{"product_id":"lokadrushti-dr-c-g-lakshmipati","title":"ಲೋಕದೃಷ್ಟಿ (ಡಾ. ಸಿ.ಜಿ. ಲಕ್ಷ್ಮೀಪತಿ)","description":"ಲೋಕದೃಷ್ಟಿ | Lokadrushti \n\u003cdiv\u003eಮಾರ್ಕ್ಸ್ ವಾದೋತ್ತರ ಮತ್ತು ಆಧುನಿಕೋತ್ತರ ಚಿಂತಕರ ಕಥನ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಇಪ್ಪತ್ತನೆಯ ಶತಮಾನದ ಆರಂಭದಿಂದ ಹಿಡಿದು ಇಂದಿನವರೆಗೆ ಕನ್ನಡವನ್ನು ಜ್ಞಾನದ ಭಾಷೆಯನ್ನಾಗಿಸುವ ಪ್ರಯತ್ನಗಳು\u003c\/div\u003e\n\u003cdiv\u003eನಮ್ಮ ನಾಡಿನಲ್ಲಿ ನಿರಂತರವಾಗಿ ನಡೆದು ಬಂದಿವೆ. 20ನೆಯ ಶತಮಾನದಲ್ಲಿ ತಮ್ಮ ಅಮೂಲ್ಯ ಚಿಂತನೆಗಳಿಂದ ಲೋಕದ ತಿಳುವಳಿಕೆಯನ್ನು ವಿಸ್ತರಿಸಿದ ಜಗತ್ತಿನ ಆಯ್ದ ಸಾಮಾಜಿಕ\u003c\/div\u003e\n\u003cdiv\u003eಚಿಂತನೆಯನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ಪರಿಚಯಿಸುವ ಪುಸ್ತಕವನ್ನು ನಮ್ಮ ನಡುವಿನ ಜನಪರ ಸಮಾಜಶಾಸ್ತ್ರಜ್ಞರಾಗಿರುವ\u003c\/div\u003e\n\u003cdiv\u003eಡಾ. ಸಿ. ಜಿ. ಲಕ್ಷ್ಮೀಪತಿಯವರು ರೂಪಿಸಿದ್ದಾರೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಈ ಕೃತಿಯು ಸಾಹಿತ್ಯ ಮತ್ತು ಮಾನವಿಕ ಜ್ಞಾನ ಶಾಖೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಒಂದು ಉಪಯುಕ್ತ ಆಕರವಾಗಿದೆ. ಈ ಶ್ರೇಷ್ಠ\u003c\/div\u003e\n\u003cdiv\u003eಚಿಂತಕರ ಹೆಸರುಗಳು ನಮ್ಮ ಸಾಹಿತ್ಯ ಮತ್ತು ಸಮಾಜ ವಿಜ್ಞಾನದ ಭಾಗವಾಗಿವೆ. ಆದರೂ ಇವರ ಚಿಂತನೆಗಳು ಕನ್ನಡ ನುಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು ವಾಸ್ತವದ ಸಂಗತಿಯಾಗಿದೆ. ಈ ಕೃತಿಯು ಜಗತ್ ಚಿಂತಕರ ವೈಚಾರಿಕ ಲೋಕಕ್ಕೆ ಉತ್ತಮ ಪ್ರವೇಶಿಕೆಯಾಗಿದೆ. ಲೋಕ ಚಿಂತಕರ ವ್ಯಕ್ತಿತ್ವದ ಹಿನ್ನೆಲೆ ಚಾರಿತ್ರಿಕ ಸಂದರ್ಭ ಮತ್ತು ಸಿದ್ಧಾಂತಗಳನ್ನು ಪ್ರಸ್ವಗೊಳಿಸಿ ನಿರೂಪಿಸಲಾಗಿದೆ. ಅಧಿಕಾರ ಮತ್ತು ಅಧೀನತೆ, ಮಾನವ ಜ್ಞಾನದ\u003c\/div\u003e\n\u003cdiv\u003eವಿಕಾಸ, ತರತಮಗಳ ನಿರ್ವಹಣೆ, ಅಂತರ್ಗತ ಒಳನೋಟ, ಒಳತೋಟಿ, ಮುಕ್ತ ಮಾರುಕಟ್ಟೆ ಮತ್ತು ಪ್ರಭುತ್ವದ ಸಂಬಂಧ ಪ್ರತಿಯೊಬ್ಬರ ಮೇಲು ಕಣ್ಣಾವಲು ಮತ್ತು ಆಧುನಿಕತೆಯ ಬಿಕ್ಕಟ್ಟನ್ನು ಈ ಚಿಂತನೆಗಳು ತೆರೆದಿಟ್ಟಿವೆ. ಮಾರ್ಕ್ಸ್ ವಾದೋತ್ತರ\u003c\/div\u003e\n\u003cdiv\u003eಮತ್ತು ಆಧುನಿಕೋತ್ತರ ಚಿಂತಕರನ್ನು ಓದುಗರಿಗೆ ಪರಿಚಯಿಸುವ ಬೌದ್ಧಿಕ ಹೊಣೆಯನ್ನು ಲಕ್ಷ್ಮೀಪತಿ ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ವಿಚಾರಗಳನ್ನು ಸರಳವಾಗಿ ಮತ್ತು ಕನ್ನಡತನಕ್ಕೆ ಅರ್ಥ ಪೆಡಸಾಗದಂತೆ ನಿರೂಪಿಸಿರುವುದು ಈ ಹೊತ್ತಿಗೆಯ ಹೆಚ್ಚುಗಾರಿಕೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e- ಕೆ ವೈ ನಾರಾಯಣಸ್ವಾಮಿ\u003c\/div\u003e\n\u003cdiv\u003eಕನ್ನಡದ ಖ್ಯಾತ ನಾಟಕಕಾರರು ಮತ್ತು ಕವಿ\u003c\/div\u003e","brand":"BEETLE BOOK SHOP","offers":[{"title":"Default Title","offer_id":44535112302875,"sku":"","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/products\/lokadrushti-dr-cg-lakshmipati-7533047.png?v=1767536047","url":"https:\/\/beetlebookshop.com\/kn\/products\/lokadrushti-dr-c-g-lakshmipati","provider":"Beetle Book Shop","version":"1.0","type":"link"}