{"product_id":"lyatereena-ondanondu-kalada-galiu-prasanga","title":"ಲ್ಯಾಟೆರೀನಾ : ಒಂದಾನೊಂದು ಕಾಲದ ಗಾಳಿಯ ಪ್ರಸಂಗ","description":"\u003cp\u003eಪ್ರತಿಷ್ಠಿತ ಸಮಾಜದ ಹುಸಿ ಮೌಲ್ಯವನ್ನು, ಗಾಂಭೀರ್ಯವನ್ನು ಚುಚ್ಚಿ ವಿಡಂಬಿಸಿ ಘಾಸಿಗೊಳಿಸುವುದರಲ್ಲಿ ನಿಷ್ಣಾತರಾಗಿರುವ ಕುಂವೀಯವರು ಕನ್ನಡ ಕಾದಂಬರಿ ಲೋಕಕ್ಕೆ ವಿನೂತನ ತಿರುವು ನೀಡಿದ ಅಪೂರ್ವ ಕತೆಗಾರ.\u003c\/p\u003e\n\u003cp\u003eಪ್ರತಿ ವರ್ಷ ಒಂದು ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುತ್ತಿರುವ ಅವರು ನಿರ್ಲಕ್ಷಿತ ಸಮುದಾಯಗಳ ಮಾನಾವಮಾನಗಳಿಗೆ ದನಿ ಕೊಟ್ಟು ಮಡಿವಂತರನ್ನು ಗೇಲಿ ಮಾಡಿ ವಿಡಂಬನೆಗೆ ಗುರಿ ಮಾಡುವ ಮೂಲಕ ಸಾಮಾಜಿಕವಾಗಿ ಪ್ರಸ್ತುತವೆನ್ನಿಸಿದ್ದಾರೆ.\u003c\/p\u003e\n\u003cp\u003eಅತಿ ರಂಜಿತ ವರ್ಣನಾ ಶೈಲಿ ಮತ್ತು ಪಾತ್ರವನ್ನು ಭೂತಗನ್ನಡಿಯಲ್ಲಿಟ್ಟು ಹಿಗ್ಗಿಸಿ ನೋಡುವ ಅವರ ನಿರೂಪಣೆ ಉದ್ದೇಶಪೂರ್ವಕವಾಗಿದ್ದು ವಿಡಂಬನಾತ್ಮಕ ಗುರಿ ಹೊಂದಿದೆ.\u003c\/p\u003e\n\u003cp\u003eಪ್ರಸ್ತುತ 'ಲ್ಯಾಟರೀನಾ' ವಸ್ತುವೆ ವಿಶಿಷ್ಟವಾಗಿದ್ದು ಬಹಿಷ್ಕೃತವೆನ್ನಿಸಿದ್ದನ್ನು ಎಗ್ಗಿಲ್ಲದೆ ಚರ್ಚಿಸಿ ಎಲ್ಲರನ್ನು ಗಾಬರಿಗೊಳಿಸುವಂತಿದೆ.\u003c\/p\u003e\n\u003cp\u003eಮಲವಿಸರ್ಜನೆಯಂತಹ ಸಹಜ ದೈಹಿಕ ಕ್ರಿಯೆಯನ್ನು ಮುಚ್ಚುಮರೆಯ ಅಸಹ್ಯದ ಸಂಗಾತಿಯನ್ನಾಗಿಸಿರುವ ಸಾಮಾಜಿಕ ವಾಸ್ತವವನ್ನು ವಿಡಂಬಿಸಿ ಬೃಹತ್ ಕಾದಂಬರಿಯ ವಸ್ತುವಾಗಿಸಿಕೊಂಡು ತನ್ಮೂಲಕ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾದ ರಾಜಕಾರಣಿಗಳು, ಮಠಾಧಿಪತಿಗಳು, ಪತ್ರಕರ್ತರು, ಲೇಖಕರು ಮತ್ತು ಗಾಂಧಿವಾದಿಗಳೆಲ್ಲರನ್ನೂ ಗೇಲಿ ಮಾಡಲಾಗಿದೆ.\u003c\/p\u003e\n\u003cp\u003eಹೆಗಲ ಮೇಲೆ ಮಲ ಹೊತ್ತು ಸಾಗಿಸುವ ಹೆಣ್ಣು ಮಕ್ಕಳ ಪಡಿಪಾಟಲಿಗೆ ಕನಿಕರಿಸುತ್ತಲೇ ಅವರ ಹೊಟ್ಟೆಪಾಡಿನ ಕ್ರೂರ ವಾಸ್ತವವನ್ನೂ ಮನವರಿಕೆ ಮಾಡಿಕೊಡಲಾಗಿದೆ. ಹಂದಿಗಳು, ಎಮ್ಮೆ, ಹಸು, ನಾಯಿಗಳೂ ಶುದ್ದೀಕರಣದಲ್ಲಿ ಪಾಲ್ಗೊಳ್ಳುವ ಚಿತ್ರ ನಮ್ಮ ದೇಶದ ಹುಸಿ ಪ್ರತಿಷ್ಠೆಯನ್ನು ಬಯಲು ಮಾಡುತ್ತದೆ.\u003c\/p\u003e\n\u003cp\u003eಹಾಸ್ಯ ಮತ್ತು ವಿಡಂಬನೆಯೇ ಕಾದಂಬರಿಯ ಸ್ಥಾಯಿಭಾವವೆಂಬಂತಿದ್ದರೂ, ಆಳದಲ್ಲಿ ವ್ಯವಸ್ಥೆಯ ಬಗೆಗೆ ಆಕ್ರೋಶವಿದೆ. ಹುಸಿ ಸಾಮಾಜಿಕ ಪ್ರತಿಷ್ಠೆ ಬಗೆಗೆ ತಿರಸ್ಕಾರವಿದೆ. ಮನಸ್ಸಿನಲ್ಲಿ ತುಂಬಿಕೊಂಡಿರುವ ಗಲೀಜು ಬಾಹ್ಯ ಕೊಳಕಿಗಿಂತ ಅಸಹ್ಯಕಾರಿ ಎಂಬ ಸಂದೇಶದೊಂದಿಗೆ ಕಾದಂಬರಿಗೆ ಅರ್ಥಪೂರ್ಣ ಮುಕ್ತಾಯ ದೊರಕಿಸಿಕೊಡಲಾಗಿದೆ.\u003c\/p\u003e\n\u003cp\u003e* ಡಾ. ಕೆ. ಮರುಳಸಿದ್ದಪ್ಪ\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49290634395931,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/lyatereena-ondanondu-kalada-galiu-prasanga-6891291.jpg?v=1767534305","url":"https:\/\/beetlebookshop.com\/kn\/products\/lyatereena-ondanondu-kalada-galiu-prasanga","provider":"Beetle Book Shop","version":"1.0","type":"link"}