{"product_id":"karnataka-gurupantha","title":"ಕರ್ನಾಟಕ ಗುರುಪಂಥ | Karnataka Gurupantha","description":"\u003cp\u003eಕರ್ನಾಟಕದ ದಾರ್ಶನಿಕ‌ ಪಂಥ ಮತ್ತು ಆಚರಣೆ ಲೋಕಗಳನ್ನು ಕುರಿತು ಡಾ. ರಹಮತ್ ತರೀಕೆರೆ ಅವರ ಐದನೆಯ ಪುಸ್ತಕ. \"ಕರ್ನಾಟಕ ಗುರುಪಂಥ\". ಈ ಕೃತಿ ಕಳೆದ ಐದಾರು ವರುಷಗಳ ಸುತ್ತಾಟದ ಫಲ ಎನ್ನುತ್ತಾರೆ ಲೇಖಕರು. ಗುರು-ಶಿಷ್ಯ ಪರಂಪರೆಯುಳ್ಳ‌ ಹಾಗೂ ತನ್ನೊಳಗೆ ಹಲವಾರು ಮಾರ್ಗಗಳನ್ನೂ ದಾರ್ಶನಿಕ ಪ್ರಸ್ಥಾನಗಳನ್ನೂ ಒಳಗೊಂಡಿರುವ ಒಂದು ವಿಶಾಲ ಪರಿಕಲ್ಪನೆಯಾಗಿ `ಗುರುಪಂಥ'ವನ್ನು ಇಲ್ಲಿ ಪರಿಗ್ರಹಿಸಲಾಗಿದೆ. ತಾತ್ವಿಕವಾಗಿ ಶರಣ, ನಾಥ, ಸೂಫಿಗಳು ಗುರುಪಂಥಗಳೇ. ಆದರೆ ಅವನ್ನು ಹೊರತುಪಡಿಸಿ `ಗುರುಪಂಥ’ದ ಪರಿಕಲ್ಪನೆಯನ್ನು ಇಲ್ಲಿ ಕಟ್ಟಿಕೊಳ್ಳಲಾಗಿದೆ. ಈ ಪರಿಕಲ್ಪನೆಯೊಳಗೆ, ಕಳೆದ ನಾಲ್ಕು ಶತಮಾನದ ಹರಹಿನಲ್ಲಿ ಕಾಣಿಸಿಕೊಳ್ಳುವ ಮುನ್ನೂರಕ್ಕೂ ಮಿಕ್ಕ ಯೋಗಿಗಳೂ ತತ್ವಪದಕಾರರೂ ಬರುತ್ತಾರೆ; ಅದ್ವೈತ ಅದ್ವಯ ಮುಂತಾದ ದಾರ್ಶನಿಕ ಪ್ರಸ್ಥಾನಗಳೂ, ಆರೂಢ ಅವಧೂತ ಅಚಲದಂತಹ ಮಾರ್ಗಗಳೂ ಹಾಗೂ ಇಂಚಗೇರಿ ಗುಡಿಕಲ್ ಸಿದ್ಧಾರೂಢ ಮುಂತಾದ ಪರಂಪರೆಗಳೂ ಬರುತ್ತವೆ. ಹೀಗಾಗಿ `ಗುರುಪಂಥ’ವೆಂಬ ಪರಿಕಲ್ಪನೆಯು ಮೇಲ್ನೋಟಕ್ಕೆ ಏಕರೂಪಿಯಾಗಿ ತೋರಿದರೂ, ವಾಸ್ತವದಲ್ಲಿ ಅದೊಂದು ಬಹುರೂಪಿ ಜಗತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. \u003c\/p\u003e","brand":"BEETLE BOOK SHOP","offers":[{"title":"Default Title","offer_id":49455287795995,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karnataka-gurupantha-5491865.jpg?v=1767532806","url":"https:\/\/beetlebookshop.com\/kn\/products\/karnataka-gurupantha","provider":"Beetle Book Shop","version":"1.0","type":"link"}