{"product_id":"maarjaala-mohiniyaru","title":"ಮಾರ್ಜಾಲ ಮೋಹಿನಿಯರು","description":"\u003cdiv class=\"col-lg-12\"\u003e\n\u003cp align=\"left\"\u003eಇಲ್ಲಿಯ ಹಾಸ್ಯ ಲೇಖನಗಳು ಲೇಖಕಿಯ ಸ್ವಾನುಭವಗಳೆನ್ನಬಹುದು. ಅವನ್ನೇ ಸ್ವಲ್ಪ ವಿಸ್ತರಿಸಿ, ಎತ್ತರಿಸಿ, ಅಲ್ಪಸ್ವಲ್ಪ 'ಮೇಕಪ್' ಮಾಡಿಸಿ ಬರೆದಾಗ ಸ್ವಾರಸ್ಯಕರವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಮೊದ ಮೊದಲು ಮುಗುಳುನಗೆ. ಮತ್ತೆ ನಗುವಿನಲೆ, ಮುಂದೆ ಮೆಚ್ಚುಗೆಯ ಹೊಟ್ಟೆ ಹುಣ್ಣಾಗಿಸುವಂಥ ನಗೆ ಉಕ್ಕಿ ಬರುತ್ತದೆ. ನಾವು ತೀರಾ ಸಾಮಾನ್ಯವೆಂದು ಕಡೆಗಣಿಸುವ ಎಳೆಯೊಂದನ್ನು ಹಿಡಿದು ಹಾಸ್ಯ ಲೇಖಕರು ನಗೆ ಉಕ್ಕಿಸಬಲ್ಲರು. ಮುಖ್ಯವಾಗಿ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರಬೇಕಷ್ಟೇ ! ಮೂಲತಃ ಲೇಖಕಿ ಕವಯತ್ರಿಯಾದ್ದರಿಂದ ಅತಿಶಯೋಕ್ತಿಗಳು ಅಲ್ಲಲ್ಲಿ ಇಣುಕುಹಾಕಿ ಮುಖ ತೋರಿಸಿವೆ. ಉಳಿದಂತೆ ವೈವಿಧ್ಯಗಳಿಂದ ಕೂಡಿರುವ ಬರಹಗಳೆಲ್ಲ ಉತ್ತಮವಾಗಿದ್ದು ಓದುಗರು ಮೆಚ್ಚುವಂತಿವೆ.\u003c\/p\u003e\n\u003c\/div\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49017484673307,"sku":"","price":112.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maarjaala-mohiniyaru-1156489.jpg?v=1767532985","url":"https:\/\/beetlebookshop.com\/kn\/products\/maarjaala-mohiniyaru","provider":"Beetle Book Shop","version":"1.0","type":"link"}