Kundada Beru ( Short Stories ) - Beetle Book Shop

Plantain Lily

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Kundada Beru ( Short Stories ) - Beetle Book Shop

Plantain Lily

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

ಯೌವನದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಸಾಮಾನ್ಯ. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ. ಇಲ್ಲವಾದರೆ ಇಲ್ಲ, ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಅದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಂತ ಭಿನ್ನ ಎಂದು ಸಾಬೀತುಪಡಿಸಿದ್ದರು. ಈಗ ಪ್ರಕಟವಾಗುತ್ತಿರುವ 'ಕುಂಡದ ಬೇರು ಕಥೆಗಳು' ಸಂಕಲನ ಪಲ್ಲವಿ ಅವರ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆಯಂತಿದೆ. ಈ ಸಂಕಲನದ ಒಂಬತ್ತೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ಕತೆಗಳ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವುದಕ್ಕಾಗಿ ಬಳಸಿದ ತಂತ್ರ ಮತ್ತು ಕಟ್ಟುವುದಕ್ಕಾಗಿ ಬಳಸಿದ ಭಾಷೆಯಲ್ಲಿಯೂ ವೈವಿಧ್ಯ ಕಂಡುಬರುತ್ತದೆ. ಪ್ರತಿಯೊಂದು ಕತೆಯನ್ನೂ ಒಂದು 'ಪ್ರಯೋಗ' ಎಂಬಂತೆ ಭಾವಿಸಿ ಕಟ್ಟಿರುವುದು ವಿಶೇಷ, ಈ ಪ್ರಯೋಗಶೀಲತೆಯೇ ಕತೆಗಳು ವಿಶಿಷ್ಟವಾಗಿ ಕಾಣಿಸುವುದಕ್ಕೆ ಕಾರಣವಾಗಿದೆ. ಕತೆಯ ಅಗತ್ಯಕ್ಕೆ ಅನುಗುಣವಾಗಿ ಬಳಕೆಯಾಗುವ ಭಾಷೆ ಗಮನ ಸೆಳೆಯದೇ ಇರಲಾರದು. ಅನುಭವದ ಲೋಕವನ್ನು ವಿಸ್ತರಿಸುವ ಈ ಕತೆಗಳು ಕನ್ನಡ ಕಥಾಲೋಕಕ್ಕೆ ಹೊಸ ಸೇರ್ಪಡೆ ಎನ್ನಲಡ್ಡಿಯಿಲ್ಲ.

ಮೇಲ್ನೋಟಕ್ಕೆ ತೆಳುವಾದ ಸಾಧಾರಣ ಎನ್ನಿಸುವ ಸಂಗತಿ ಘಟನೆಗಳನ್ನು ಲೇಖಕಿಯು ತನ್ನ ಬರವಣಿಗೆಯ ಮೂಲಕ ವಿಶಿಷ್ಟಗೊಳಿಸಿದ್ದಾರೆ. ಮೊದಲ ಎರಡು ಕತೆಗಳಾದ 'ಕುಂಡದ ಬೇರು' 'ತಿರುವು' ಕತೆಗಳು ಲಘುವಾದ ವಸ್ತುವನ್ನು ಒಳಗೊಂಡಿವೆ. ನಂತರದ 'ರದ್ದಿ' ಮತ್ತು 'ಕಣಗಿಲೆ' ಕತೆಗಳು ಅನುಭವದ ತೀವ್ರತೆಯನ್ನು ಪದಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿವೆ. 'ಎಜುಕೇಟೆಡ್ ಗರ್ಲ್ಸ್', 'ಬಿಲ್' ಮತ್ತು 'ಯುರೋಪ್ಲೋಮೆಟ್ರಿ' ಕತೆಗಳು ತನ್ನ ಗಂಭೀರ ವಸ್ತುವಿನ ಕಾರಣಕ್ಕಾಗಿ ಗಮನ ಸೆಳೆಯುತ್ತವೆ. 'ಹುಳಿತೇಗು' ಮತ್ತು 'ಮಾಯದ ಗಾಯ' ಕತೆಗಳಲ್ಲಿನ ಒಳತೋಟಿ, ಅಸಹಾಯಕತೆಗಳು ಮೆಚ್ಚುಗೆಗೆ ಪಾತ್ರವಾಗದೇ ಇರವು. ಈ ಕತೆಗಳ ಓದು ಸದ್ಯದ ಕನ್ನಡ ಕತೆಯ ಸ್ವರೂಪ ವಿವರಿಸುವ ಹಾಗೆ ಅನ್ನಿಸಿದರೆ ಅಚ್ಚರಿಯಿಲ್ಲ. ಅಲ್ಲಲ್ಲಿ ಕವಿತೆಯ ಸಾಲುಗಳಂತೆ ಬರುವ ಗದ್ಯವು ಕತೆಗಳ ಓದನ್ನು ಪ್ರಿಯವಾಗಿಸುತ್ತದೆ. ಪಲ್ಲವಿಯವರ ರಚನೆಗಳಿಗೆ ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಮನ್ನಣೆ ದೊರೆಯಲಿ ಎಂಬ ಸದಾಶಯ ನನ್ನದು.

-ದೇವು ಪತ್ತಾರ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು