{"product_id":"itihasada-rochaka-putagalu","title":"ಇತಿಹಾಸದ ರೋಚಕ ಪುಟಗಳು | Itihasada Rochaka Putagalu","description":"\u003cp\u003eಮಲೆಯಾಳಂ ಹೀರೋ ಇರಬಹುದೇನೋ ಎನ್ನುವಂತೆ ಸದಾ ಟ್ರಿಮ್ ಆಗಿ ನಗುನಗುತ ಎಲ್ಲರೊಡನೆ ಬೆರೆತು ಹೋಗುವ ಅನಂತ್ ಹರಿತ್ವ ಅವರೊಂದಿಗಿನ ಸ್ನೇಹದ ಒಡನಾಟಗಳು ಈಗ ದಶಕ ದಾಟಿವೆ.\u003c\/p\u003e\n\u003cp\u003eವೃತ್ತಿಯಲ್ಲಿ ಎಲೆಕ್ಟಿಕಲ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಗಾಯಕ, ಫೋಟೋಗ್ರಾಫರ್. ಹೀಗೆ ಬಹುತ್ತು ತರು ಅನಂತ್. ತಮ್ಮ ಕೆಲಸದ ಒತ್ತಡಗಳ ನಡುವೆಯೇ ಕವನದ ಸಾಲುಗಳನ್ನು ಗೀಚುತ್ತಾ, ಸ್ಕೆಚಿಂಗ್ ಮಾಡುತ್ತಾ, ಗಿಟಾರ್ ಹಿಡಿದು ಇಂಗ್ಲಿಷ್ ಹಾಡುಗಳನ್ನು ಹಾಡುವುದರಲ್ಲೂ ತಮ್ಮ ಆಸಕ್ತಿ ಬಿಂಬಿಸುವ ಅನಂತ್ ಅಪರಿಮಿತ ಜೀವನೋತ್ಸಾಹದವರು. ಇವರ ಅನೇಕ ಲೇಖನಗಳು ಕಥೆಗಳು ವಿಜಯ ಕರ್ನಾಟಕ, ವಿಶ್ವವಾಣಿ, ಹಾಯ್ ಬೆಂಗಳೂರು, ತರಂಗದಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ಇವರ ಸಾಹಿತ್ಯ ಕೃಷಿಗೆ ಸಾಕ್ಷಿ. ಇವರ ಮೊದಲ ಕೃತಿ \"ಆನ ಬಂದಳು\" ಕಥಾಸಂಕಲನ ವಿಭಿನ್ನವಾಗಿ ತೆರೆದುಕೊಳ್ಳುತ್ತಾ ಓಡಿಸಿಕೊಳ್ಳುತ್ತದೆ.\u003c\/p\u003e\n\u003cp\u003eಅನಂತ್ ಬರೆಯುವ ಗಜಲ್ ಶೈಲಿಯ ಕವನಗಳು ಮತ್ತು ಪ್ರೇಮ ಕವಿತೆಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದಷ್ಟು ಬೇಗ ಒಂದು ಕವನ ಸಂಕಲನ ಹೊರಬರಲಿ ಎನ್ನುವ ಆಶಯ ನನ್ನದು.\u003c\/p\u003e\n\u003cp\u003eಇದೀಗ ಅನಂತ್ ಅವರ ಹೊಸ ಪ್ರಯತ್ನ, ಇತಿಹಾಸದ ಘಟನಾವಳಿಗಳನ್ನ ಕಥೆಯಾಗಿಸಿ ಮಾಹಿತಿ ಪೂರ್ವಕವಾಗಿ ಓದುಗರಿಗೆ ತಲುಪಿಸುವ ಪುಸ್ತಕ ''ಇತಿಹಾಸದ ರೋಚಕ ಪುಟಗಳು'' ಓದುಗರ ಕೈ ಸೇರುತ್ತಿದೆ. ಸದಾ ಏನಾದರೂ ಕ್ರಿಯಾತ್ಮಕವಾಗಿ ಮಾಡುತ್ತಿರುವ ಅನಂತ್ ಅವರ ಈ ಮತ್ತೊಂದು ಪ್ರಯತ್ನಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು.\u003c\/p\u003e\n\u003cp\u003eಲೇಖಕಿ-ನಿರೂಪಕಿ\u003cbr\u003eರೂಪಾ ಗುರುರಾಜ್\u003c\/p\u003e","brand":"BEETLE BOOK SHOP","offers":[{"title":"Default Title","offer_id":51869743743259,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/itihasada-rochaka-putagalubeetle-book-shop-9210649.jpg?v=1773051486","url":"https:\/\/beetlebookshop.com\/kn\/products\/itihasada-rochaka-putagalu","provider":"Beetle Book Shop","version":"1.0","type":"link"}