ಹೆಚ್ಚುವರಿ ಮಾಹಿತಿ
ವಿವರಣೆ
ಉರ್ದು ಮತ್ತು ಪರ್ಶಿಯನ್ ಕಾವ್ಯದ ರಸಾನುಭವದ ಸೊಗಡನ್ನು ತನ್ನ ಕವಿತೆಯ ಮೂಲಕ ಕಟ್ಟಿಕೊಟ್ಟ ಅಪ್ರತಿಮ ಕವಿ ಮಿರ್ಜಾ ಗಾಲಿಬ್, ಬಣ್ಣನೆಗೆ ನಿಲುಕದ ವ್ಯಕ್ತಿತ್ವದ ಗಾಲಿಬ್ ಒಬ್ಬ ತುಂಬು ರಸಜ್ಞ ಬದುಕಿನ ರಂಜಕತೆಯೊಟ್ಟಿಗೆ ಅದರ ಅಸಹಾಯತನ, ದೌರ್ಜನ್ಯಗಳ ತಲ್ಲಣಗಳನ್ನು ಅನುಭವಿಸಿದವನು. ತನ್ನನ್ನೇ ಲೇವಡಿಗೊಳಪಡಿಸಿ ಕಾವ್ಯದ ಮೂಲಕ ಸ್ವವಿಮರ್ಶೆಗೊಳಗಾದ ಕವಿ. ಬದುಕು ಕಾವ್ಯದಲ್ಲಿಯ ಆ ವ್ಯಂಗ್ಯದ ಮಿಣುಕು ಬೆಳಕುಗಳು ಆತ್ಮವನ್ನು ತಟ್ಟುತ್ತದೆಂಬುದನ್ನು ಈ ಕೃತಿ ಸಾಬೀತುಪಡಿಸುತ್ತದೆ.
ಜಗದೀಶ್ ಕೊಪ್ಪ ನೀಡಿದ ಗಾಲಿಬ್‌ನ ಕಥನ ನಿರೂಪಣೆ ನಮ್ಮನ್ನು ಇತಿಹಾಸಕ್ಕೆ ಕೊಂಡೊಯ್ಯುತ್ತದೆ. ದಿಲ್ಲಿಯ ವೈಭವ ಮತ್ತು ಪತನಗಳಿಗೆ ಸಾಕ್ಷಿಯಾದ ಗಾಲಿಬ್ ತುಡಿತಗಳು ಮನದಲ್ಲಿ ಇಂಗುತ್ತವೆ. ಸಿಪಾಯಿದಂಗೆಯ ಮಾರಣಹೋಮದ ಸತ್ಯದ ತುಣುಕುಗಳನ್ನು, ಮೊಗಲ್ ಅರಸರು ಬೀದಿಪಾಲಾದ, ನೇಣಿಗೇರಿದ ವಿವರಗಳನ್ನು ತೀವ್ರ ಪರಿಣಾಮಕಾರಿ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಜಗದೀಶ್ ಕೊಪ್ಪ ಗದ್ಯಕ್ಕೆ ಕಾವ್ಯದ ಸ್ಪರ್ಶ ದಕ್ಕಿರುವುದರಿಂದಲೇ ಇಡೀ ಘಟನಾವಳಿಗಳು ದಟ್ಟ ಅನುಭವಗಳ ಗುಂಗಿನಲ್ಲಿ ಅದ್ದಿದಂತಿದೆ. ಒಂದೆಡೆ ಗಾಲಿಬ್‌ನ ಖುಷಿ, ಹತಾಶೆ, ಕಳವಳಗಳು, ಇನ್ನೊಂದೆಡೆ ಬ್ರಿಟೀಷರ ಅಟ್ಟಹಾಸದ ಠೇಂಕಾರಗಳು ಹೃದಯ ತಲ್ಲಣಿಸುವಂತಿವೆ. ಗಾಲಿಬ್‌ನ ಮಧುಶಾಲೆ ಹಾಗೂ ದಿಲ್ಲಿಯ ಮಾಯೆಯು ವಿಶಿಷ್ಟ ಅನುಭವದ ಅಂಗಳಕ್ಕೆ ತಂದು ನಿಲ್ಲಿಸುತ್ತದೆ.
ಗಾಲಿಬ್ ಉರ್ದು, ಪರ್ಶಿಯನ್ ಭಾಷೆಯ ಪಂಡಿತ. ತನ್ನ ಕಾವ್ಯದಲ್ಲಿ ಇವೆರಡನ್ನೂ ಹದವಾಗಿ ಬೆರೆಸಿ ಕಟ್ಟಿದ ಕಾವ್ಯದ ಗಂಭೀರತೆ ಮತ್ತು ಲಾಲಿತ್ಯಕ್ಕೆ ಗುಲಗಂಜಿಯಷ್ಟು ಧಕ್ಕೆ ಬರದಂತೆ ಸಹಜವಾಗಿ ಕನ್ನಡಕ್ಕೆ ಜಗದೀಶ್ ಕೊಪ್ಪ ತಂದಿದ್ದಾರೆ. ಗಾಲಿಬ್‌ನ ಅನುಭವ ಆಳವ ಬಗೆದು ಕವಿತೆಯಲ್ಲಿ ಸುರಿದಿದ್ದಾರೆ. ಕಾವ್ಯದ ಮೂಲ ಆತ್ಮದ ಸಾಕ್ಷಾತ್ಕಾರವು ಅವರ ಬರಹದಲ್ಲಿ ಸಾಧ್ಯವಾಗಿದೆ.
_ ಡಿ.ಎಸ್. ಚೌಗಲೆ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.