{"product_id":"ede-collection-of-stories","title":"ಎದೆ ( ಕಥಾ ಸಂಕಲನ )","description":"\u003cp\u003e\u003cspan\u003eತಪ್ಪುತ್ತಿರುವ ಉಸಿರನ್ನು ನಿಯಂತ್ರಿಸಿಕೊಳ್ಳುತ್ತಾ \"ಯಾರಣ್ಣಾ ಟೆಲಿಗ್ರಾಮು?” ಅಂದಳು. ಅದಕ್ಕೆ ಪೋಸ್ಟ್‌ಮ್ಯಾನ್ ರಂಗಣ್ಣ \"ನಿಮ್ಮೂರಿಂದವ್ವಾ\" ಎಂದಾಗ ರೇಣುಕಾಳ ಮೈ ಅಲ್ಲಾಡಿದಂತಾಗಿ ಗಂಟಲು ಕಟ್ಟಿಕೊಂಡಿತು. - ಅವ್ವನ ಟೆಲಿಗ್ರಾಂ\u003c\/span\u003e\u003cbr\u003e\u003cbr\u003e\u003cspan\u003eಬಸಜ್ಜ ಮಾಡುವ ಮಣ್ಣಿನ ಕಾರ್ಯ ನೋಡಿದವರಿಗೆ \"ಸತ್ ಮ್ಯಾಲೆ ಹಿಂಗ್ ನೋಡಿಕೆಂಡ್ರೆ, ಸಾಯಾಕ್ ಯಾಕ ಹೆದುದ್ದೇಕು?\" ಎನ್ನಿಸುತ್ತಿತ್ತು. ಇದೇ ಹೆಮ್ಮೆಯಿಂದ ಕೆಲವರು ಅವನನ್ನು ನಮ್ ಕಾಲುದ್ ಸತ್ಯ ಹರಿಶ್ಚಂದ್ರ\" ಎನ್ನುತ್ತಿದ್ದರು. - ಎಡೆ\u003c\/span\u003e\u003cbr\u003e\u003cbr\u003e\u003cspan\u003eಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೀಟ್‌ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೀಟ್‌ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ. - ಡೈರಿ ಮಿಲ್ಕ್ ಚಾಕ್ಲೀಟು\u003c\/span\u003e\u003cbr\u003e\u003cbr\u003e\u003cspan\u003e\"ಹುಡುಗಿ ಹೆಂಗಾನಾ ಇಲ್ಲಿಜಾ, ರೊಟ್ಟಿನ ರೌಂಡುಗ ಮಾಡಾಕ ಬರೇಕು. ಜೊತೆಗೆ ಬೆಂಡೀಕಾಯಿ ಚಟ್ಟಿಗೂಡ ಬರೇಕು. ಅಜಾ. ಹಂಗೇ ಅಜ್ಜಿಯಂಗ ಸಂಸಾರಾನೂ ಮಾಡೋಕು \" ಎಂದ ವಿಜಯ್. -ರೊಟ್ಟಿ ಬೆಂಡಿಕಾಯಿ ಚಟ್ಟಿ\u003c\/span\u003e\u003cbr\u003e\u003cbr\u003e\u003cspan\u003eಬಾಲ್ಯ-ಮನಸು-ದೇಹ-ಸಿನಿಮಾ ಎಲ್ಲವೂ ತಲೆಯ ಬೀಸೋ ಕಲ್ಲಿನಲ್ಲಿ ಪುಡಿ ಪುಡಿಯಾದವು. ಒಂದು ಸಿನಿಮಾ ಅವಶ್ಯಕತೆಗೂ ಮೀರಿ ಅವಳನ್ನು ಚಿಂತೆಗತ್ತಿಸಿದ್ದು ಇದೇ ಮೊದಲು. - ರಾಧಾ ಮೋಹನ\u003c\/span\u003e\u003cbr\u003e\u003cbr\u003e\u003cspan\u003e\"ನಮ್ಮಪ್ಪ ಸತ್ತ. ತಗಳಿ ನಿಮ್ ದುಡ್ಡು ತಗಳ\" ಎಂದು ರಾತ್ರಿ ಕನವರಿಸುತ್ತಿದ್ದ ಗಂಡನನ್ನು ತಿವಿದು ಎಬ್ಬಿಸಿದ ಮಂಗ್ಟವ್ವ. \"ಹೂ ನಿನ್ನ ಬಾಯಾಗ ಮಣ್ಣಾಕ, ಏನಾಗೆತೆ ನಿನೀಗೆ?\" ಎಂದು ಉಗಿದು ಮಲಗಿದಳು. - ಹಲಗೆ ಬಡಿತ\u003c\/span\u003e\u003cbr\u003e\u003cbr\u003e\u003cspan\u003e“ಉಡ ಅಂದ್ರೆ ಅದ್ರಷ್ಟುಕ್ಕ ಅದೇ ಕಣ್ಣಿಗೆ ಬೀಳೇಕು, ಹುಡಿಕೆಂಡ್ ಹೋದ್ರೆ ಉಡ ಸಿಗಲ್ಲ\" ಎಂಬ ತಾನು ಕಂಡುಕೊಂಡ ಸತ್ಯವನ್ನು ತನಗೆ ತಾನೇ ಹೇಳಿಕೊಂಡ ದುರುಗಪ್ಪ, - ಉಡ\u003c\/span\u003e\u003cbr\u003e\u003cbr\u003e\u003cspan\u003eಕಿರಣ ಮಾತಾಡುವ ಮೊದಲೇ ಶೇಖರ, “ಯಾರಿಗೂ ಹೇಳ್ವಾಡಲೇ, ಇನ್ಮಾಲೆ ಹಿಂಗ ಮಾಡಲ್ಲ. ನಿನೀಗೆ ಹತ್ರುಪಾಯಿ ಕೊಡ್ತೀನಿ\" ಎಂದ. ಕಿರಣ ಏನೂ ಮಾತಾಡಲಿಲ್ಲ. - ಗುಟ್ಟು\u003c\/span\u003e\u003cbr\u003e\u003cbr\u003e\u003cspan\u003eಊರೆಂದರೆ ಬರೀ ನೆಲವಲ್ಲ, ಊರೆಂದರೆ ಮಂದಿ ಕೂಡ ಎಂಬುದು ಹನುಮಜ್ಜನಿಗೆ ಅರ್ಥವಾಗಿ ಕೆಂಪು ಬಸ್ಸು ಹತ್ತಿ ಬೆಂಗಳೂರನ್ನು ಸೇರಿಕೊಂಡ. - ಹನುಮಜ್ಜನ ಸಿನಿಮಾಕತೆ\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49343870075163,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ede-collection-of-stories-6590910.jpg?v=1767532506","url":"https:\/\/beetlebookshop.com\/kn\/products\/ede-collection-of-stories","provider":"Beetle Book Shop","version":"1.0","type":"link"}