{"product_id":"kathe-jaariyallirali","title":"Let the story flow.","description":"\u003cp\u003e\"ಸೋ ಕಾಲ್ಡ್ ಇನ್ಕ್ಲೂಸಿವ್ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..?  \u003cbr\u003eಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟು ಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!\" ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲಿಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು.\u003c\/p\u003e\n\u003cp\u003e'ಸೀಕ್ರೆಟ್ ಸ್ಯಾಂಟಾ' ಕತೆಯಿಂದ\u003c\/p\u003e\n\u003cp\u003eಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ.\u003c\/p\u003e\n\u003cp\u003e'ಕತೆ ಜಾರಿಯಲ್ಲಿರಲಿ' ಕತೆಯಿಂದ\u003c\/p\u003e\n\u003cp\u003e“ಬ್ರಹ್ಮನಾಗಿ ಆ ಅಧಿನಾಯಕ ನನಗೆ ವರಗಳ ಅನುಗ್ರಹಿಸಿದ. ಶಿವನ ಸ್ವರೂಪಿಯಾಗಿ ಬಂದು ನಾ ಕೇಳಿದ್ದು ಕೇಳದ್ದು ಎಲ್ಲವನ್ನೂ ಕೊಟ್ಟ. ಈಗ ಸಾಕ್ಷಾತ್ ಶ್ರೀ ವಿಷ್ಣುವು ರಾಮನ ಆವತಾರದಲ್ಲಿ ಬಂದು ನನ್ನ ಜೀವನವನ್ನೇ ಮುಗಿಸುತ್ತಾನೆಂದರೆ ಅದೂ ಆ ಮಹಾಮಹಿಮನ ಆಶೀರ್ವಾದವೇ ಅಲ್ಲವೇ? ಹೇ ಪ್ರಭೂ, ಎಲ್ಲದಕ್ಕೂ ಸಿದ್ದ ನಾನು\" ಎಂದು ಯುದ್ಧದ ಕೊನೆಯ ಚರಣದಲ್ಲಿ ವೀರಾವೇಶಭರಿತನಾಗಿ ರಾವಣ ಹೇಳಿದ್ದನ್ನು ಮತ್ತೆ ಮತ್ತೆ ರೀವೈಂಡ್ ಮಾಡಿ ಕೇಳಿಸಿಕೊಂಡೆ. ಅರಿಷಡ್ವರ್ಗಗಳು ಬದುಕಿನ ಭಾವವನ್ನ ಸಾರವನ್ನ ಹೇಗೆಲ್ಲ ಬದಲಿಸಿ ಬಿಸಾಕಬಹುದಲ್ಲ ಎಂಬ ಆಲೋಚನೆ ಸುಳಿದುಹೋಯಿತು.\u003c\/p\u003e\n\u003cp\u003e'ಸಿನ್ನರ್ಸ್ ಆಂಡ್ ಸೋಬರ್ಸ್' ಕತೆಯಿಂದ\u003c\/p\u003e","brand":"BEETLE BOOK SHOP","offers":[{"title":"Default Title","offer_id":50373652316443,"sku":"","price":112.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kathe-jaariyallirali-8619748.jpg?v=1767528967","url":"https:\/\/beetlebookshop.com\/kn\/products\/kathe-jaariyallirali","provider":"Beetle Book Shop","version":"1.0","type":"link"}