{"product_id":"gaana-yaana-kavya-milana","title":"ಗಾನಯಾನ - ಕಾವ್ಯ ಮಿಲನ | Gaana Yaana - Kavya Milana","description":"\u003cp\u003e‘ಹಾಡು ಹರಡಬೇಕು, ಮಾತು ಮರೀಬೇಕು’ ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಚ್ಚೊತ್ತಿ ನಿಂತ ಹೆಸರು. ‘ಹಾಡು’ ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. ‘ಹಾಡಾಗಿ ಹರಿದಾಳೆ..’ ಲೀಲಾವತಿ ಅವರ ಆತ್ಮಕಥನ. ಹಾಡನ್ನೇ ಉಸಿರಾಗಿಸಿಕೊಂಡ ಮಹಾನ್ ಪ್ರತಿಭೆಯ ಪಯಣದ ಕಥೆ. ಒಂದು ಅರ್ಥದಲ್ಲಿ ಈ ಕೃತಿ ಅದರ ಮುಂದುವರಿಕೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು ‘ಗಾನ ಯಾನ, ಕಾವ್ಯ ಮಿಲನ’. ಈ ಕೃತಿ ಓದಿದರೆ  ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಒಂದು ಹಿಡಿ ಹೆಚ್ಚೇ ಆಗುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50177147207963,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gaana-yaana-kavya-milana-7773044.jpg?v=1767528967","url":"https:\/\/beetlebookshop.com\/kn\/products\/gaana-yaana-kavya-milana","provider":"Beetle Book Shop","version":"1.0","type":"link"}