{"product_id":"karnataka-rangabhoomi","title":"ಕರ್ನಾಟಕ ರಂಗಭೂಮಿ","description":"\u003cp\u003eಕನ್ನಡ ರಂಗಭೂಮಿಯ ಇತಿಹಾಸವನ್ನು ಅಭ್ಯಾಸ ಮಾಡುವವರಿಗೆ ಇದೊಂದು ಮಹತ್ವದ ಆಕರ ಗ್ರಂಥ. ಕರ್ನಾಟಕ ರಂಗಭೂಮಿಯ ಜಾನಕಿ. ನಾಟಕ ರಂಗಭೂಮಿಯೊಡನೆ ಸಂಬಂಧ ಜಾನಪದ ರಂಗಭೂಮಿ, ವೃತ್ತಿ ರಂಗಭೂಮಿ, ವಿಲಾಸಿ ರಂಗಭೂಮಿ, ರಂಗಭೂಮಿಯ ಹಿನ್ನೋಟ, ಮುನ್ನೋಟ ಈ ಅಧ್ಯಾಯಗಳ ಮೂಲಕ ನಮ್ಮ ರಂಗಭೂಮಿಯ ಸಮಗ್ರ ಮುಖಗಳನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಈ ಕ್ಷೇತ್ರದ ತಲಸ್ಪರ್ಶಿಯಾದ ಅರಿವು, ಸಂಬಂಧಪಟ್ಟ ಆಕರಗಳ ಸಮೃದ್ಧವಾದ ಶ್ರದ್ಧಾಶೀಲ ಅಧ್ಯಯನ ವಿಮರ್ಶೆ, ಸಾಧನ ಮತ್ತು ಪರಿಣಾಮಗಳ ಸೂಕ್ಷ್ಮವೂ, ವಿಶಿಷ್ಟವೂ ಮತ್ತು ಮನನೀಯವೂ ಆದ ಚಿಂತನಗಳು ಇಲ್ಲಿ ಮೊದಲ ಬಾರಿಗೆ ಮೈವೆತ್ತಿವೆ.\u003c\/p\u003e\n\u003cp\u003eಇತಿಹಾಸದ ಜೊತೆಗೆ ರಂಗಭೂಮಿಯ ಸಾಧ್ಯತೆಗಳನ್ನು, ಸವಾಲುಗಳನ್ನು ಸಮಸ್ಯೆಗಳನ್ನು, ಪರಿಹಾರೋಪಾಯಗಳನ್ನು ಇಲ್ಲಿ ಅಗಾಧವಾದ ಮತ್ತು ಬೆರಗುಗೊಳಿಸುವ ಸಾಮಗ್ರಿಗಳ ನೆರವಿನಿಂದ ಅತ್ಯಂತ ಸಪ್ರತಿಭಾಪೂರ್ಣವಾಗಿ ಚರ್ಚಿಸಲಾಗಿದೆ. ಲೇಖಕರ ಒಳನೋಟಗಳು, ತುಂಬು ಹೊಳೆಯಂತೆ ಗಂಭೀರವಾಗಿ, ಮನೋಜ್ಞವಾಗಿ, ಹರಿಯುವ ಅಷ್ಟ ಬಂಧುರದ ಶೈಲಿ ಈ ಕ್ಷೇತ್ರದ ಪರಿಣತರಿಗೆ ಮಾತ್ರವಲ್ಲದೆ, ಆಸಕ್ತ ಸಾಮಾನ್ಯರಿಗೂ ಈ ವಿಶಿಷ್ಟ ಲೋಕದ ಪರಿಚಯವನ್ನು ಸಮರ್ಥವಾಗಿ ಮಾಡಿಕೊಡುತ್ತದೆ.\u003c\/p\u003e\n\u003cp\u003eನಮ್ಮ ಜಾನಪದ ರಂಗಭೂಮಿ ಆಧುನಿಕ ನಾಗರಿಕತೆ ಮತ್ತು ತಂತ್ರಜ್ಞಾನಗಳ ದಾಳಿಗೆ ಸಿಕ್ಕಿ, ತತ್ತರಿಸಿ ತನ್ನ ಮೂಲ ನೆಲೆ ಮತ್ತು ಸೆಲೆಗಳನ್ನು ಕಳೆದುಕೊಳ್ಳುತ್ತಿರುವ ಹಾಗೂ ಆಧುನಿಕ ರಂಗಭೂಮಿ ತನ್ನ ಕ್ರಿಯಾತ್ಮಕತೆಯನ್ನು, ಸೃಜನಶೀಲತೆಯನ್ನು ಮತ್ತು ಉತ್ಸಾಹ ಸಂಭ್ರಮಗಳನ್ನು ಕಳೆದುಕೊಳ್ಳುತ್ತಿರುವಾಗ ಈ ಕೃತಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೇರಣೆಯನ್ನು ನೀಡುವ ಅಂತಃಸತ್ತ್ವವನ್ನು ಒಳಗೊಂಡಿದೆ.\u003c\/p\u003e\n\u003cp\u003eಡಾ| ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷರು\u003c\/p\u003e","brand":"BEETLE BOOK SHOP","offers":[{"title":"Default Title","offer_id":49458212307227,"sku":"","price":396.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karnataka-rangabhoomi-9366693.jpg?v=1767534546","url":"https:\/\/beetlebookshop.com\/kn\/products\/karnataka-rangabhoomi","provider":"Beetle Book Shop","version":"1.0","type":"link"}