{"product_id":"endendigu-mugiyada-kathegalu","title":"Endendigu Mugiyada Kathegalu: Hosa Makkalige Haliya Mattu Hosa Kathegalu (ಎಂದೆಂದಿಗೂ ಮುಗಿಯದ ಕತೆಗಳು: ಹೊಸ ಮಕ್ಕಳಿಗೆ ಹಳೆಯ ಮತ್ತು ಹೊಸ ಕತೆಗಳು","description":"\u003cp\u003eಮಹೇಶ್ ಕುಮಾರ್ ಇಲ್ಲಿ ಹೊಸ ನಮೂನೆಯಲ್ಲಿ ಕತೆ ಹೇಳಿ ಹೊಸ ಬೆಳಕು ಬೀರಲು ಯತ್ನಿಸಿದ್ದಾರೆ. ಅದಕ್ಕೆ ಪ್ರಚಲಿತ ಬದುಕಿನ ಪ್ರತಿಮೆಗಳಿಂದ ಕೂಡಿದ ಅವರ ಆಡುಮಾತಿನ ಶೈಲಿ ಉಸಿರಾಟ ನೀಡಿದೆ.\u003c\/p\u003e\n\u003cp\u003e..ಹೀಗೆ ಹಳೆ ಕತೆ ಹೇಳುತ್ತಾ ಹೊಸತನ್ನು ಹೊಳೆಸುವ, ಹೊಸತನ್ನು ಹೊಳೆಸುತ್ತಾ ಓದುವ ಪ್ರತಿ ಎಳೆ ಮನಸ್ಸಿನ ಕಲ್ಪನಾಶೀಲತೆಯ ಕದವನ್ನೂ ತೆರೆಯುವ ಈ ಕತೆಗಳಿಗೆ ಹೊಸ ಹೊಸ ರೆಕ್ಕೆಗಳು ಮೂಡುತ್ತಲೇ ಇರಲಿ.\u003c\/p\u003e\n\u003cp\u003e~ ಜಯಂತ ಕಾಯ್ಕಿಣಿ\u003c\/p\u003e\n\u003cp\u003eಇದರಲ್ಲಿ ಹಳೆಯ ಕಥೆಗಳನ್ನು ಹೊಸಕಾಲಕ್ಕನುಗುಣವಾಗಿ ಮುರಿದು ಕಟ್ಟಿದ ಕಥೆಗಳಾದ ಇಮ್ಮಡಿ ಕಾಕಭುಸುಂಡಿಯ ಕತೆ, ರಾಮ ಮತ್ತು ಜಿಂಕೆ- ಇವುಗಳ ಜೊತೆಗೆ ಹೊಸವೇ ಆದ, 'ಸರಿಯಾಗಿ ಇರುವುದೆಲ್ಲ ಸರಿಯಾಗಿಯೇ ಇದೆ, 'ಗುಂಪಿಗೆ ಸೇರದ ಪದ' ದಂಥ ಕಥೆಗಳೂ ಇವೆ. ಒಂದು ರೀತಿಯಲ್ಲಿ ಬ್ರೆಕ್ಟ್ ಎಪಿಕ್ ಥಿಯೇಟರ್ನ ಹಾಗೆ ಈ ಕಥೆಗಳನ್ನೋದುವ ಮಕ್ಕಳು ಕಥೆಯ ಪ್ರಪಂಚದೊಂದಿಗೆ ಮೈಮರೆಯದೆ ಒಂದು ಅನುಕೂಲಕರ ದೂರವನ್ನು ಕಾಪಾಡಿಕೊಂಡು ವಿಚಾರಗಳನ್ನು ಗ್ರಹಿಸಿಕೊಂಡು ವೈಚಾರಿಕತೆಯನ್ನು ರೂಢಿಸಿಕೊಳ್ಳಲು ಅನುಕೂಲವಾಗುವಂತಿವೆ ಇವು, ಲವಲವಿಕೆಯ, ಚುರುಕಾದ ಸಂಭಾಷಣೆಗಳಿಂದ ಕೂಡಿರುವ ಇವುಗಳ ಭಾಷೆ ಮಕ್ಕಳಿಗೆ ಪರಿಚಿತವಾಗಿರುವ ದಿನರೂಢಿಯ ಸರಳ, ಲಲಿತ ಕನ್ನಡವೇ ಆಗಿರುವುದು ಈ ಕಥೆಗಳ ವಿಶೇಷ.\u003c\/p\u003e\n\u003cp\u003e~ ಪ್ರೊ. ಆರ್. ಲಕ್ಷ್ಮೀನಾರಾಯಣ.\u003c\/p\u003e","brand":"BEETLE BOOK SHOP","offers":[{"title":"Default Title","offer_id":54192504439067,"sku":null,"price":112.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-10-11at11.32.03AM.jpg?v=1791698945","url":"https:\/\/beetlebookshop.com\/kn\/products\/endendigu-mugiyada-kathegalu","provider":"Beetle Book Shop","version":"1.0","type":"link"}