ಹೆಚ್ಚುವರಿ ಮಾಹಿತಿ
ವಿವರಣೆ
ಮಲೆಯಾಳಂ ಹೀರೋ ಇರಬಹುದೇನೋ ಎನ್ನುವಂತೆ ಸದಾ ಟ್ರಿಮ್ ಆಗಿ ನಗುನಗುತ ಎಲ್ಲರೊಡನೆ ಬೆರೆತು ಹೋಗುವ ಅನಂತ್ ಹರಿತ್ವ ಅವರೊಂದಿಗಿನ ಸ್ನೇಹದ ಒಡನಾಟಗಳು ಈಗ ದಶಕ ದಾಟಿವೆ.
ವೃತ್ತಿಯಲ್ಲಿ ಎಲೆಕ್ಟಿಕಲ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಗಾಯಕ, ಫೋಟೋಗ್ರಾಫರ್. ಹೀಗೆ ಬಹುತ್ತು ತರು ಅನಂತ್. ತಮ್ಮ ಕೆಲಸದ ಒತ್ತಡಗಳ ನಡುವೆಯೇ ಕವನದ ಸಾಲುಗಳನ್ನು ಗೀಚುತ್ತಾ, ಸ್ಕೆಚಿಂಗ್ ಮಾಡುತ್ತಾ, ಗಿಟಾರ್ ಹಿಡಿದು ಇಂಗ್ಲಿಷ್ ಹಾಡುಗಳನ್ನು ಹಾಡುವುದರಲ್ಲೂ ತಮ್ಮ ಆಸಕ್ತಿ ಬಿಂಬಿಸುವ ಅನಂತ್ ಅಪರಿಮಿತ ಜೀವನೋತ್ಸಾಹದವರು. ಇವರ ಅನೇಕ ಲೇಖನಗಳು ಕಥೆಗಳು ವಿಜಯ ಕರ್ನಾಟಕ, ವಿಶ್ವವಾಣಿ, ಹಾಯ್ ಬೆಂಗಳೂರು, ತರಂಗದಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ಇವರ ಸಾಹಿತ್ಯ ಕೃಷಿಗೆ ಸಾಕ್ಷಿ. ಇವರ ಮೊದಲ ಕೃತಿ "ಆನ ಬಂದಳು" ಕಥಾಸಂಕಲನ ವಿಭಿನ್ನವಾಗಿ ತೆರೆದುಕೊಳ್ಳುತ್ತಾ ಓಡಿಸಿಕೊಳ್ಳುತ್ತದೆ.
ಅನಂತ್ ಬರೆಯುವ ಗಜಲ್ ಶೈಲಿಯ ಕವನಗಳು ಮತ್ತು ಪ್ರೇಮ ಕವಿತೆಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದಷ್ಟು ಬೇಗ ಒಂದು ಕವನ ಸಂಕಲನ ಹೊರಬರಲಿ ಎನ್ನುವ ಆಶಯ ನನ್ನದು.
ಇದೀಗ ಅನಂತ್ ಅವರ ಹೊಸ ಪ್ರಯತ್ನ, ಇತಿಹಾಸದ ಘಟನಾವಳಿಗಳನ್ನ ಕಥೆಯಾಗಿಸಿ ಮಾಹಿತಿ ಪೂರ್ವಕವಾಗಿ ಓದುಗರಿಗೆ ತಲುಪಿಸುವ ಪುಸ್ತಕ ''ಇತಿಹಾಸದ ರೋಚಕ ಪುಟಗಳು'' ಓದುಗರ ಕೈ ಸೇರುತ್ತಿದೆ. ಸದಾ ಏನಾದರೂ ಕ್ರಿಯಾತ್ಮಕವಾಗಿ ಮಾಡುತ್ತಿರುವ ಅನಂತ್ ಅವರ ಈ ಮತ್ತೊಂದು ಪ್ರಯತ್ನಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು.
ಲೇಖಕಿ-ನಿರೂಪಕಿ
ರೂಪಾ ಗುರುರಾಜ್
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.