{"product_id":"meesalatiya-olanota","title":"ಮೀಸಲಾತಿಯ ಒಳನೋಟ","description":"\u003cp\u003eಮೀಸಲಾತಿ ಕುರಿತು ಚಿಂತನಾ ಬರಹಗಳು\u003cbr\u003e\u003cbr\u003eಮೀಸಲಾತಿಯ ಒಳನೋಟ | Meesalatiya Olanota\u003cbr\u003eಲೇಖಕರು: ಲಿಂಗಪ್ಪ ಕೆ ಎನ್, Lingappa K N\u003cbr\u003e\u003cbr\u003e********************\u003cbr\u003e\u003c\/p\u003e\n\u003cp\u003eಸಂವಿಧಾನದ ಮೂಲ ಆಶಯಗಳಾಗಲಿ ತಮಗೆ ಸಿಗಬೇಕಾದ ಮೂಲಭೂತ ಹಕ್ಕುಗಳೇ ಮುಂತಾದ ಮೀಸಲಾತಿ, ಸರ್ಕಾರಿ ನೆರವು, ಅನುದಾನಗಳ ಪರಿಜ್ಞಾನವೂ ಇಲ್ಲ. ತಮ್ಮ ಹಕ್ಕುಗಳನ್ನು ಯಾರೋ ಕಸಿಯುತ್ತಿದ್ದಾರೆಂಬ ಕನಿಷ್ಠ ಅರಿವೂ ಇಲ್ಲ!.. ಹಿಂದುಳಿದ ವರ್ಗಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಸಿಗಬೇಕಾದ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಾನಮಾನಗಳೂ ಸಿಕ್ಕಿಲ್ಲ! ಇನ್ನು ರಾಜಕೀಯ ಪ್ರಾತಿನಿಧ್ಯ ವಂತೂ ಇಲ್ಲವೇ ಇಲ್ಲ!?\u003c\/p\u003e\n\u003cp\u003eಯಾವುದರ ಪರಿಜ್ಞಾನವೂ ಇಲ್ಲದೆ ಹಿಂದುಳಿದ ವರ್ಗಗಳಿಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲೇ ಇಲ್ಲ. ಆದ್ದರಿಂದಲೇ ಈ ಕುರಿತ ಸಾಹಿತ್ಯ, ಭಾಷಣ. ಬರಹಗಳು ಬರಲೇ ಇಲ್ಲ! ಇಂತಹ ಬರಗೆಟ್ಟ ಹಿನ್ನೆಲೆಯಲ್ಲಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಿದಂತೆ ನಮ್ಮ ಅಂಗಪ್ಪನವರ 'ಮೀಸಲಾತಿಯ ಒಳನೋಟ' ಪುಸ್ತಕ ಬಂದಿದೆ.\u003c\/p\u003e\n\u003cp\u003e...ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ. ಅವುಗಳಿಗೆ ಪರಿಹಾರಗಳನ್ನು ಸೂಚಿಸುವ, ಇದರ ಮಧ್ಯೆ ಢಾಳಾಗಿ ಕಾಣುವ ಮೇಲ್ವರ್ಗಗಳ ರಾಜಕಾರಣ, ನ್ಯಾಯಾಲಯಗಳ ತೀರ್ಪುಗಳು, ಸಂವಿಧಾನದ ಅನುಚ್ಛೇದಗಳು ಪೂರಕ ವಿಶ್ಲೇಷಣೆ, ಹಿಂದುಳಿದ ವರ್ಗಗಳ ಅಸ್ಥಿತೆಯ ಕುರಿತಂತೆ ಪ್ರತಿ ಲೇಖನದಲ್ಲೂ ವಿಶ್ಲೇಷಿಸಲಾಗಿದೆ.\u003c\/p\u003e\n\u003cp\u003eನನಗೆ ಈ ಪುಸ್ತಕ.. ಇಷ್ಟೊಂದು ಮುಖ್ಯ ಎನಿಸಿದ್ದು ಯಾಕೆಂದರೆ.. ಆಯ್ಕೆಮಾಡಿಕೊಂಡ ವಿಶೇಷ ವಿಷಯಗಳು.. ನನಗೆ ತಿಳಿದಂತೆ ಕನ್ನಡದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ವಿವರಗಳಿರುವ ಪುಸ್ತಕ ಇದೊಂದೇ ಅನಿಸುತ್ತದೆ.. ಇದನ್ನು ಪ್ರತಿಯೊಬ್ಬ ಹಿಂದುಳಿದವರೂ ಓದಬೇಕು.\u003c\/p\u003e\n\u003cp\u003eಡಾ. ಸಿ. ಎಸ್. ದ್ವಾರಕಾನಾಥ್\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51399802585371,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/meesalatiya-olanota-5412695.jpg?v=1767528185","url":"https:\/\/beetlebookshop.com\/kn\/products\/meesalatiya-olanota","provider":"Beetle Book Shop","version":"1.0","type":"link"}