{"product_id":"kavara-a-novel","title":"ಕವರ (ಒಂದು ಕಾದಂಬರಿ)","description":"\u003cp\u003eಪ್ರಸಿದ್ಧ ಮಲಯಾಳಿ ಕತೆಗಾರರಾದ ವೈಕಂ ಮಹಮ್ಮದ್ ಬಶೀರ್ ಅವರ 'ಒರು ಮನುಷ್ಯನ್' ಎಂಬ ಕಥೆಯೊಂದಿದೆ. ಅದರ ಇಂಗ್ಲಿಷ್ ಅನುವಾದದಲ್ಲಿರುವ ಒಂದು ಸಾಲು,\u003c\/p\u003e\n\u003cp\u003e 'The world is more evil than good.\u003cbr\u003eWe realize this only after we get hurt'.\u003c\/p\u003e\n\u003cp\u003eವೆಂಕಟ್ರಮಣ ಗೌಡರ 'ಕವರ' ಕಾದಂಬರಿ ಓದುತ್ತಾ ನನಗೆ ಬಶೀರರ ಈ ಸಾಲು ನೆನಪಾಯಿತು.\u003c\/p\u003e\n\u003cp\u003eಇಲ್ಲಿಯ ಪಾತ್ರಗಳು ವಿಲಕ್ಷಣ ಮನಸ್ಥಿತಿಯನ್ನು ಉಸಿರಾಡುತ್ತಾ, ಬೇಯುತ್ತಾ ಮತ್ತೆ ಬದುಕುತ್ತಾ ಸಾಗುತ್ತವೆ. ನೈಜ ವ್ಯಕ್ತಿತ್ವ ಎನ್ನುವುದು ಮತ್ತು ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಎಂಬುದು ಅಸಹಜ ಪರಿಕಲ್ಪನೆ ಎಂಬ ಸತ್ಯವನ್ನು ಇಲ್ಲಿ ಗೌಡರು ಹೇಳ ಹೊರಟಿರುವಂತಿದೆ.\u003c\/p\u003e\n\u003cp\u003eಮನುಷ್ಯನ ಹುಡುಕಾಟದ ಹಾದಿ ಕೊನೆಯಿಲ್ಲದ್ದು, ತನ್ನೊಳಗಿನ ಮತ್ತು ಹೊರಗಿನ ಸಂಗತಿಗಳಿಗೆ ನಿತ್ಯ ಮುಖಾಮುಖಿಯಾಗುತ್ತಲೇ ಇರುವ ಮನುಷ್ಯ ತನ್ನೊಳಗಿನ ದ್ವಂದ್ವಗಳನ್ನು ಅರಿಯುವ, ಮೀರುವ ಪ್ರಯತ್ನ ಮಾಡುತ್ತಾನೆ. ಆದರೆ ಅದು ಅಷ್ಟು ಸುಲಭವಲ್ಲ.\u003c\/p\u003e\n\u003cp\u003eಇದೊಂದು ಕಾದಂಬರಿ ಎನ್ನಿಸದೇ ಕತೆಯೊಳಗೊಂದು ಕತೆಯಂತೆ ತೆರೆದುಕೊಳ್ಳುತ್ತದೆ. ಪಾತ್ರದೊಳಗಿನ ಪಾತ್ರಗಳು ಮೈತಳೆದು ಮಾತನಾಡುತ್ತವೆ. ಬರವಣಿಗೆಯ ತಂತ್ರದಲ್ಲೂ ಹೊಸತನವಿದೆ. ರಂಗಸ್ಥಳದಲ್ಲಿ ಪ್ರಾರಂಭವಾಗುವ ಕಾದಂಬರಿ, ಆನಂತರ ಬದುಕಿನ ಬಯಲನ್ನೇ ರಂಗಸ್ಥಳವಾಗಿಸಿಕೊಳ್ಳುತ್ತದೆ.\u003c\/p\u003e\n\u003cp\u003eಕಾದಂಬರಿಯಲ್ಲಿ ಬರುವ 'ಒಂದು ಪಾತ್ರ ರೂಪಕವಾಗುವುದೆಂದರೆ ತನ್ನ ಮುಗಿಯದ ಸಂಕಟಗಳಲ್ಲಿ ಬೇಯುತ್ತಾ ಸಾಯುವುದೇ?' ಎಂಬ ಪ್ರಶ್ನೆಯೇ ಇಡೀ ಕಾದಂಬರಿಯ ಮೂಲ ವಸ್ತು ಎಂಬಂತಿದೆ.\u003c\/p\u003e\n\u003cp\u003eನಾಗರೇಖಾ ಗಾಂವಕರ\u003c\/p\u003e","brand":"BEETLE BOOK SHOP","offers":[{"title":"Default Title","offer_id":50125822394651,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kavara-a-novel-5009600.jpg?v=1767531620","url":"https:\/\/beetlebookshop.com\/kn\/products\/kavara-a-novel","provider":"Beetle Book Shop","version":"1.0","type":"link"}