{"product_id":"gurutina-banagalu","title":"ಗುರುತಿನ ಬಾಣಗಳು","description":"ಹರೀಶ್ ಗಂಗಾಧರ್ ಅವರ ಈ ಪುಸ್ತಕ ಕನ್ನಡದ ಮಟ್ಟಿಗೆ ತೀರಾ ಹೊಸದು. ಅವರು ನಮಗೆ ಚೆನ್ನಾಗಿ ಗುರುತ್ತಿರುವ ಬಾಣಗಳನ್ನು ನಮ್ಮತ್ತ ಎಸೆದು ನಮಗೇ ಗಾಯಮಾಡಬಲ್ಲ ಸಾಮರ್ಥ್ಯ ಹೊಂದಿರುವ ಲೇಖಕ, ಬೆಂಗಳೂರಿನ ಮಧ್ಯಮ ವರ್ಗದ ಇಂಗ್ಲಿಷ್ ಭಾಷೆಯನ್ನು ಯಾವುದೇ ಸಂಕೋಚವಿಲ್ಲದೆ ಪುಸ್ತಕದುದ್ದಕ್ಕೂ ಬಳಸುವ ಹರೀಶ್, ವಸ್ತುವಿನ ಆಯ್ಕೆಯಲ್ಲೂ ಯಾವುದೇ ಮಡಿವಂತಿಕೆಯನ್ನು ತೋರಿಸುವುದಿಲ್ಲ. ಹೀಗಾಗಿ ಈ ಪುಸ್ತಕದುದ್ದಕ್ಕೂ ಅನೇಕ ವಿಷಯಗಳು ಚರ್ಚೆಗೆ ಒಳಗಾಗಿವೆ. ಅವುಗಳ ವ್ಯಾಪ್ತಿ ವಿಸ್ತಾರವಾಗಿದೆ. ರಶಿಯಾ, ಅಮೇರಿಕಾ ಮೊದಲಾದ ಬೃಹತ್ ರಾಷ್ಟ್ರಗಳ ಜೊತೆಗೆ, ಚಿನುವಾ ಅಚಿಬೆ, ಪೆರಿಯಾರ್, ಇದಿ ಅಮಿನ್, ಚೌಡಮ್ಮ ಮೊದಲಾದವರೂ ಇಲ್ಲಿ ಹಾದು ಹೋಗುತ್ತಾರೆ. ಕ್ರಿಕೆಟ್, ಫುಟ್ ಬಾಲ್, ಟೆನಿಸ್, ಕಥಕ್ಕಳಿ, ಮ್ಯಾಜಿಕ್ ರಿಯಾಲಿಸಂ ಮತ್ತಿತರವುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ಅಂಶಗಳು ಪರೋಕ್ಷವಾಗಿ ಹರೀಶರ ವಿಸ್ತಾರವಾದ ಓದಿನ ಕಡೆಗೆ ನಮ್ಮ ಗಮನಸೆಳೆಯುತ್ತವೆ. ಪ್ರಸ್ತುತ ಪುಸ್ತಕದ ಮೂಲಕ ಅವರ ಓದಿನ ಲಾಭ ನಮಗೂ ದಕ್ಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಷ್ಟೊಂದು ವಿಸ್ತಾರವಾದ ಲೋಕವನ್ನು ಗ್ರಹಿಸಿ, ಭಾಷೆಯಲ್ಲಿ ಮಂಡಿಸುವಾಗ, ಎರಡು ಅಂಶಗಳನ್ನು ಲೇಖಕರು ಸ್ಥಾಯಿಯಾಗಿ ಉಳಿಸಿಕೊಂಡಿದ್ದಾರೆ. ಒ೦ದು, ಎಲ್ಲ ಬಗೆಯ ಅನ್ಯಾಯಗಳ ವಿರುದ್ಧ ಸಾತ್ವಿಕ ಪ್ರತಿಭಟನೆ ಮತ್ತು ಎರಡು, ಬಹು ಬಗೆಯ ಶೋಷಣೆಗಳಿಗೆ ಒಳಗಾದವರ ಕುರಿತಾದ ಮಾನವೀಯ ಅನುಕಂಪ. ಇವು ಈ ಪುಸ್ತಕವನ್ನು ಸುಲಲಿತವಾಗಿ ಓದುಗರ ಎದೆಗೆ ತಲುಪಿಸುತ್ತವೆ. ನಾನು ಈಚಿಗೆ ಓದಿದ ಅತ್ಯಂತ ಉಪಯುಕ್ತ ಪುಸ್ತಕಗಳಲ್ಲಿ ಇದು ಕೂಡಾ ಒಂದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಪುರುಷೋತ್ತಮ ಬಿಳಿಮಲೆ","brand":"BEETLE BOOK SHOP","offers":[{"title":"Default Title","offer_id":47777190707483,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gurutina-banagalu-9247162.jpg?v=1767534727","url":"https:\/\/beetlebookshop.com\/kn\/products\/gurutina-banagalu","provider":"Beetle Book Shop","version":"1.0","type":"link"}