{"product_id":"jamalapurada-jademuni-kesu","title":"Jamalapurada Jademuni Case | ಕನ್ನಡ ಥ್ರಿಲ್ಲರ್","description":"\u003cp\u003e“ಆ ಜಡೆಮುನಿ ಇದ್ದಲ್ಲ. ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗಿದ್ದೆ, ಅದರ ಹಿಂದೆ ಕೊಳ್ಳಿದೆವ್ವಗಳು ಆ ಬಡೆಮುನಿಯ ಕಿಲೋಮೀಟನರ್‌ಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ತೊಂಡೂ ಸಾಕು, ಕೇಳಿದ್ದನ್ನೆಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂಡ್ಲು ಕೀಳೇಕಾದ್ರೆ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ನೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳಿದೆವ್ವಗಳಿಗೆ ಊಟವಂತೆ!\u003c\/p\u003e\n\u003cp\u003eಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡೋದು. ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ವಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಬಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು, ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ-ನಿದ್ರೆ ಇಲ್ಲೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ದೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ದಂತೆ|| ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಐಡೆಮುನಿ' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!!\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":50014878990619,"sku":"","price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jamalapurada-jademuni-kesu-3258168.jpg?v=1767530105","url":"https:\/\/beetlebookshop.com\/kn\/products\/jamalapurada-jademuni-kesu","provider":"Beetle Book Shop","version":"1.0","type":"link"}