{"product_id":"katha-nantara","title":"ಕಥೆ ನಂತರ","description":"\u003cp\u003eಲೇಖಕರು : ನಟರಾಜ್ ಹುಳಿಯಾರ್\u003c\/p\u003e\n\u003cp\u003e*****\u003c\/p\u003e\n\u003cp\u003eಇಂಥ ಕತೆಗಳ ಸಂಕಲನಕ್ಕೆ \"ಕಥಾನಂತರ' ಎಂಬ ಹೆಸರು ಮೂಡಿದ್ದು ಕೂಡ ಸಹಜವಾಗಿತ್ತು. ಈ ಕತೆಗಳ ಪಾತ್ರಗಳಲ್ಲಿ ತಮ್ಮನ್ನೋ, ತಮ್ಮ ಹತ್ತಿರದವರನ್ನೋ ಕಂಡವರಿಗೆ ಹೊಳೆದ ಸತ್ಯಗಳು ಹಾಗೂ ಕಥಾ ಪಾತ್ರಗಳಿಗೆ ಎದುರಾದ ಹೊಸ ಸತ್ಯಗಳು; ಈ ಕತೆಗಳ ವಸ್ತು, ಸನ್ನಿವೇಶಗಳು ಮುಂದೊಮ್ಮೆ ತಾವೇ ಕಂಡುಕೊಂಡ ಸೂಕ್ಷ್ಮ ಸತ್ಯಗಳು... ಇವೆಲ್ಲ ಬರಬರುತ್ತಾ ಈ ಕತೆಗಳ ಸಹಜ ಭಾಗಗಳಾಗಿದೆ; ಕತೆಯ ಅರಿವೂ, ಕಥಾನಂತರದ ಅರಿವೂ ಒಗ್ಗೂಡಿ ವಿಸ್ತತವಾದ ಅಖಂಡ ಕತೆಗಳಾಗಲೆತ್ನಿಸಿದೆ....\u003c\/p\u003e\n\u003cp\u003eಈ ಮಾತುಗಳನ್ನು ಬರೆಯುತ್ತಿರುವಾಗ ನಿರಚನಾವಾದಿ ಚಿಂತಕ ಜಾಕ್ವೆಸ್‌ ಡೆರಿಡಾ, 'ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ\" ಎಂದಿದ್ದು ನೆನಪಾಯಿತು; ಆ ಮಾತು ಇದ್ದಕ್ಕಿದ್ದಂತೆ ಪಲ್ಲಟಗೊಂಡು, ಕತೆ ಬರೆಯವುದೆಂದರೆ ಸತ್ಯದ ನಿರಂತರ ಮುಂದೂಡಿಕೆ' ಎನ್ನಿಸತೊಡಗಿತು.\u003c\/p\u003e\n\u003cp\u003e-ಕತೆಗಾರ\u003c\/p\u003e","brand":"BEETLE BOOK SHOP","offers":[{"title":"Default Title","offer_id":47419884470555,"sku":"","price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/katha-nantara-6727590.png?v=1767535507","url":"https:\/\/beetlebookshop.com\/kn\/products\/katha-nantara","provider":"Beetle Book Shop","version":"1.0","type":"link"}