{"product_id":"majedaar-maicroscopu","title":"ಮಜೇದಾರ್ ಮೈಕ್ರೊಸ್ಕೋಪು","description":"ವಿಜ್ಞಾನ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ವಿಜ್ಞಾನ ನಮ್ಮ ಬದುಕನ್ನು ವ್ಯಾಪಕವಾಗಿ ಪ್ರಭಾವಿಸುವುದರಿಂದ, ಅಲ್ಲಿನ ಅನೇಕ ವಿಷಯಗಳನ್ನು ತಿಳಿದು ಕೊಂಡಿರುವುದು ಅನಿವಾರ್ಯವೇ ಆಗಿಬಿಟ್ಟಿದೆ. ಇಂದಿನ ಕಾಲದಲ್ಲಿ ಮಾಹಿತಿಯೇನೋ ಸುಲಭ ಲಭ್ಯ, ಆದರೆ ಆ ಮಾಹಿತಿಯನ್ನೆಲ್ಲ ಹುಡುಕಿಕೊಳ್ಳುವುದು, ಅರ್ಥಮಾಡಿ\n\u003cdiv\u003eಕೊಳ್ಳುವುದು, ಅರಗಿಸಿಕೊಳ್ಳುವುದು ಹೇಗೆ? ಇದು ಅನೇಕರನ್ನು ಕಾಡುವ ಸಮಸ್ಯೆ. ಅತ್ಯಂತ ವಿಸ್ತಾರವಾಗಿ ಬೆಳೆದಿರುವ ವಿಜ್ಞಾನಲೋಕ ಜನಸಾಮಾನ್ಯರನ್ನು ಅತ್ಯಂತ ಸುಲಭವಾಗಿ ಗೊಂದಲಕ್ಕೆ ದೂಡಬಲ್ಲದು. ಅಂತರಜಾಲದಲ್ಲಿರುವ ಮಾಹಿತಿಯ ಸಾಗರ\u003c\/div\u003e\n\u003cdiv\u003eಸುಳ್ಳು-ಸತ್ಯಗಳನ್ನೆಲ್ಲ ಒಂದೇ ರೀತಿಯಾಗಿ ತೋರಿಸಿ ದಿಕ್ಕುತಪ್ಪಿಸಲೂ ಬಹುದು. ಇನ್ನು, ಸಂಶೋಧನಾ ಪ್ರಬಂಧಗಳನ್ನೇ ಓದುತ್ತೇವೆಂದು ಹೊರಟರೆ ಅವನ್ನೆಲ್ಲ ಓದಲು, ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವೆ?\u003c\/div\u003e\n\u003cdiv\u003eಈ ಪರಿಸ್ಥಿತಿಯನ್ನು ಬದಲಿಸುವ ಉದ್ದೇಶದಿಂದ, ಹೊಸ ಸಂಶೋಧನೆಗಳು ಹಾಗೂ ಅವು ನಮ್ಮ ಮೇಲೆ ಬೀರಬಹುದಾದ ಪ್ರಭಾವದ ಸಾರವನ್ನು ಜನಸಾಮಾನ್ಯರಿಗೂ ಸರಳವಾಗಿ ಅರ್ಥಮಾಡಿಸುವ ಪ್ರಯತ್ನಗಳು ಇಂಗ್ಲಿಷಿನಲ್ಲಿ ನಡೆಯುತ್ತಿವೆ. ಆದರೆ ಕನ್ನಡದಲ್ಲಿ ಹಾಗೆ ಪಾಠ ಹೇಳಿಕೊಡುವ ಮೇಷ್ಟ್ರುಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.\u003c\/div\u003e\n\u003cdiv\u003eಅಂಥದೊಂದು ಅಪರೂಪದ ಪ್ರಭೇದಕ್ಕೆ ಸೇರಿದ ಶರ್ಮಾ ಮೇಷ್ಟ್ರ ಬರಹಗಳು-ವಿಜ್ಞಾನದ\u003c\/div\u003e\n\u003cdiv\u003eಗಂಭೀರ ವಿಷಯಗಳನ್ನೇ ಒಳಗೊಂಡಿದ್ದರೂ ನಮಗಿಷ್ಟವಾಗುತ್ತವೆ. ಸುಲಭಕ್ಕೆ ಅರ್ಥವಾಗುತ್ತವೆ.\u003c\/div\u003e\n\u003cdiv\u003eಈ ಬರಹಗಳು ಹಬೆಯಾಡುವ ಬಿಸಿ ಇಡ್ಲಿ ಮತ್ತು ಸೊಗಸಾದ ಚಟ್ಟಿಯ ಜೋಡಿಯಂತೆ:\u003c\/div\u003e\n\u003cdiv\u003eಓದಲು ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಟಿ. ಜಿ. ಶ್ರೀನಿಧಿ\u003c\/div\u003e","brand":"BEETLE BOOK SHOP","offers":[{"title":"Default Title","offer_id":44563163873563,"sku":"","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/majedaar-maicroscopu-5835809.jpg?v=1767537005","url":"https:\/\/beetlebookshop.com\/kn\/products\/majedaar-maicroscopu","provider":"Beetle Book Shop","version":"1.0","type":"link"}