{"product_id":"mai-mana","title":"ಮೈ ಮನ","description":"\"ಮೈ-ಮನ\" ಎಂಬ ಕವನ ಸಂಕಲನವು ಸಂಪೂರ್ಣವಾಗಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತಾದ ಕವಿತೆಗಳನ್ನು ಒಳಗೊಂಡಿದೆ. ಈ ಸಮುದಾಯದ ಮೇಲೆ ಬೆಳಕು ಚೆಲ್ಲುವ ಮೂಲಕ,\u003cbr data-mce-fragment=\"1\"\u003e\u003cbr data-mce-fragment=\"1\"\u003e* ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವೈವಿಧ್ಯತೆಗಳನ್ನು ಹಾಗೂ ಹಲವು ಹೆಸರುಗಳನ್ನು ಪರಿಚಯಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ಲಿಂಗ-ಲಿಂಗತ್ವ-ಲೈಂಗಿಕತೆ ಮೊದಲಾದ ಪರಿಕಲ್ಪನೆಗಳನ್ನು ಕಾವ್ಯಮಯವಾಗಿ ಸ್ಪಷ್ಟಗೊಳಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ನಮ್ಮ ಸಮುದಾಯದ ಪೌರಾಣಿಕ ಹಿನ್ನೆಲೆಯನ್ನು ಸ್ಮರಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ನಮ್ಮ ಸಮುದಾಯದ ಹೋರಾಟದ ಮೈಲುಗಲ್ಲುಗಳನ್ನು ದಾಖಲಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ಮೈ-ಮನಗಳ ಅಪಹೊಂದಾಣಿಕೆಯಿಂದ ನಮ್ಮ ಸಮುದಾಯದ ವ್ಯಕ್ತಿಗಳಲ್ಲಿ ಆಗುವ ಮಾನಸಿಕ ಸಂಘರ್ಷ, ಕುಟುಂಬ, ಸಂಬಂಧಿಕರು, ನೆರೆಹೊರೆ ಮತ್ತು ಸಮಾಜದ ಜೊತೆಗಿನ ನಿರಂತರ ಹೋರಾಟದ ಮುಖಗಳನ್ನು ಅನಾವರಣಗೊಳಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ನಮ್ಮ ಸಮುದಾಯದ ಭಾವನಾತ್ಮಕ, ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಪ್ರದಾಯಿಕ-ಸಾಂಸ್ಕೃತಿಕ, ವೃತ್ತಿ ಜೀವನಗಳ ಕುರಿತು ನಮ್ಮ ಸಮುದಾಯಕ್ಕೆ ಮತ್ತು ಸಮುದಾಯೇತರ ಸಮಾಜಕ್ಕೆ ಅರಿವು ಮೂಡಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ನಮ್ಮ ಸಮುದಾಯಕ್ಕೆ ಸಂಬಂಧಿಸಿದ ನೂರೊಂದು ನೆನಪುಗಳು, ಪ್ರೀತಿ-ಪ್ರಣಯ-ಮೋಸ, ಆಸೆ-ಆಕಾಂಕ್ಷೆ-ಅಭಿರುಚಿ, ಸಂಗಾತಿ-ವಿವಾಹ-ವಿವಾದ, ಕಾನೂನು-ನ್ಯಾಯ-ಶಿಕ್ಷೆ, ಸ್ವೀಕಾರ-ಬಹಿಷ್ಕಾರ, ಬದುಕು-ಸಾವುಗಳ ವಿಮರ್ಶೆ, ಸೋತೂ ಗೆಲ್ಲುವ, ಗೆದ್ದು ಸೋಲುವ ಪ್ರಸಂಗಗಳನ್ನು ಚರ್ಚಿಸುವುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e* ಸಂಘ-ಸಂಸ್ಥೆಗಳಿಗೆ, ರಾಜ್ಯ-ಕೇಂದ್ರ ಸರ್ಕಾರಗಳಿಗೆ ನಮ್ಮನ್ನು ಪರಿಚಯಿಸಿ ನಮ್ಮ ಬಗೆಗಿನ ಅವರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನೆನಪಿಸುವುದು.\u003cbr data-mce-fragment=\"1\"\u003e","brand":"BEETLE BOOK SHOP","offers":[{"title":"Default Title","offer_id":47363087401243,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mai-mana-1090833.png?v=1767534605","url":"https:\/\/beetlebookshop.com\/kn\/products\/mai-mana","provider":"Beetle Book Shop","version":"1.0","type":"link"}