{"product_id":"kaaldaari-a-collection-of-literary-essays","title":"ಕಾಲ್ದಾರಿ (ಸಾಹಿತ್ಯ ಪ್ರಬಂಧಗಳ ಸಂಕಲನ)","description":"\u003cp\u003eಇಲ್ಲಿ ಎರಡು ಬಗೆಯ ಬರೆಹಗಳಿವೆ. ಮೊದಲನೆಯವು ತಮ್ಮ ವಾರಿಗೆಯ ಮತ್ತು ಕಿರಿಯ ಲೇಖಕರ ಪುಸ್ತಕಗಳಿಗೆ ಬರೆದ ವಿಮರ್ಶೆ ಮತ್ತು ಮುನ್ನುಡಿಗಳು, ಬರೆಹ ಯಾಕೆ ಇಷ್ಟವಾಯಿತು ಎಂದು ಸಹೃದಯ ಸ್ಪಂದನೆಯನ್ನು ಹಂಚಿಕೊಳ್ಳುವ ಮಾದರಿಯಲ್ಲಿ ಇವು ಇವೆ. ಇಲ್ಲಿ ಚರ್ಚಿತವಾಗಿರುವ ಕೃತಿಗಳು ಹೆಚ್ಚಿನವು ಹೊಸ ತಲೆಮಾರಿಗೆ ಸೇರಿದವು. ಕೆಲವು ಅಜ್ಞಾತ ಲೇಖಕರವು. ಇಲ್ಲಿನ ಸಾಹಿತ್ಯಕ ಸ್ಪಂದನೆಗಳಲ್ಲಿ ನಿಷ್ಠುರವಾದ ವಿಮರ್ಶೆ ಮತ್ತು ಮೌಲ್ಯಮಾಪನದ ಅಂಶ ಕಡಿಮೆ ಇದೆ; ಹೊಸ ತಲೆಮಾರನ್ನು ಪ್ರೀತಿ ವಿಶ್ವಾಸಗಳಿಂದ ಬೆಳೆಸುವ ತಾಯ್ತನ ಹೆಚ್ಚಾಗಿದೆ.\u003c\/p\u003e\n\u003cp\u003eಎರಡನೆಯವು- ಸಾಹಿತ್ಯ ಲೋಕದಲ್ಲಿ ನಡೆದ ಬೇರೆ ಬೇರೆ ವಿದ್ಯಮಾನಗಳನ್ನು ಸಾಹಿತ್ಯಕವಾದರೂ, ಇವುಗಳ ಒಳಗಿರುವ ಸಾಂಸ್ಕೃತಿಕ ರಾಜಕಾರಣ ಪ್ರಶ್ನೆ, ಚರ್ಚೆಯನ್ನು ಚಾರಿತ್ರಿಕ ನೆಲೆಗೆ ಕೊಂಡೊಯ್ಯುತ್ತದೆ. ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳ ಆಡಳಿತಗಾರರಾಗಿದ್ದ ಕಾರಣ, ಅವರ ಅನುಭವ ಈ ಬರೆಹಗಳಿಗೆ ಹೊಸತೊಂದು ಆಯಾಮವನ್ನು ದೊರಕಿಸಿದೆ.\u003c\/p\u003e\n\u003cp\u003eಅಗ್ರಹಾರ ಅವರು ಶ್ರೇಷ್ಠ ಗುರುಗಳಿಂದ ಸಾಹಿತ್ಯದ ಅಭಿರುಚಿಯನ್ನು, ಹೆಸರಾಂತ ಚಿಂತಕರಾದ ಗೆಳೆಯ ಸಹಪಾಠಿಗಳ ಸಂಗದಿಂದ ಚಳವಳಿ ಪ್ರಜ್ಞೆಯನ್ನು ಭಾರತದ ಬೇರೆ ಬೇರೆ ಲೇಖಕರ ಒಡನಾಟದ ಅನುಭವವನ್ನು ಪಡೆದವರು, ಈ ಅಭಿರುಚಿ, ಪ್ರಜ್ಞೆ ಮತ್ತು ಅನುಭವಗಳು, ಪುಸ್ತಕಗಳ ಚರ್ಚೆಯ ನೆಪದಲ್ಲಿ ಇಲ್ಲಿ ಸಂಗಮಿಸಿವೆ. ಲೇಖಕರು ತಮ್ಮ ನೆನಪು ಮತ್ತು ಅನುಭವಗಳನ್ನು ವಿನೋದಪ್ರಜ್ಞೆಯಲ್ಲಿ ನಿರೂಪಿಸುವಾಗೆಲ್ಲ ಬರೆಹ ಆಪ್ತವಾಗಿದೆ. ಅವರ ಪ್ರತಿಭೆ ಸಾಂಸ್ಕೃತಿಕ ಚರಿತ್ರೆಯಾಗಿ ಹೊರಳಿದಾಗೆಲ್ಲ ಚೆನ್ನಾಗಿ ಬೆಳಗಿದೆ.\u003c\/p\u003e\n\u003cp\u003eರಹಮತ್ ತರೀಕೆರೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":49740420972827,"sku":"","price":207.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaaldaari-a-collection-of-literary-essays-4133761.jpg?v=1767531845","url":"https:\/\/beetlebookshop.com\/kn\/products\/kaaldaari-a-collection-of-literary-essays","provider":"Beetle Book Shop","version":"1.0","type":"link"}