{"product_id":"haridasara-keerthanegalalli-upachara-sahitya","title":"ಹರಿದಾಸರ ಕೀರ್ತನೆಗಳಲ್ಲಿ ಉಪಚಾರ ಸಾಹಿತ್ಯ","description":"\u003cp\u003eಹರಿದಾಸರ ಪದ-ಕೀರ್ತನೆ -ಸುಳಾದಿ-ಉಗಾಭೋಗ ಇತ್ಯಾದಿಗಳಲ್ಲಿ ಕಂಡುಬರುವ 'ಉಪಚಾರ' ಎಂಬ ಮಾತನ್ನು, ಸನ್ನಿವೇಶವನ್ನು, ಪದಗಳನ್ನು ಪರಿಭಾಷೆಯಾಗಿ ಪರಿಗಣಿಸಬಹುದಾದ ಎಲ್ಲವನ್ನೂ ಸಂಗ್ರಹಿಸಿ ಡಾ.ಬಿ.ಎ. ಶಾರದ ಮತ್ತು ಎನ್.ಕುಸುಮ ಅವರು ಈ ಪುಸ್ತಕವನ್ನು ಬರೆದುಕೊಟ್ಟಿದ್ದಾರೆ. ಇದು ಕನ್ನಡಿಗರಿಗೂ ಕನ್ನಡ ಭಾಷೆಗೂ ಕರ್ನಾಟಕ ಸಂಗೀತಕ್ಕೂ ಅಮೂಲ್ಯವಾದ ಕೊಡುಗೆ ಎಂದು ನನಗನ್ನಿಸಿದೆ.\u003c\/p\u003e\n\u003cp\u003eಸುಮಾರು ೨೮೦ ಪುಟಗಳನ್ನು ಮೀರಿಕೊಂಡು ಉಪಚಾರ ಸಾಹಿತ್ಯವೆಂದು ತಾವು ಕರೆದುಕೊಂಡಿರುವ ಶೀರ್ಷಿಕೆಯಲ್ಲಿ ಭಕ್ಷ್ಯಭೋಜ್ಯಪೇಯಪಾನೀಯಗಳು, ಹಣ್ಣು ತರಕಾರಿಗಳು, ಔಷಧೋಪಚಾರ, ಪದ್ಮವಿಚಾರ, ನೀತಿ ಬೋಧೆ ಇವುಗಳ ಪ್ರಸಕ್ತಿಯಲ್ಲಿ ಇರುವ ವಿಡಂಬನೆ-ಮೌಲ್ಯ-ನಿಷ್ಠೆ ಶ್ರದ್ದೆಗಳು ಇತ್ಯಾದಿ ವಿಷಯಗಳನ್ನು ಸವಿವರವಾಗಿ ತಿಳಿಸಿ ಅಲ್ಲಲ್ಲಿ ಆಯಾಯಾ ವಸ್ತುವಿಷಯಗಳಿಗೆ ಉತ್ತಮ ಉದಾಹರಣೆಗಳನ್ನೂ ನೀಡಿಬಿಟ್ಟಿದ್ದಾರೆ.\u003c\/p\u003e\n\u003cp\u003eಕನ್ನಡ ವಾಚಕಮಿತ್ರರು ಇಂತಹ ಪುಸ್ತಕಗಳನ್ನು ಅತ್ಯಂತ ಆದರದಿಂದ ಬರಮಾಡಿಕೊಳ್ಳಬೇಕು. ಇಲ್ಲಿರುವ ಕೆಲವು ಸಾಹಿತ್ಯಕೃತಿಗಳನ್ನು ಬಳಸಿ ಮಕ್ಕಳಿಗೆ ಯುವಕ ಯುವತಿಯರಿಗೆ ಸಂಗೀತದ ಸರಳ ಹಾಡುಗಳಾಗಿ ಹೇಳಿಕೊಟ್ಟರೆ ಆಗ ಅವೆರಲ್ಲಿ ಸುಸಂಸ್ಕೃತಿ ಹೆಚ್ಚಾಗುತ್ತದೆ ಮತ್ತು ನಮ್ಮ ಕುಟುಂಬದ ಮೌಲ್ಯಗಳ ಪರಿಚಯವೂ ಅವರಿಗಾಗುತ್ತದೆ.\u003c\/p\u003e\n\u003cp\u003e-ಡಾ.ರಾ.ಸ.ನಂದಕುಮಾರ್\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49199298609435,"sku":"","price":337.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/haridasara-keerthanegalalli-upachara-sahitya-1037450.jpg?v=1767535625","url":"https:\/\/beetlebookshop.com\/kn\/products\/haridasara-keerthanegalalli-upachara-sahitya","provider":"Beetle Book Shop","version":"1.0","type":"link"}