{"product_id":"love-in-the-time-of-cholera-kannada","title":"ಲವ್ ಇನ್ ದಿ ಟೈಮ್ ಆಫ್ ಕಾಲರಾ (ಕನ್ನಡ) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್","description":"\u003cp\u003e'ಲವ್ ಇನ್ ದ ಟೈಮ್ ಆಫ್ ಕಾಲರಾ' ಒಂದು ಅಪರೂಪದ ಅಸಾಮಾನ್ಯ ಪ್ರೇಮ ಕಾದಂಬರಿ, ಪ್ರೇಮ ಎನ್ನುವುದು ಒಂದು ಮೌನ ಸಂಭಾಷಣೆ, ಮಧುರ ಅನುಭವ. ಮನಸ್ಸಿನ ಪ್ರಪಂಚದ ಮಧುರ ಕಂಪನ, ಪದಗಳಲ್ಲಿ ಮೂಡದ ಆನಂದ. ವ್ಯಾಖ್ಯಾನಕ್ಕೆ ಸಿಗದ ಭಾವ... ಇಂತಹ ಪ್ರೇಮದ ಆಕರ್ಷಕ ಪರಿಮಳವನ್ನು ಹೊತ್ತ ಈ ಕಾದಂಬರಿ ಹುರುಪಿನಿಂದ ನೆಗೆಯುತ್ತ, ಹಾರುತ್ತ, ಕನವರಿಸುತ್ತ, ಕಂಪಿಸುತ್ತ, ಕಣ್ಣಿನೊಳಕ್ಕೆ ಕನಸಿನಂತೆ ನುಸುಳುತ್ತ ಓದುಗನನ್ನು ಪ್ರೇಮ ಯಾತ್ರೆಯಲ್ಲಿ ತೇಲಿ ಮುಳುಗಿಸಿ, ಪ್ರಣಯದಲ್ಲಿ ಮೀಯಿಸುವ ಕಥನ.\u003c\/p\u003e\n\u003cp\u003eಯುವ ಪ್ರೇಮಿಗಳಿಬ್ಬರು ಪ್ರೇಮದ ಉಚ್ಚ ಸ್ಥಿತಿಗೆ ತಲುಪಿ, ಶಿಖರವನ್ನು ತಲುಪುವ ಮೊದಲು ವಿರಹಕ್ಕೆ ಜಾರಿಬಿದ್ದ ಮುಗ್ಧ ಹೃದಯಗಳ ಕಥಾ ಹಂದರ. ಇದೊಂದು ದೀರ್ಘಕಾಲದ, ಮುದಿಗಾಲದ, ಅಂತ್ಯದವರೆಗಿನ ಸುದೀರ್ಘ ಪ್ರೇಮ ಕಥನ, ಕಾಲರಾ ಮಹಾಮಾರಿಯಿಂ ತಲೂ ಹೆಚ್ಚಾಗಿ ಪೀಡಿಸಿ, ಬಾಧಿಸಿದ ಪ್ರೇಮದಲ್ಲಿ ಬಿದ್ದು ಇಷ್ಟಪಟ್ಟ ಹುಡುಗಿಗಾಗಿ ಜೀವನ ಪರ್ಯಂತ ಕಾದು ಕುಳಿತ ಮುಗ್ಧಪ್ರೇಮಿ ಫ್ಲೋರೆಂಟಿನೊನ ಕತೆ. ತಿಳಿದು ತಿಳಿಯದ ವಯಸ್ಸಿನಲ್ಲಿ ಅವನನ್ನು ಪ್ರೀತಿಸಿ, ನಂತರ ತಿರಸ್ಕರಿಸಿ ಜೀವನದ ಕಡೆಯ ದಿನಗಳಲ್ಲಿ ತುಂಬ ತಡವಾಗಿ ಮತ್ತೆ ಸ್ವೀಕರಿಸಿದ ಫರ್ಮಿನಾಳ ಕತೆ, ಅಂತಸ್ತಿನ ಹಠಮಾರಿತನದಿಂದ ಫರ್ಮಿನಾಳನ್ನು ದಕ್ಕಿಸಿಕೊಂಡು ಐವತ್ತು ವರ್ಷಗಳ ಕಾಲ ಸುಂದರ ಬದುಕನ್ನು ಸಾಗಿಸಿ ಅನಿರೀಕ್ಷಿತವಾಗಿ ಕಣ್ಣುಮುಚ್ಚಿದ ಡಾ. ಉರ್ಬಿನೊನ ಕತೆ. ಒಟ್ಟಾರೆಯಾಗಿ ಇದೊಂದು ತ್ರಿಕೋನ ಪ್ರೇಮ ಕಥನ. ಅಂತೆಯೆ ಫ್ಲೋರೆಂಟಿನೊನ ಶೃಂಗಾರದ ಪ್ರಣಯ ಕಥನವೂ ಕೂಡ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50983148814619,"sku":null,"price":342.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/love-in-the-time-of-cholera-kannada-gabriel-garcia-marquez-5171845.jpg?v=1767529745","url":"https:\/\/beetlebookshop.com\/kn\/products\/love-in-the-time-of-cholera-kannada","provider":"Beetle Book Shop","version":"1.0","type":"link"}