{"product_id":"jmila-novel-by-chingiz-aitmatov","title":"ಜಿಮಿಲಾ ಚೆಂಘಿಜ್ ಐತ್ಮತೋವ್ ಅವರ ಕಾದಂಬರಿ","description":"\u003cp\u003eಜಮೀಲಾ'ಗೆ ಈಗ ಅರವತ್ತು ತುಂಬಿದೆ. ಈ ಹೊತ್ತಿನಲ್ಲಿ ಅವಳು ಕನ್ನಡದಲ್ಲಿ ಮತ್ತೆ ಅನುರಣಿಸುತ್ತಿದ್ದಾಳೆ. ಎಸ್. ಗಂಗಾಧರಯ್ಯ ಅವಳ ಧ್ವನಿಗೆ ಕನ್ನಡವನ್ನು ತುಂಬಿದ್ದಾರೆ. ಈ ಹೊಸ ಅನುವಾದ ಮತ್ತೊಂದು ಬಗೆಯ ಅನುಭವವನ್ನು ಕೊಡುತ್ತದೆ. 'ಕಿಚಿನೆ ಬಾಲ' ಈ ಬಾರಿ ಕನ್ನಡದಲ್ಲಿಯೇ ಕಥೆ ಹೇಳಿದ್ದಾನೆ. ಎಂಬುದೇ ಈ ಅನುವಾದದ ವಿಶೇಷತೆ, ಮಧ್ಯ ಏಷ್ಯಾದ ರಾಷ್ಟ್ರಗಳ ನಿತ್ಯದ ಜಗತ್ತು ಹೆಚ್ಚುಕಡಿಮೆ ನಮ್ಮದನ್ನೇ ಹೋಲುತ್ತದೆ. ಇದನ್ನು ಬಹಳ ಚೆನ್ನಾಗಿ ಗ್ರಹಿಸಿರುವ ಐತ್ಮತೋವ್ ನನ್ನು ಕನ್ನಡದ ಲೇಖಕನೆಂದು ಭಾಸವಾಗುವಂತೆ ಗಂಗಾಧರಯ್ಯ ಕನ್ನಡಿಸಿದ್ದಾರೆ.\u003cbr data-mce-fragment=\"1\"\u003eಅರವತ್ತು ವರ್ಷಗಳ ನಂತರ ಮರು ಅನುವಾದಗೊಳ್ಳುತ್ತಿರುವ‌ ಐತ್ಮತೋವ್ ಮತ್ತೊಂದು ಬಗೆಯಲ್ಲೂ ಪ್ರಸ್ತುತ. ಅಂತಿಮವಾಗಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅದೇ ಹಳೆಯ ಪ್ರಶ್ನೆಗಳೊಂದಿಗೆ ಮತ್ತೆ ತೊಳಲಾಡುತ್ತಿರುವ ಸಂದರ್ಭವಿದು. ಭೂಮಿಯ ಮೇಲೆ ಹುಟ್ಟಿದ ಎಲ್ಲರ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಬಯಸುವ ಪ್ರೀತಿಯನ್ನು ಹೆಚ್ಚು ಹೆಚ್ಚು ಬೇಡುತ್ತಿರುವ ಕಾಲವಿದು. ಅದೇ ಕಾರಣಕ್ಕೆ ಜಗತ್ತಿನ ಅತಿ ಸುಂದರ ಪ್ರೇಮಕಥಾನಕವಾದ ಜಮೀಲಾ ಈಗ ಹೆಚ್ಚು ಪ್ರಸ್ತುತ. ಅವಳ ಕಥನವನ್ನು ಕನ್ನಡದಲ್ಲಿ ಮತ್ತೆ ಕನ್ನಡಿಸಿದ ಗಂಗಾಧರಯ್ಯ ಅಭಿನಂದನೆಗೆ ಅರ್ಹರು.\u003c\/p\u003e\n\u003cp\u003e\u003cbr data-mce-fragment=\"1\"\u003eಎನ್.ಎ.ಎಂ. ಇಸ್ಮಾಯಿಲ್\u003c\/p\u003e","brand":"BEETLE BOOK SHOP","offers":[{"title":"Default Title","offer_id":48109517242651,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jmila-novel-by-chingiz-aitmatov-3407691.jpg?v=1767535087","url":"https:\/\/beetlebookshop.com\/kn\/products\/jmila-novel-by-chingiz-aitmatov","provider":"Beetle Book Shop","version":"1.0","type":"link"}