Hēmareḍḍi mallam'mana katheyu - Beetle Book Shop

ಹೇಮರೆಡ್ಡಿ ಮಲ್ಲಮ್ಮನ ಕಥೆಯು | Hemareddy Mallammana Katheyu

Rs. 252.00
Sale price  Rs. 252.00 ಸಾಮಾನ್ಯ ಬೆಲೆ  Rs. 280.00
ಉತ್ಪನ್ನದ ಮಾಹಿತಿಗೆ ತೆರಳಿ
Hēmareḍḍi mallam'mana katheyu - Beetle Book Shop

ಹೇಮರೆಡ್ಡಿ ಮಲ್ಲಮ್ಮನ ಕಥೆಯು | Hemareddy Mallammana Katheyu

Rs. 252.00
Sale price  Rs. 252.00 ಸಾಮಾನ್ಯ ಬೆಲೆ  Rs. 280.00

ಮಾರಾಟಗಾರರು : BEETLE BOOK SHOP

ಕುಂ.ವೀ. ಅವರ ಕಾದಂಬರಿ ’ಹೇಮರೆಡ್ಡಿ ಮಲ್ಲಮ್ಮನ ಕಥೆಯು’. ಭೂಪಟಕ್ಕೂ ತನ್ನ ಅಸ್ತಿತ್ವದ ಸುಳಿವು ನೀಡದಿರುವ ವಾಗಿಲಿ'ಯಲ್ಲಿ ನಡೆಯುವ ಹೇಮರೆಡ್ಡಿ ಮಲ್ಲಮ್ಮ ನಾಟಕ ಮತ್ತು ಅದರ ಶತದಿನೋತ್ಸವ ಕಥೆಯು ಈ ಕಾದಂಬರಿ ವಸ್ತು. ಹಲವು ಕತೆಗಳ ತರುರಾಜಿಯಾಗಿ ವಿಸ್ತರಿಸಿಕೊಂಡಿದೆ. ವಾಗಿಲಿಗೆ ಬರುವ ನಾಟಕ ತಂಡ ಮತ್ತು ನಟಿ ಪದ್ಮಾವತಿಯರು ನೆಪವಾಗಿ ಇಡೀ ವಾಗಿಲಿಯ ದಣಿಗಳ, ಕೊಲೆಗಡುಕರ, ರಾಜಕೀಯದ, ಜನಸಾಮಾನ್ಯರ ಬದುಕು ತೆರೆದುಕೊಳ್ಳುತ್ತದೆ. ವಾಗಿಲಿ ಎಂಬ ತ್ರಿಕೋನಾಕೃತಿಯ ಮೂರೂ ಮೂಲೆಯಲ್ಲಿ ಪ್ರೇಮ ಹಿಂಸೆ ತ್ಯಾಗ, ಅದರ ಒಳ ಆವರಣದಲ್ಲಿ ಮೃಗೀಯ ಗ್ರಾಮೀಣ ಬದುಕು.’ ಅನಾವರಣಗೊಳ್ಳುತ್ತದೆ.
