{"product_id":"kulume-bala-chitragalu","title":"ಕುಲುಮೆ ( ಬಾಲ ಚಿತ್ರಗಳು )","description":"\u003cp class=\"cvGsUA direction-ltr align-center para-style-body\"\u003e\u003cspan class=\"OYPEnA text-decoration-none text-strikethrough-none\"\u003eಸಂಶೋಧಕ, ವಿಮರ್ಶಕ, ಲೇಖಕ \u003c\/span\u003e\u003cspan class=\"OYPEnA text-decoration-none text-strikethrough-none\"\u003eರಹಮತ್ ತರೀಕೆರೆ \u003c\/span\u003e\u003cspan class=\"OYPEnA text-decoration-none text-strikethrough-none\"\u003eಅವರ ಆತ್ಮಕಥೆ\u003c\/span\u003e\u003c\/p\u003e\n\u003cp class=\"cvGsUA direction-ltr align-center para-style-body\"\u003e\u003cspan class=\"OYPEnA text-decoration-none text-strikethrough-none\"\u003e.......\u003c\/span\u003e\u003c\/p\u003e\n\u003cp\u003eಈ ಬಾಳಕಥನವನ್ನು 'ಕುಲುಮೆ' ಎಂದು ಕರೆದಿರುವೆ. ಕಾರಣ, ನಮ್ಮ ಕುಟುಂಬದ ಕಸುಬು ಕಮ್ಮಾರಿಕೆ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತದ್ದೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಮೊರೆಯಿತು; ಆತ್ಮಸಂಗಾತಿಯಂತೆ ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು.\u003cbr data-mce-fragment=\"1\"\u003eಕುಲುಮೆಯ ಕಮ್ಮಟದಲ್ಲಿ ಆಕಾರರಹಿತ ಕಪ್ಪು ಲೋಹವು ಕೆಂಪಗೆ ಕಾಯುತ್ತದೆ. ಕಡಿಸಿಕೊಂಡು ಬಡಿಸಿಕೊಂಡು ಹೊಸ ಸಲಕರಣೆಯಾಗಿ ರೂಪಾಂತರ ಪಡೆಯುತ್ತದೆ. ಇಲ್ಲಿ ಶ್ರಮ ಮಾತ್ರವಲ್ಲ, ಕಲ್ಪನೆ ಮತ್ತು ತಂತ್ರಗಾರಿಕೆಗಳೂ ಇವೆ; ಒಂದನ್ನು ಮತ್ತೊಂದನ್ನಾಗಿ ಪರಿವರ್ತಿಸುವ ಸೃಜನಶೀಲ ಮಾಟವಿದೆ. ಇದು ಅನುಭವ-ಕಲ್ಪನೆ-ಚಿಂತನೆಗಳು ಸಂಗಮಿಸಿ ಕಲಾಕೃತಿ ಸೃಷ್ಟಿಗೊಳ್ಳುವುದಕ್ಕೆ ಸಮೀಪವಾಗಿದೆ.\u003cbr data-mce-fragment=\"1\"\u003eನನ್ನ ಪಾಲಿಗೆ ದಕ್ಕಿದ ಬಾಳನ್ನು ಭರಪೂರವಾಗಿ ಅನುಭವಿಸಿದೆ. ಅದರ ಅಪೂರ್ವ ಲೀಲೆಗೆ ಬೆರಗಾದೆ. ದುಗುಡಗಳು ಘಾತಿಸಿದ್ದುಂಟು; ಬವಣೆಗಳು ಸುಸ್ತು ಮಾಡಿದ್ದುಂಟು; ಅಸುರಕ್ಷತೆ ಕಾಡಿದ್ದುಂಟು; ಉತ್ಕಟವಾದ ಮಿತಿ ಮೈಮರೆಸಿದ್ದುಂಟು. ಹೀಗಾಗಿಯೇ ಕುಟುಂಬ ಬೀದಿ ಊರು ಸೀಮೆಗಳನ್ನು ಪ್ರತಿಫಲಿಸುವ ಸದರಿ ಕಥನವು, ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನತತ್ವದ ಹುಡುಕಾಟ ಆಗಬೇಕು ಎಂದು ಹಂಬಲಿಸಿರುವೆ.\u003c\/p\u003e\n\u003cp\u003e- \u003cspan class=\"OYPEnA text-decoration-none text-strikethrough-none\" data-mce-fragment=\"1\"\u003e \u003c\/span\u003e\u003cspan class=\"OYPEnA text-decoration-none text-strikethrough-none\" data-mce-fragment=\"1\"\u003eರಹಮತ್ ತರೀಕೆರೆ\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":46768095232283,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kulume-bala-chitragalu-7442049.png?v=1767535926","url":"https:\/\/beetlebookshop.com\/kn\/products\/kulume-bala-chitragalu","provider":"Beetle Book Shop","version":"1.0","type":"link"}