{"product_id":"hulimavina-mara-autobiography-of-p-lankesh","title":"ಹುಳಿಮಾವಿನ ಮರ | ಪಿ. ಲಂಕೇಶ್‌ ಆತ್ಮಕಥೆ","description":"\u003cp\u003eಕಳೆದ ಮೂರು ವರ್ಷದ (1994-1997) ಅವಧಿಯಲ್ಲಿ ನನ್ನ ಕಾಯಿಲೆ, ಒತ್ತಡ, ಆತಂಕದ ದಿನಗಳಲ್ಲಿ ಬಿಡುವು ದೊರೆತಾಗಲೆಲ್ಲ ನೆನೆಸಿಕೊಂಡ ನನ್ನ ಬದುಕಿನ ಕ್ಷಣಗಳು ಈ ಪುಸ್ತಕದಲ್ಲಿವೆ.\u003c\/p\u003e\n\u003cp\u003eಮನುಷ್ಯ ತನ್ನ ಬಗ್ಗೆ ಬರೆದುಕೊಳ್ಳುವುದು ಕಷ್ಟ. ನಾನು ನನ್ನ ಬಗ್ಗೆ ತಿಳಿದಿದ್ದು, ನನ್ನ ಪರಿಚಿತರು ನನ್ನ ಬಗ್ಗೆ ಗ್ರಹಿಸಿದ್ದು, ನನ್ನ ಕೃತಿಗಳಿಂದ ಓದುಗರು ಊಹಿಸಿದ್ದು ಇದೆಲ್ಲ ಪೂರ್ತಿ ನಿಜವಿರಲಾರದು; ಹಾಗೆಯೇ ಇವೆಲ್ಲದರಲ್ಲಿ ಸತ್ಯದ ಅಂಶ ಇರಹುದು; ಈ ಅಂಶಕ್ಕಾಗಿ ಹುಡುಕುವುದು ಆತ್ಮಕಥನ ಬರೆಯುವವನ ಆಶಯ. ಹೀಗೆ ಹೇಳುತ್ತಲೇ ನಾನು ನಿಮಗೆ ಒಂದು ಭರವಸೆ ಕೊಡಬಲ್ಲೆ; ಇಲ್ಲಿ ಹೇಳಿರುವುದರಲ್ಲಿ ಒತ್ತು, ಕೊಂಬು, ಕಾಮ ಸ್ವಲ್ಪ ಹೆಚ್ಚುಕಮ್ಮಿಯಾಗಿರಬಹುದು. ಆದರೆ ಲೆಕ್ಕ, ವ್ಯಾಮೋಹ ಮತ್ತು ವಿಷಾದ ಮುಕ್ಕಾಗದೆ ಬಂದಿದೆ. ಹುಲುಮಾನವನಾದ ನಾನು ಬರೆಯುವಲ್ಲಿ ತಪ್ಪೇ ಮಾಡಿದ್ದರೂ ಅದು ಬೇಕಂತಲೇ ಮಾಡಿದ ತಪ್ಪಲ್ಲ.\u003c\/p\u003e\n\u003cp\u003eಪಿ . ಲಂಕೇಶ್\u003c\/p\u003e","brand":"BEETLE BOOK SHOP","offers":[{"title":"Default Title","offer_id":45234405638427,"sku":"","price":361.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hulimavina-mara-autobiography-of-p-lankesh-4754121.png?v=1767536106","url":"https:\/\/beetlebookshop.com\/kn\/products\/hulimavina-mara-autobiography-of-p-lankesh","provider":"Beetle Book Shop","version":"1.0","type":"link"}