{"product_id":"erenetti","title":"ಏನೆನುತ್ತೀರಿ","description":"\u003cp\u003eಇವು ಕಥೆಗಳಲ್ಲ, ಕಥನಗಳು. ಇಲ್ಲಿನ ಭಾಷೆಯಲ್ಲಿ ಹಾಗೂ ವಿವರಗಳಲ್ಲಿ ಭಾವಗೀತೆ ಮತ್ತು ರೂಕ್ಷತೆಗಳು ಒಡಬಾಳುತ್ತವೆ. ಇವುಗಳಲ್ಲಿ ನಿಟ್ಟುಸಿರುಬಿಡುತ್ತಿರುವ ಪ್ರಾಣಿಲೋಕ, ಸಸ್ಯಲೋಕ ಮತ್ತು ಮನುಷ್ಯಲೋಕಗಳು ಬೇರೆಬೇರೆಯೆನಿಸದ 'ಒಂದುತನದ' ಸ್ಥಿತಿಯಿಂದ 'ಕೊಂದುತನದ ಸ್ಥಿತಿಗೆ ತಲುಪಿವೆ.\u003cbr data-mce-fragment=\"1\"\u003e- ಎಚ್. ಎಸ್. ರಾಘವೇಂದ್ರರಾವ್\u003c\/p\u003e\n\u003cp\u003e\u003cbr data-mce-fragment=\"1\"\u003eಗಂಗಾಧರಯ್ಯ ರಮ್ಯವಾಸ್ತವದ ತವರೂರಿನವನು. ಮುಗ್ಧಲೋಕದ ಕರುಣ ಕ್ಷಣಗಳ ಸೃಜನಶೀಲತೆಯ ತಾಯ್ತನದ ಹಾರೈಕೆಯನ್ನೇ ನೆಚ್ಚಿ ಬರೆಯುವವನು.                                 -ಮೊಗಳ್ಳಿ ಗಣೇಶ್\u003c\/p\u003e\n\u003cp\u003e\u003cbr data-mce-fragment=\"1\"\u003eಇಲ್ಲಿನ ಯಾವ ನಿಲುವುಗಳೂ ಹೊರಗಿನಿಂದ ತಂದು ಆವಾಹಿಸಿಕೊಂಡವುಗಳಲ್ಲ. ಬದಲಿಗೆ ಅಲ್ಲಲ್ಲಿ ಸೆಲೆಯೊಡೆದ ತಲಪರಿಗೆಗಳು.\u003cbr data-mce-fragment=\"1\"\u003e- ಎಸ್. ನಟರಾಜ ಬೂದಾಳು\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಥೆಗಳಿಗೆ ನೆಲದ ಅಂತಃಕರಣವಿದೆ. ಅವಜ್ಞೆಗೊಳಗಾದ ಜೀವಿಗಳನ್ನು ಹಾಗೂ ಸನ್ನಿವೇಶಗಳನ್ನು ಇದು ಧ್ಯಾನಿಸುತ್ತದೆ. ಇಲ್ಲಿನ ಪದ್ಯಗಂಧಿ ಭಾಷೆ ಸ್ಪುರಿಸುವ ಭಾವತೀವ್ರತೆ ಪ್ರಕೃತಿ ಸಹಜ ಅನುಭೂತಿಗೆ ಅನುವು ಮಾಡಿಕೊಡುವಲ್ಲಿ ಈ ಕಥನಗಳ ವಿಶಿಷ್ಟತೆ ಹಾಗೂ ಮಹತ್ವವಿದೆ.\u003cbr data-mce-fragment=\"1\"\u003e- ಸುನಂದಾ ಕಡಮೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":47054954955035,"sku":"","price":440.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/erenetti-2414255.png?v=1767534606","url":"https:\/\/beetlebookshop.com\/kn\/products\/erenetti","provider":"Beetle Book Shop","version":"1.0","type":"link"}