ಹೆಚ್ಚುವರಿ ಮಾಹಿತಿ
ವಿವರಣೆ
ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಒಂದು ವೈಯಕ್ತಿಕ ಚಿತ್ರವನ್ನು ರಚಿಸಿಕೊಂಡಿರುತ್ತಾನೆ. ಅದು ಸಾಮಾನ್ಯವಾಗಿ ಧನಾತ್ಮಕವಾಗಿರುತ್ತದೆ. ಅದನ್ನು ಅವರು ನಿಜವೆಂದೇ ನಂಬುತ್ತಾರೆ; ಅದನ್ನು ಪ್ರೀತಿಸುತ್ತಾರೆ; ಹಾಗೆ ಮಾಡಬೇಕು ಕೂಡ. ತಮ್ಮನ್ನು ತಾವು ಪ್ರೀತಿಸಲಾರದವರು ಬೇರೆಯವನ್ನು ಹೇಗೆ ತಾನೆ ಪ್ರೀತಿಸಬಲ್ಲರು! ಜನರು ತಮಗೆ ತಾವು ಆರೋಪಿಸಿಕೊಂಡಿರುವ ಉನ್ನತ ಗುಣಗಳು ಅವರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಅದು ಬೇರೆ ವಿಚಾರ. ಅವರು ತಾವು ರಚಿಸಿಕೊಂಡಿರುವ ಚಿತ್ರವನ್ನು ಜತನದಿಂದ ಕಾಪಾಡಿಕೊಂಡು ಬರುತ್ತಾರೆ. ಹಾಗೆ ಮಾಡುವಂತೆ ಪ್ರೇರೇಪಿಸಲು, ಅವರಿಗೆ ಅರಿವಿಲ್ಲದ, ಮಾನಸಿಕ ಪ್ರಕ್ರಿಯೆಯೊಂದು ಸದಾ ಜಾಗ್ರತವಾಗಿರುತ್ತದೆ; ಅದೊಂದು ಮನೋವೈಜ್ಞಾನಿಕ ಸತ್ಯ. ಅದನ್ನು ಮನಃಶಾಸ್ತ್ರದಲ್ಲಿ ಆತ್ಮರಕ್ಷಣೆ (ಸ್ವಯಂರಕ್ಷಣೆ) ಎಂದು ಕರೆಯುತ್ತಾರೆ; ಆಂಗ್ಲಭಾಷೆಯಲ್ಲಿ ಅದನ್ನು ಸೆಲ್ಫ್ ಡಿಫೆನ್ಸ್ ಎನ್ನುತ್ತಾರೆ. ಆದುದರಿಂದ ನಾನು ಇಲ್ಲಿ ಬರೆದಿರುವುದು ಜನರ ಕಣ್ಣಿಗೆ ನಾನು ಹೇಗೆ ಕಾಣಬೇಕು ಎಂದು ಕೊಂಡಿರುವೆನೋ ಹಾಗೆ; ಸ್ವರಚಿತ ಸ್ವಯಂಚಿತ್ರಣ. ಹೊರಗಿನವರಿಗೆ ಅದು ಸಲ ಎಂದು ಕಾಣದಿರಬಹುದು. ಅದು ಅವರಿಗೆ ಬಿಟ್ಟದ್ದು.
ಇಷ್ಟಾದರೂ ತಮ್ಮ ವಿಷಯವಾಗಿ ಬೇರೆ ಯಾರಿಗೂ ತಿಳಿಯದ, ತಿಳಿದಿದ್ದರೂ ಅವರಿಗೆ ಹೇಳಲು ಬರದ, ತಾವೇ ಹೇಳಬೇಕಾದ, ಕೆಲವು ಸಂಗತಿಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇರುತ್ತವೆ. ಅದನ್ನು ಹೇಳಬೇಕೆಂಬ ಒಂದು ಬಗೆಯ ತುಡಿತ ಎಲ್ಲರಲ್ಲೂ ಇರುತ್ತದೆ. ಅದು ಆತ್ಮಕಥೆಯ ರೂಪದಲ್ಲಿ ಹೊರಬರಬಹುದು. ಹೆಸರಾಂತ ಆಂಗ್ಲ ಸಾಹಿತಿ ಸಾಮರ್‌ಸೆಟ್ ಮಾಮ್ ಹೇಳಿರುವಂತೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಕಾದಂಬರಿಗೆ ಸಾಕಾಗುವಷ್ಟು ವಿಷಯಗಳಿರುತ್ತವೆ. ಅದನ್ನು ಹೇಳುವ ರೀತಿಯಲ್ಲಿ ಹೇಳಿದರೆ ಅದೇ ಒಂದು ಸಾಹಿತ್ಯ ಕೃತಿಯಾಗಬಲ್ಲದು.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.