{"product_id":"iran","title":"IRAN | ಇರಾನ್","description":"\u003cp class=\"MsoNormal\"\u003e\u003cspan lang=\"KN\"\u003eಹಸಿಬಿಸಿ ಸುದ್ದಿಗಳಿಗಿಂತ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಆ ಸುದ್ದಿಯನ್ನು ಪರಿಣತರ ಕಣ್ಣಲ್ಲಿ ನೋಡುವುದು ಹೆಚ್ಚು ಇಷ್ಟ. ಇರಾನ್ ಮತ್ತು ಅಮೆರಿಕದ ನಡುವಿನ ಸಂಗ್ರಾಮವನ್ನು ನಾನು ಕಂಡದ್ದು ನಮ್ಮ ನಡುವಿನ ಅತ್ಯುತ್ತಮ ಜಿಯೋಪಾಲಿಟಿಕಲ್ ಅನಲಿಸ್ಟ್ ಗೋಪಾಲಕೃಷ್ಣ ಕುಂಟಿನಿಯ ಟಿಪ್ಪಣಿಗಳಲ್ಲಿ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಅದರ ಒಳಸುಳಿಗಳನ್ನು ಅರ್ಥಮಾಡಿಕೊಂಡದ್ದು ಕುಂಟಿನಿ ಬರೆಯುತ್ತಿದ್ದ ವಿಶ್ಲೇಷಣಾತ್ಮಕ ಬರಹಗಳಲ್ಲಿ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಒಂದು ದೇಶವನ್ನು ಹೊಕ್ಕು\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಅಲ್ಲಿಯ ಸಂಸ್ಕೃತಿ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಪರಿಸ್ಥಿತಿ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eದಿವಾಳಿತನ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಹುಂಬತನ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಕೆಚ್ಚು ಮತ್ತು ಹುಚ್ಚನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾಲ್ಕು ಪತ್ರಿಕೆ ಓದಿ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಎಂಟು ಟೀವಿ ಚಾನಲ್ಲು ನೋಡಿ ಇಂಥದ್ದೊಂದು ಪುಸ್ತಕ ಬರೆಯುವುದು ಸಾಧ್ಯವಿಲ್ಲ. ಗೋಪಾಲಕೃಷ್ಣ ಕುಂಟಿನಿ ಇರಾನಿನೊಳಗೆ ಹೊಕ್ಕು ಬಂದ ಅಂಡರ್ಕವರ್ ಏಜಂಟಿನಂತೆ ಆ ದೇಶದ ಮಿಲಿಟರಿ ಆಲೋಚನೆಗಳನ್ನು\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eವರ್ತಮಾನದ ವಿದ್ಯಮಾನಗಳನ್ನು\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eರಾಜಕೀಯ ಜಾಯಮಾನವನ್ನು ಅರಿತು ಬರೆದಿರುವ ಪುಸ್ತಕ ಇದು.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಯುದ್ಧ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಜೂಜು ಮತ್ತು ಕ್ರಿಕೆಟ್ ಮಾತು ಬಂದಾಗ ಸಾಮಾನ್ಯವಾಗಿ ಮನಸ್ಸು ಒಂದು ದಿಕ್ಕಿಗೆ ಸೆಳೆಯಲ್ಪಡುತ್ತದೆ. ಯಾರದ್ದೋ ಪರ ನಿಲ್ಲುವಂತೆ ಬುದ್ಧಿ ಒತ್ತಾಯಿಸುತ್ತದೆ. ಎಲ್ಲ ತರ್ಕಗಳನ್ನು ಬದಿಗಿಟ್ಟು ವ್ಯಸನಕೋರನಂತೆ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಯುದ್ಧಾಂಧನಂತೆ ಬರೆಯುವ ಆಸೆಯಾಗುತ್ತದೆ. ಈ ಪುಸ್ತಕ ಬರೆಯುವ ಹೊತ್ತಿಗೆ ತಕ್ಕಡಿ ಎತ್ತಲೂ ಬಾಗಿಲ್ಲ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಯಾವುದನ್ನೂ ಕುಂಟಿನಿ ಮಮಕಾರದಲ್ಲಿ ತೂಗಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಟ್ಟಿಲ್ಲ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಹೇಳಬೇಕಾದ ಮಾತುಗಳನ್ನು ಆಡದೇ ಬಿಟ್ಟಿಲ್ಲ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಇಲ್ಲಿ ಇರಾನ್ ದಿಟ್ಟತನ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಕ್ರೌರ್ಯ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಪಿತೂರಿ ಎಲ್ಲವೂ ದಾಖಲಾಗಿದೆ. ಇರಾನ್ ನಡೆಸುತ್ತಿರುವ ಹೋರಾಟ ಕೇವಲ ಪ್ರತಿಕ್ರಿಯೆ ಮಾತ್ರ ಅಲ್ಲ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಪ್ರತಿಭಟನೆ ಕೂಡ. ಇರಾನ್ ತೋರುತ್ತಿರುವ ಸಿಟ್ಟಿನ ಮೂಲ ಅದರ ಸಂಪತ್ತನ್ನಷ್ಟೇ ಆಧರಿಸಿಲ್ಲ\u003c\/span\u003e\u003cspan lang=\"EN-US\"\u003e, \u003c\/span\u003e\u003cspan lang=\"KN\"\u003eಸ್ವಾಭಿಮಾನದ ಹೇಳಿಕೆಯೂ ಆಗಿದೆ ಎಂಬುದನ್ನು ಈ ಪುಸ್ತಕ ಮನದಟ್ಟು ಮಾಡುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eನಮ್ಮ ಕಾಲದ ಯುದ್ಧವನ್ನು ನಮಗೆ ತೋರಿಸುತ್ತಿರುವ ಈ ಸಂಜಯ ಗೋಪಾಲಕೃಷ್ಣ ಕುಂಟಿನಿಗೆ ಥ್ಯಾಂಕ್ಸ್.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"EN-US\"\u003e-\u003c\/span\u003e\u003cspan lang=\"KN\"\u003eಜೋಗಿ\u003c\/span\u003e\u003c\/p\u003e","brand":"Sawanna Enterprises","offers":[{"title":"Default Title","offer_id":52135997964571,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/0.jpg?v=1777453154","url":"https:\/\/beetlebookshop.com\/kn\/products\/iran","provider":"Beetle Book Shop","version":"1.0","type":"link"}