{"product_id":"khairlanji-dalita-bharathada-kathana","title":"ಖೈರ್ಲಾಂಜಿ - ದಲಿತ ಭಾರತದ ಕಥನ","description":"\u003cp\u003e2006ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್‌ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್‌ನಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ್‌ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್‌ಮಾಂಗೆಗಳು ದಲಿತರಾಗಿದ್ದರು. ಭೋತ್‌ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.\u003c\/p\u003e\n\u003cp\u003eಡಾ. ಆನಂದ್ ತೇಲ್‌ತುಂಬೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಮತ್ತು ಹೇಗೆ ನಮ್ಮ ಸುತ್ತ ಮುತ್ತ ಸದಾ ಖೈರ್ಲಾಂಜಿಗಳು ಇದ್ದೇ ಇವೆಯೆಂದು ತಿಳಿಸಿಕೊಟ್ಟಿದ್ದಾರೆ.\u003c\/p\u003e\n\u003cp\u003eಆನಂದ್ ತೇಲ್ತುಂಬ್ಳೆಯವರ ವಿಶ್ಲೇಷಣೆ ನಮ್ಮ ಸಮಾಜದ ಹೃದಯಕ್ಕೆ ಗ್ಯಾಂಗ್ರೀನ್ ಹಿಡಿದಿರುವುದನ್ನು ಎತ್ತಿತೋರಿಸುತ್ತದೆ. ಆನಂದರ ಪುಸ್ತಕ ಈ ಹತ್ಯೆಯು ಯಾವ ಸಾಮಾಜಿಕ ಸಂದರ್ಭದೊಳಗೆ ಸಂಭವಿಸಿತೆಂಬ ವಿಶ್ಲೇಷಣೆಯನ್ನು ಒದಗಿಸುವುದಲ್ಲದೆ, ಯಾವ ರೀತಿಯಲ್ಲಿ ಸಾಮಾಜಿಕ, ರಾಜಕೀಯ ಮತ್ತು ಪ್ರಭುತ್ವ ಯಂತ್ರಾಂಗಗಳು, ಪೊಲೀಸರು, ಸಮೂಹ ಮಾಧ್ಯಮಗಳು, ಮತ್ತು ನ್ಯಾಯಾಂಗಗಳು ಎಲ್ಲವೂ ಒಂದಾಗಿ ಇಂಥ ದೌರ್ಜನ್ಯಗಳು ಸಂಭವಿಸುವಂಥಾ ವಾತವರಣವನ್ನೂ ಸೃಷ್ಟಿಸಿದವು ಎಂಬದನ್ನೂ ಮತ್ತು ಆನಂತರ ಹೇಗೆ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದವು ಎಂಬುದನ್ನೂ ವಿವರಿಸುತ್ತದೆ. ಇದು ಅಳಿದುಳಿದ ಊಳಿಗಮಾನ್ಯ ವ್ಯವಸ್ಥೆಯ ಕೊನೆಯ ದಿನಗಳ ಬಗೆಗಿನ ಪುಸ್ತಕವಲ್ಲ, ಬದಲಿಗೆ ನಮ್ಮ ದೇಶದಲ್ಲಿ ಆಧುನಿಕತೆಗೆ ಏನರ್ಥ ಎಂಬುದರ ಬಗೆಗಿನ ಪುಸ್ತಕ.\u003c\/p\u003e\n\u003cp\u003e- \u003cb\u003eಅರುಂಧತಿ ರಾಯ್\u003c\/b\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":48581912494363,"sku":"","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/khairlanji-dalita-bharathada-kathana-5412308.jpg?v=1767533108","url":"https:\/\/beetlebookshop.com\/kn\/products\/khairlanji-dalita-bharathada-kathana","provider":"Beetle Book Shop","version":"1.0","type":"link"}