ವಿಮರ್ಶಕ ಓ.ಎಲ್ ನಾಗಭೂಷಣಸ್ವಾಮಿ ಅವರು ಈ ಕಾದಂಬರಿ ಕುರಿತು’ ಒಂದು ಸಂಗತಿಯನ್ನು ಹತ್ತು ಬಗೆಗಳಲ್ಲಿ ವಿವರಿಸಿ ಇಪ್ಪತ್ತು ಸಾಧ್ಯತೆಗಳನ್ನು ಹೊಳೆಯಿಸಿ ತಬ್ಬಿಬ್ಬುಗೊಳಿಸುವ ವಾಕ್ಯಗಳ ಸಮೃದ್ದಿ: ಉತ್ತೇಕ್ಷೆಯ ಮೂಲಕ ವಿಡಂಬನೆ ಮಾಡುತ್ತಿರುವಾಗಲೇ ವಾಸ್ತವದ ಭೀಕರತೆಯನ್ನು ಕಾಣಿಸಿ ದಿಗ್ದಮೆ ಮೂಡಿಸುವ ಕೌಶಲ, ಈ ಕಾದಂಬರಿಯೊಂದು ದುಃಸ್ವಪ್ನಗಳ ಪರಿಶೆ', 'ತಮ್ಮ ಊರಿನ ಹೆಸರು ಗೊತ್ತಿರಬಹುದಾದ ಆದರೆ 'ಈ ದೇಶದ ಹೆಸರು ತಿಳಿದಿಲ್ಲದ' ಸದಾ 'ಸಾಮಾಜಿಕ ಅವಗಢಗಳಿಗೆ ಗುರಿಯಾಗುತ್ತಲೇ ಇರುವ ’ಶಿಕ್ಷಣವಂಚಿತ ಪ್ರಜಾನಿವಹ'ವನ್ನು ಮಲ್ಲಮ್ಮ ಕಲಕಿದ ಪರಿಯನ್ನು ವಾಗಿಲಿಯ ಶಿಕ್ಷಕ - ನಿರೂಪಕ, ತನ್ನ ಗೆಳೆಯ ತೆಲುಗಿನ ಕತೆಗಾರ ಬರೆದ ಕಾದಂಬರಿಯ ಮೂಲಕ ಕಡೆದಿಡುತ್ತಾನೆ. 'ಕಾದಂಬರಿಯೊಳಗಿನ ಕಲ್ಲಿನ ವಾಸ್ತವ ವಾಗಿಲಿಯಲ್ಲಿ ಸಂಭವಿಸುತ್ತಿರುವ ವರ್ತಮಾನದೊಂದಿಗೆ ಬೆರೆತು ನಿಜ ಬದುಕಿನ ನಿಜ ವ್ಯಕ್ತಿಗಳು ಕಾದಂಬರಿಯ ಪಾತ್ರಗಳಾಗಿ, ಕಲ್ಲಿನ ಪಾತ್ರಗಳು ನಿಜ ಬದುಕಿನಲ್ಲಿ ಕಾಣಿಸಿಕೊಂಡು, ಒಂದೊಂದು ಪ್ರಮುಖ ಪಾತ್ರವೂ ಹಲವು ಹೆಸರುಗಳನ್ನು ಹೊತ್ತು ಹಲವು ಅವತಾರಗಳನ್ನು ತಳೆದು, ತೆಲುಗಿನ ಲೇಖಕನ ವೈಯಕ್ತಿಕ ಬದುಕು, ಅವನ ಹಸ್ತಪ್ರತಿ ಓದುತ್ತಿರುವ ನಿರೂಪಕನ ಬದುಕು, ಈ ಕಾದಂಬರಿ ಬರೆಯುತ್ತಿರುವ ಕುಂವೀ ವ್ಯಕ್ತಿತ್ವ ಎಲ್ಲ ಬೆರೆತು, ಬದುಕಿನ ಅನ್ವೇಷಣೆ, ಸಾಹಿತ್ಯದ ಪರಿಶೀಲನೆ ಕಾದಂಬರಿಕಾರನ ಬದುಕಿನ ವಿಶ್ಲೇಷಣೆ ಎಲ್ಲ ಹೆಣಿಗೆಗೊಂಡು ಅತ್ಯಂತ ಕೌಶಲದಿಂದ ರೂಪುತಳೆದಿರುವ ಈ ಕೃತಿ ಕುಂವೀ ಅವರ ಇದುವರೆಗಿನ ಬರವಣಿಗೆಯ ಎಲ್ಲ ಮುಖ್ಯ ಅಂಶಗಳನ್ನು, ಧೋರಣೆಗಳನ್ನು - ಒಳಗೊಂಡೂ ಭಿನ್ನವಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು