{"product_id":"gini-biskattu","title":"ಜಿನಿ ಬಿಸ್ಕತ್ತು","description":"\u003cp\u003eಈಚಲು ಮರದ ಜಂತಿ ತೊಲೆಗಳಿಂದ ಹೊದಿಸಲ್ಪಟ್ಟ ಮಣ್ಣಿನ ಮನೆ ನಮ್ಮದು. ಮಳೆ ಬಂದಾಗ ಗೋಡೆ ಮೇಲೆ ನೀರು ಇಳಿದು ಇಳಿದು ಗೋಡೆಯ ಮಣ್ಣು ಕಳಚಿ ಕಳಚಿ ಬೀಳುವಾಗ ತೊಲೆಗಳು ಮೆಲ್ಲಗೆ ಜರುಗುತ್ತಿರುವ ದೃಶ್ಯ ಕಂಡು ಅವ್ವ ದಿಗಿಲುಪಡುತ್ತಿದ್ದಳು. ಅಪ್ಪ ಅಟ್ಟದ ಮೇಲೆ ಅಲ್ಲ ಇಲ್ಲ ಮೂಲೆ ಮುಡುಕುಗಳಲ್ಲಿ ಇಟ್ಟ ದಡಿಗಳನ್ನು ಕಂಡು 'ಅದನ ಎಲ್ಲೋ, ಇದನ್ನು ಇಡೋ...' ಎಂದಾಗ ನನ್ನ ಕೈಗಳಲ್ಲಿ ಎಳೆಯಲಾಗುತ್ತಿರಲಿಲ್ಲ. ಆದರೂ ಮನೆ ಬೀಳಬಹುದೇನೋ ಎನ್ನುವ ಆತಂಕಕ್ಕೆ ದಬಾಯಿಸಿ ಎಳೆದು ಹೊರತೆಗೆಯುತ್ತಾ ಇರುವಾಗ ಅಪ್ಪನ ಮೇಲೆ ನನ್ನ ಭಾರ ಬೀಳದಂತೆ ಎಚ್ಚರ ವಹಿಸಿ ಎಳೆಯುತ್ತಿದ್ದೆ. ದಡಿಗಳನ್ನು ಹೊರತೆಗೆದು ಕೊಟ್ಟೆ. ತೊಲೆಗೆ ಆತು ನಿಲ್ಲುವಂತೆ ದಡಿ ಕೊಟ್ಟು ನಿಲ್ಲಿಸಿದ ಅಪ್ಪ ನಿಟ್ಟುಸಿರು ಬಿಡುತ್ತಿದ್ದ. ತನ್ನ ಮೇಲೆ ಇದ್ದಮನೆಯ ಭಾರವನ್ನು ಮರದ ಮೇಲೆ ಹೊರಿಸಿದ ನೆಮ್ಮದಿಯನ್ನ ಅಪ್ಪನಲ್ಲಿ ಕಂಡೆ.\u003c\/p\u003e\n\u003cp\u003e(ಕಾದಂಬರಿಯ ಆಯ್ದಭಾಗ)\u003c\/p\u003e","brand":"BEETLE BOOK SHOP","offers":[{"title":"Default Title","offer_id":50029577404699,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gini-biskattu-3842351.jpg?v=1767529446","url":"https:\/\/beetlebookshop.com\/kn\/products\/gini-biskattu","provider":"Beetle Book Shop","version":"1.0","type":"link"}