{"product_id":"imayam-kathegalu","title":"Imayam Kathegalu | ಇಮಯಂ ಕಥೆಗಳು","description":"\u003cp\u003eಲೇಖಕ ಇಮೈಯಮ್ ತಮಿಳು ಸಾಹಿತ್ಯದ ಮುಖ್ಯ ಬರಹಗಾರರಲ್ಲಿ ಒಬ್ಬರು. ಸಣ್ಣಕತೆ ಮತ್ತು ಕಾದಂಬರಿ ಪ್ರಕಾರಗಳನ್ನು. ಅಭಿವ್ಯಕ್ತಿಯ ತಮ್ಮ ಕ್ರಮವನ್ನಾಗಿಸಿಕೊಂಡಿರುವ ಇವರು ಗದ್ಯ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವಂತಹವರು. ಬಹುತೇಕ ಇವರ ಕಥಾವಸ್ತುಗಳು ಸಾಮಾನ್ಯರ ಇದುಕನ್ನು ಪ್ರತಿಬಿಂಬಿಸುವಂಥಹವು ಮತ್ತು ಮಾನವ ಸಂಬಂಧಗಳ ಸಂಕೀರ್ಣತೆಗಳನ್ನು ಪರೀಕ್ಷಿಸುವಂಥಹವು.\u003c\/p\u003e\n\u003cp\u003eಇಮೈಯಮ್ಬರ ಹತ್ತು ಕಥೆಗಳುಳ್ಳ ಈ ಗುಚ್ಚ ಅವರ ಸರಳ ಮತ್ತು ಸಿಕ್ಕುಗಳಿಲ್ಲದ ಕಥಾ ಹಂದರವನ್ನು ಮುಂದಿಡುತ್ತದೆ. ದಿನನಿತ್ಯ ನಾವು ಕಾಣುವ\/ ಕೇಳುವ, ಪತ್ರಿಕೆಗಳಲ್ಲಿ ಓದುವ ವಸ್ತುಗಳು ಮತ್ತು ಸಾಮಾನ್ಯರೊಳಗಿನ ಪ್ರೀತಿ, ಕ್ರೌರ್ಯ, ಸಹನೆ, ಹಿಂಸೆಗಳು ಈ ಕಥೆಗಳಲ್ಲಿ ಅನಾವರಣಗೊಳ್ಳುವ ಪರಿ ಸರಳವಾಗಿ ಕಂಡರೂ ಆಳದಲ್ಲಿ ಅವು ಏನನ್ನೋ ಹುಡುಕುತ್ತಿರುತ್ತವೆ; ಮಾನವ ಗುಣಗಳಿಗೆ ಯಾವುದೇ ವಿಶೇಷಣಗಳನ್ನು ಅಂಟಿಸದೆ ಮುಕ್ತವಾಗಿ ಬಿಡಿಸುತ್ತಾ ಅವುಗಳನ್ನು ಓದುಗರ ತೀರ್ಮಾನಕ್ಕೆ ಬಿಡುತ್ತವೆ. ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆಯೇನೋ ಎಂಬಂತಹ ಸರಳ ಚಿತ್ರಣಗಳುಳ್ಳ ಇವು ಸರಾಗವಾಗಿ ಓದಿಸಿಕೊಳ್ಳುತ್ತವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51603919995163,"sku":null,"price":166.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/imayam-kathegalubeetle-book-shop-5082334.jpg?v=1767952686","url":"https:\/\/beetlebookshop.com\/kn\/products\/imayam-kathegalu","provider":"Beetle Book Shop","version":"1.0","type":"link"}