{"product_id":"mahatmara-guru-kudmal-ranga-rao","title":"ಮಹಾತ್ಮರ ಗುರು ಕುದ್ಮಲ್ ರಂಗರಾವ್","description":"\u003cp\u003eಕುದ್ಮುಲ್ ರಂಗರಾವ್ ಮತ್ತು ಕುಟುಂಬದವರು ಈ ದೇಶಕ್ಕೆ ಸಲ್ಲಿಸಿರುವ ಸೇವೆಯು ಅನನ್ಯವಾದುದು, ಅಪಾರವಾದುದು. ಕುದ್ಮುಲ್ ರಂಗರಾವ್ ಅಪ್ರತಿಮ ಸಮಾಜ ಸೇವಕರಾಗಿದ್ದರೆ, ಅವರ ಮಗಳು ರಾಧಾಬಾಯಿ ರಾಜ್ಯಗಳ ಮಂಡಲ ಸಭೆಯಲ್ಲಿ ಮೊತ್ತ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ರಾಧಾ ಅವರ ನಾಲ್ವರು ಮಕ್ಕಳಲ್ಲಿ ಹಿರಿಯರಾದ ಪ್ರಭಾಕರ್ ನಮ್ಮ ಸೇನೆಯ ಮುಖ್ಯಸ್ಥರಾದರು, ಎರಡನೆಯ ಮಗ ಗೋಪಾಲ ಕಲ್ಲಿದ್ದಲು ಪ್ರಾಧಿಕಾರದ ಅಧ್ಯಕ್ಷರಾದರು, ಮಗಳು ಪಾರ್ವತಿ ಮತ್ತು ಮೂರನೆಯ ಮಗ ಮೋಹನ್ ಭಾರತ ಕಮ್ಯುನಿಸ್ಟ್‌ ಪಕ್ಷದ ನಾಯಕರಾದರು.\u003c\/p\u003e\n\u003cp\u003eಕುದ್ಮುಲ್ ರಂಗರಾವ್ (1859-1928) ಅವರು ಶಿಕ್ಷಕರಾಗಿ, ಬಳಿಕ ವಕೀಲರಾಗಿ ಮಂಗಳೂರಿನ ಸುತ್ತಮುತ್ತ ಬಡ, ಅಸ್ಪೃಶ್ಯರ ಮಕ್ಕಳಿಗಾಗಿ ಅನೇಕ ಶಾಲೆಗಳನ್ನು ತೆರೆದರು, ಮಧ್ಯಾಹ್ನದ ಊಟವನ್ನೂ ಕೊಟ್ಟು ಅವರ ಕಲಿಕೆಗೆ ನೆರವಾದರು. ಅನೇಕರನ್ನು ಜೀತಮುಕ್ತಗೊಳಿಸಿದ್ದಲ್ಲದೆ ಗೊಡ್ಡು ಸಂಪ್ರದಾಯಗಳ ವಿರುದ್ಧ ಸದಾ ಸೆಣಸಿದರು.ತನ್ನ ಮಗಳು ರಾಧಾ ಬಾಲವಿಧವೆಯಾದಾಗ ಆಕೆಯ ವಿದ್ಯಾಭ್ಯಾಸವನ್ನು ಉತ್ತೇಜಿಸಿ ಮರುಮದುವೆಯಾಗುವಂತೆ ಮಾಡಿದರು. ಇದು ಮಹಾತ್ಮ ಗಾಂಧಿಯವರಿಗೂ ಪ್ರೇರಣೆಯಾಯಿತು.\u003c\/p\u003e","brand":"BEETLE BOOK SHOP","offers":[{"title":"Default Title","offer_id":50075313471771,"sku":"","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mahatmara-guru-kudmal-ranga-rao-5046054.jpg?v=1767530586","url":"https:\/\/beetlebookshop.com\/kn\/products\/mahatmara-guru-kudmal-ranga-rao","provider":"Beetle Book Shop","version":"1.0","type":"link"}