ಹೆಚ್ಚುವರಿ ಮಾಹಿತಿ
ವಿವರಣೆ
ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ 'ಜಪಾನಿನ ಸಾಹಿತ್ಯ ಚರಿತ್ರೆ' ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ.
ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ.
ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, "ಹಿಂದೆ ನಡೆದ ಘಟನೆಯಿದು, ನೋಡಿ" ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನ್ನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ - ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ.
ಆರ್. ದಿಲೀಪ್ ಕುಮಾರ್
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.