ಹೆಚ್ಚುವರಿ ಮಾಹಿತಿ
ವಿವರಣೆ
ಗಂಗಿರೆಡ್ಡಿಗೆ ತನ್ನ ಅಣ್ಣನ ಮುಖವನ್ನು ನೋಡಬೇಕನಿಸಲಿಲ್ಲ. ಬಹಳ ಹೊತ್ತು ಏನೂ ಮಾತನಾಡದೆ ಕುಳಿತುಬಿಟ್ಟ, ಕಂಗಳು ಒದ್ದೆಯಾಗತೊಡಗಿದವು. ಬಿಕ್ಕಿ ಬಿಕ್ಕಿ ಅಳಬೇಕನಿಸಿತು. ಒಮ್ಮೆ ತಲೆಯೆತ್ತಿ ನೋಡಿದ. ಅವನ ಒಪ್ಪಿಗೆಗಾಗಿ ಅಲ್ಲಿದ್ದವರು ಕಾತುರದಿಂದ ಕಾದಿರುವಂತೆ ನೋಡುತ್ತಲಿದ್ದರು. ಗಂಗಿರೆಡ್ಡಿ ತನಗ್ಯಾರ ಗೊಡವೆಯೂ ಬೇಡವೆಂಬಂತೆ ಎದ್ದು ನಿಂತು ಆಚೆ ನಡೆಯತೊಡಗಿದೆ. ದೇವರೆಡ್ಡಿಯ ಕೂಗೂ ಅವನಿಗೆ ಕೇಳಿಸದ ವೇಗದಲ್ಲಿ ಅಚೆ ನಡೆದು ಪಟ್ಟಣದ ಹೃದಯ ಭಾಗಕ್ಕೆ ನುಗ್ಗಿದೆ. ಅಂದು ಭಾನುವಾರವಾದ್ದರಿಂದ ದಟ್ಟಣೆ ಜೋರಾಗಿತ್ತು. ಸಂತೆಯ ಕಾರಣದಿಂದ ಪಟ್ಟಣದ ರಸ್ತೆಗಳು ಕೊಟ್ಟಿದ್ದವು. ಗಂಗಿರೆಡ್ಡಿ ಪಟ್ಟಣದ ಮುಖ್ಯ ವೃತ್ತದ ನಡುವಿಗೆ ಬಂದು ನಿಂತು ಆಕಾಶ ನೋಡತೊಡಗಿದ.
ನಾಲ್ಕೂ ದಿಕ್ಕುಗಳಿಂದ ವಾಹನಗಳ ಸದ್ದು ಮುಗಿಲು ಮುಟ್ಟತೊಡಗಿತು. ಅವನು ಕದಲದೆ ನಿಂತೇ ಇದ್ದ. ವಾಹನಗಳ ಸದ್ದು ಮತ್ತೂ ಜೋರಾಯಿತು. ಟ್ರಾಫಿಕ್ ಸಿಗ್ನಲ್ಲಿನ ದೀಪಗಳು ತಮ್ಮ ಪಾಡಿಗೆ ತಾವು ಬಣ್ಣ ಬದಲಿಸುತ್ತಲಿದ್ದವು. ಗಂಗಿರೆಡ್ಡಿ ತಲೆಯನ್ನು ಮತ್ತೂ ಮೇಲಕ್ಕೆ ಎತ್ತಿ 'ಶನಿರಾಜಾ ಬಂದಾನು ಉಜ್ಜಯಿನೀ ನಗರಿಗೇ... ಘನವಾದ ಅಶ್ವವನು ಕಲಿರಾಜ ತಾರೇ... ಬೇಕಾದ ಬೇಪಾರಿ ಜನರೆಲ್ಲ ಕೂಡಲೂ... ವಿಕ್ರಮರಾಜಾ ತಾನೂ....' ಎಂದು ಜೋರಾಗಿ ಹಾಡತೊಡಗಿದೆ. ವಾಹನಗಳ ಸದ್ದಿನ ದಟ್ಟಣೆಯ ಇಕ್ಕಟ್ಟಿನಲ್ಲಿ ಅವನ ಹಾಡು ಊರ್ಧ್ವರೇಖೆಯಲ್ಲಿ ಚಲಿಸಿ ಆಕಾಶದ ನೀಲಿಯಲ್ಲಿ ನೀಲಿಯಾಗಿ ಹಬ್ಬತೊಡಗಿತು.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.