{"product_id":"hair-pin-kannadanovel-beetlbookshop","title":"ಹೇರ್‌ ಪಿನ್‌ - Hair Pin ( ಕಾದಂಬರಿ )","description":"\u003cp data-path-to-node=\"4\"\u003eಇಲ್ಲಿಂದ ಓದುಗರಿಗೆ ಹೇರ್ಪಿನ್ ಸುಳಿವು ಸಿಗುತ್ತಾ ಹೋಗುತ್ತದೆ. ಇದನ್ನು ನಾವು ಸೂಕ್ಷ್ಮಾತಿಸೂಕ್ಷ್ಮವಾಗಿ ಬಾಗುವುದು ಎನ್ನಬಹುದು, ಹೇರ್ಪಿನ್ ಮೌನವಾಗಿ ಬಾಗಿದಂತೆ! ಈ ತರಹದ 'ಹೊಂದಾಣಿಕೆ'ಯನ್ನು ಆಧುನಿಕ ಕಾಲದಲ್ಲಿ ಡಿಪ್ಲೋಮ್ಯಾಟ್ ವರ್ತನೆ ಎಂದು ಸಮರ್ಥನೆ ಮಾಡಿಕೊಳ್ಳುತ್ತೇವೆ. ಯಾರೋ 'Skin to skin there is no sin' ಎಂದು ಕೂಗಿದಂತೆ ಕೇಳಿಸುತ್ತದೆ, ಅದನ್ನು ನಾವು ಭ್ರಮೆ ಎಂದುಕೊಳ್ಳಬಾರದು. ಕಥಾನಾಯಕ ಕೂಡ ಸಹೋದ್ಯೋಗಿಯೊಂದಿಗೆ ಇದೇ ರೀತಿ ನಡೆದುಕೊಳ್ಳುತ್ತಾನೆ. ಇಬ್ಬರೂ ಒಂದೇ ದೋಣಿಯಲ್ಲಿ ಪಾಪಪ್ರಜ್ಞೆ ಇಲ್ಲದೆ ಸಾಗುತ್ತಾರೆ. ಆದರೆ ಇಲ್ಲಿ ಮತ್ತೊಮ್ಮೆ ಹೇರ್ಪಿನ್ ಕಣ್ಣ ಮುಂದೆ ನಿಲ್ಲುತ್ತದೆ. ಇದು ಕೊನೆಗೆ ಒಂದಾದಂತೆ ಕಾಣುತ್ತದೆ, ಆದರೆ ಹೇರ್ಪಿನ್ ಮಧ್ಯೆ ಒಂದು ಸಣ್ಣ, ಕಣ್ಣಿಗೆ ಕಾಣದ ಗ್ಯಾಪ್ ಉಳಿದಿರುತ್ತದೆ. ಎಷ್ಟೇ ಒತ್ತಿ ಹಿಡಿದರೂ, ಹೇರ್ಪಿನ್ ಗ್ಯಾಪ್ ಉಳಿದೇಬಿಡುತ್ತದೆ. ಇದೇ ಹೇರ್ಪಿನ್ ವಿಶೇಷತೆ. ಆದರೆ ನೋಡಲು ಒಂದಾದಂತೆ ಕಾಣುತ್ತದೆ. ಬಾಗಿದ್ದೂ ಕಾಣುವುದಿಲ್ಲ, ಕೂಡಿದ್ದೂ ಸತ್ಯವಲ್ಲ. ವಾಹ್! ಕಾದಂಬರಿಕಾರ ಗೆಲ್ಲುವುದು ಇಲ್ಲಿಯೇ.\u003c\/p\u003e\n\u003cp data-path-to-node=\"5\"\u003e\u003cb data-path-to-node=\"5\" data-index-in-node=\"0\"\u003e-ಸಿದ್ದು ಯಾಪಲಪರವಿ\u003c\/b\u003e (ಮುನ್ನುಡಿಯಿಂದ)\u003c\/p\u003e","brand":"BEETLE BOOK SHOP","offers":[{"title":"Default Title","offer_id":52015295103259,"sku":null,"price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-05at1.13.32PM.jpg?v=1775376116","url":"https:\/\/beetlebookshop.com\/kn\/products\/hair-pin-kannadanovel-beetlbookshop","provider":"Beetle Book Shop","version":"1.0","type":"link"}