{"product_id":"kadugolla-budakattu-kula-kathana","title":"ಕಾಡುಗೊಲ್ಲ ಬುಡಕಟ್ಟು ಕುಲ ಕಥನ","description":"\u003cp\u003eಕಾಡುಗೊಲ್ಲ ಬುಡಕಟ್ಟು ಕುಲಕಥನ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿಯವರು ಬರೆದ ಈ ಸಂಶೋಧನಾ ಕೃತಿ ಮಾಹಿತಿ ಮತ್ತು ವಿಶ್ಲೇಷಣಿಯನ್ನು ಸಮ ಪ್ರಮಾಣದಲ್ಲಿ ಒಳಗೊಂಡ ಒಂದು ಅಪರೂಪದ ಕೃತಿ. ಮಾಹಿತಿ ಎಂದಾಗ ಅದು ಕಾಟಾಚಾರದಲ್ಲಿ ಕಲೆ ಹಾಕಿದ ಮಾಹಿತಿಯಲ್ಲ. ವಸ್ತುವಿಗೆ ಸಂಬಂಧಿಸಿದಂತೆ ಹಲವು ಮಗ್ಗುಲುಗಳಲ್ಲಿ ಅಧ್ಯಯನಾಸಕ್ತಿಗೆ ಆಕರವಾಗಬಹುದಾದ ಎಲ್ಲಾ ಬಗೆಯ ಮಾಹಿತಿ ಗಳನ್ನು ಇಲ್ಲ ಶ್ರಮ ವಹಿಸಿ ಕಲೆಹಾಕಿದ್ದಾರೆ. ಹೀಗೆ ಸಂಗ್ರಹಿಸುವಾಗ ಮಾಹಿತಿ ನೀಡುವ ಆಕರದ ಸಾರ ರೂಪವನ್ನು ಔಚಿತ್ಯ ಪೂರ್ಣವಾಗಿ ನಿರೂಪಿಸಿದ್ದಾರೆ. ಒಂದು ಬುಡಕಟ್ಟು ಜನಾಂಗದ ಬಗೆಗೆ ತುಂಬಾ ಆಪ್ತಭಾವದಲ್ಲಿ ಆದರೆ ವಸ್ತುನಿಷ್ಠ ದೃಷ್ಟಿಯಲ್ಲಿ ಇವರು ತಮ್ಮ ಶ್ರಮ ಮತ್ತು ಅರಿವನ್ನು ವಿನಿಯೋಗಿಸಿ ಈ ಕಾರ್ಯ ಮಾಡಿರುವುದು ಅಭಿನಂದನೀಯ. ಇನ್ನು ವಿಶ್ಲೇಷಣೆಗೆ ಸಂಬಂಧಿಸಿದಂತೆ ಇವರ ನೆಲೆ ಒಣ ವೈಚಾರಿಕ ಶುಷ್ಕ ತಾರ್ಕಿಕ ನೆಲೆಯದ್ದಾಗಿ ಹರಿದಿಲ್ಲ. ಸಮಾಜ ವಿಜ್ಞಾನದ ತಾತ್ವಿಕ ಜಡ ಭಾರದ ಹೇರುವಿಕೆಯ ವಿಶ್ಲೇಷಣೆಯಾಗದೆ ವರ್ತಮಾನದ ಜೀವನ ಗತಿ ತಾರ್ಕಿಕ ಆಪ್ತತೆಯಲ್ಲಿ ಆಚಾರ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ.\u003c\/p\u003e\n\u003cp\u003eಮೌಢ ಆಚರಣೆಗಳನ್ನು ವರ್ತಮಾನದ ಚೀಸಿನಲ್ಲಿ ಒಂದೇ ಬಾರಿಗೆ ಒಡೆದು ಹಾಕದೆ ಅಲ್ಲಿಯೂ ಆಗುತ್ತಿರುವ ಬದಲಾವಣೆಗಳನ್ನು ಗಮನಕ್ಕೆ ತರುತ್ತಲೇ ಸಮುದಾಯ ಪ್ರಜ್ಞೆಯನ್ನು ಆತ್ಮಾವಲೋಕನಕ್ಕೆ ಒಳಗು ಮಾಡುವ ವಿವೇಕದಲ್ಲಿ ವಿಶ್ಲೇಷಿಸಿದ್ದಾರೆ. ಇದು ಮುಖ್ಯ ವಿಚಾರ. ಅಧ್ಯಯನ ಶಿಕ್ಷಣವಾಗಬೇಕು. ಜನಾಂಗೀಯ ಅಧ್ಯಯನ ಹೊಸ ತಿಳುವಳಿಕೆಯತ್ತ ಸಮುದಾಯವನ್ನು ಅಲಿವಿನೆಚ್ಚರದಲ್ಲಿ ಮುನ್ನಡೆಸಬೇಕು. ಇದು ಪ್ರಸ್ತುತ ಈ ಕೃತಿಯಲ್ಲಿ ಸಾಧಿತವಾಗಿರುವುದು ಅಭಿನಂದನೀಯ ಸಂಗತಿ.\u003c\/p\u003e\n\u003cp\u003eಪ್ರೊi ಎಸ್.ಜಿ. ಸಿದ್ಧರಾಮಯ್ಯ\u003c\/p\u003e","brand":"BEETLE BOOK SHOP","offers":[{"title":"Default Title","offer_id":45729309327643,"sku":"","price":540.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kadugolla-budakattu-kula-kathana-1893623.png?v=1767535507","url":"https:\/\/beetlebookshop.com\/kn\/products\/kadugolla-budakattu-kula-kathana","provider":"Beetle Book Shop","version":"1.0","type":"link"}