ಹೆಚ್ಚುವರಿ ಮಾಹಿತಿ
ವಿವರಣೆ
ತಮ್ಮ ಪುಟ್ಟ ಪಾದದ ಗುರುತು' ಮತ್ತು 'ಗಾಂಧಿ ಚಿತ್ರದ ನೋಟು' ಎಂಬ ಮೊದಲೆರಡು ಕಥಾ ಸಂಕಲನಗಳಲ್ಲಿದ್ದ ಕೌಟುಂಬಿಕ ವ್ಯಾಪ್ತಿಯನ್ನು ಮೀರಿದ ಸಾಮಾಜಿಕ ಪರಿಸರವನ್ನು ಕತೆಗಳ ಒಡಲಿಗೆ ಸೇರಿಸಿಕೊಳ್ಳಲು ಸುನಂದಾ ಕಡಮೆ ಪ್ರಯತ್ನಿಸಿದ್ದು, ಅವರ ಆನಂತರದ 'ಕಂಬಗಳ ಮರೆಯಲ್ಲ' ಮತ್ತು 'ತುದಿ ಮಡಚಿಟ್ಟ ಪುಟ' ಕಥಾ ಸಂಕಲನಗಳಿಂದ ಕಾಣಿಸುತ್ತದೆ. ಯಾವುದೇ ಕಥೆಗಾರ(ರ್ತಿಯರಿಗೂ ತಮ್ಮ ಕಥನ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಕತೆಯನ್ನು ಪಾತ್ರದ ಮೂಲಕ ಗ್ರಹಿಸುವದಕ್ಕೂ ಒಟ್ಟ ಸನ್ನಿವೇಶಗಳನ್ನು ಗ್ರಹಿಸುತ್ತ ಬರೆಯುವದಕ್ಕೂ ವ್ಯತ್ಯಾಸವಿದೆ.
ಪ್ರಸ್ತುತ ಈ 'ಹೈವೇ 63' ಕಾದಂಬರಿಯಲ್ಲಿಯ ತುಂಬಾ ಗಮನಾರ್ಹ ಮೊದಲ ಅಧ್ಯಾಯದಲ್ಲಿಯೇ ಗರ್ಭಿಣಿ ಶಾಲನಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಗಳನ್ನು ಕೊಡಲು ನಳಿನಿ ಆಶಾ ಕಾರ್ಯಕರ್ತೆಯಾಗಿ ಕಾಡಿನಲ್ಲಿ ಹೊರಟಿರುತ್ತಾಳೆ. ಕಾಡಿನ ಮಹಾಮೌನವೇ ಭಯ ಹುಟ್ಟಸುವಂಥದ್ದು. ಸಣ್ಣ ಶಬ್ದವೂ ಮನವನ್ನು ಅಲ್ಲಾಡಿಸುವ ವಾತಾವರಣ, ನಳಿನಿ ಒಬ್ಬಂಟಿ ಹೆಂಗಸು ಬೇರೆ. ಕಾಡಿನಲ್ಲಿ ನಡೆಯುವಾಗ ಯಾರೋ ಹಿಂದೆ ಬೆನ್ನತ್ತಿದ ಅನುಮಾನ. ಕಾಡಿನಲ್ಲಿ ನಡೆಯುವ ಅಕ್ರಮಗಳ ನೆನಪು, ಹೀಗೆ ಇಡೀ ಅಧ್ಯಾಯದಲ್ಲಿ ನಳಿನಿ ಮೂಲಕ ಪ್ರಜ್ಞಾ ಪ್ರವಾಹ ಹರಿಯುತ್ತದೆ. ಭಾವ ತೀವ್ರತೆಯಿದೆ. ಕಾಲದ ನಿರ್ವಹಣೆಯೂ ಬಿಗಿಯಾಗಿದೆ.
ಕಾದಂಬರಿಕಾರರು ಒಂದು ಲೋಕವನ್ನು ನಳಿನಿಯ ಮೂಲಕ ಗ್ರಹಿಸಿರುವುದರಿಂದ ಬಂಧ ಜಗಿಯಾಗಿದೆ. ಸನ್ನಿವೇಶದ ಚಿತ್ರಣದಲ್ಲಿಯೇ ಒಂದು ಒತ್ತಡ ಇದೆ. ಇಂಥ ಸನ್ನಿವೇಶಗಳು ಕಾದಂಬರಿಕಾರರಿಗೂ ಸವಾಲನ್ನೊಡ್ಡುತ್ತವೆ.
- ಅಮರೇಶ ನುಗಡೋಣಿ (ಪ್ರವೇಶಿಕೆಯಿಂದ )
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.