತಿ ಕವನವನ್ನೂ ಓದಿ ಮೆಚ್ಚಿಕೊಂಡ ಕಾವ್ಯದ ಗಂಭೀರ ಓದುಗರು ಆಗಿಂದಾಗಲೇ ವ್ಯಕ್ತಪಡಿಸಿರುವ ಮೆಚ್ಚುಗೆ ವೆಂಕಟೇಶ್ ಅವರ ಗಾಢಾಭಿವ್ಯಕ್ತಿಗೊಂದು ಮಾನಪತ್ರ.\u003c\/p\u003e\n\u003cp\u003e- ಬಂಜಗೆರೆ ಜಯಪ್ರಕಾಶ\u003c\/p\u003e","brand":"ಆಕೃತಿ ಪುಸ್ತಕ | Akruti Pusthak","offers":[{"title":"Default Title","offer_id":52000362529051,"sku":null,"price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-04at7.19.19AM.jpg?v=1775267378","url":"https:\/\/beetlebookshop.com\/kn\/products\/mithileya-maavina-mara","provider":"Beetle Book Shop","version":"1.0","type":"link"}