{"product_id":"dr-rajashekhara-neeramanvi-samagra-kategalu","title":"ಡಾ. ರಾಜಶೇಖರ ನೀರಮನ್ವಿ ಸಮಗ್ರ ಕತೆಗಳು","description":"\u003cp\u003eಹತ್ತಾರು ಕಾದಂಬರಿ, ನೂರಾರು ಕತೆಗಳನ್ನು ಬರೆದ ಲೇಖಕರ ಹೆಸರಿನಲ್ಲಿ ಕೊನೆಗೂ ಉಳಿಯುವುದು ಕೆಲವೇ ಕೆಲವು ಕತೆ-ಕಾದಂಬರಿಗಳು ಮಾತ್ರ, ಆದರೆ ಡಾ. ರಾಜಶೇಖರ ನೀರಮಾನ್ವಿ ಅವರಂಥ ಅಪರೂಪದ ಲೇಖಕರು ಬರೆದದ್ದು, ಸಂಖ್ಯಾಮಿತಿಯಲ್ಲಿ ಬಹಳ ಕಡಿಮೆ. ಆದರೆ ಸತ್ತ್ವದ ದೃಷ್ಟಿಯಿಂದ ಕಾಲಕಾಲಕ್ಕೆ ಉಲ್ಲೇಖವಾಗುತ್ತಲೂ ಚರ್ಚೆಯಾಗುತ್ತಲೊ, ಹೊಸ ಕತೆಗಾರರಿಗೆ ಮಾದರಿಯಾಗುತ್ತ ಉಳಿದಿರುವುದು, ಅವರ ಚಿನ್ನದ ಕುಸುರಿ ಕೆಲಸದ ರೀತಿಯಿಂದಾಗಿ.\u003c\/p\u003e\n\u003cp\u003eನವ್ಯದ ಅಂತರ್ಮುಖತೆ ಮತ್ತು ಅತಿಸೂಕ್ಷ್ಮ ಭಾಷಾ ಮೊನಚು, ಬಂಡಾಯದ ಸಮಷ್ಟಿಪ್ರಜ್ಞೆ ಮತ್ತು ಮನುಷ್ಯ ಮೂಲದ ತೊಳಲಾಟ ಅಣ್ಣ ರಾಜಶೇಖರ ಅವರ ಎಲ್ಲ ಕತೆಗಳ ಜೀವಕೋಶಗಳಾಗಿವೆ. ಈ ನಾಲ್ಕು ದಶಕಗಳಲ್ಲಿ ರಾಜಶೇಖರಣ್ಣ ಪ್ರಕಟಿಸಿದ್ದು ಎರಡೇ ಎರಡು ಕಥಾಸಂಕಲನಗಳನ್ನು, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಗಳು ರಾಜಶೇಖರಣ್ಣ ಸಾಹಿತ್ಯಕ್ಕೆ ಸಿಕ್ಕ ಗೌರವಗಳಾಗಿವೆ.\u003c\/p\u003e\n\u003cp\u003eಭೂ ಒಡಲದ ಕಂಪನ ಮತ್ತು ಅದರ ರಚನೆ ಹೇಳಿಕೊಟ್ಟ ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ರಾಜಶೇಖರಣ್ಣ, ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗಳು ಸಂಗಮಿಸಿದಾಗ ಹುಟ್ಟಬಹುದಾದ ಬಹುಶ್ರುತ ಜೀವಕಂಪನಗಳ ಒಟ್ಟು ಸಾಹಸತ್ವ ಇಲ್ಲಿ ಸಂಗ್ರಹಿತವಾದ ಈ ಹನ್ನೆರಡು ಕತೆಗಳು.\u003c\/p\u003e\n\u003cp\u003eಬಳ್ಳಾರಿ ಬಿಸಿಲು ನೆಲದ ಇಬ್ಬರು ಅಣ್ಣಂದಿರಾದ ರಾಜಶೇಖರಣ್ಣ ಮತ್ತು ಚನ್ನಬಸವಣ್ಣ ಎಂಬ ಜೋಡಿ ಜೀವಗಳು ಲೋಹಿಯಾ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಪುಸ್ತಕ ಸಂಸ್ಕೃತಿಯ ಮೂಲಕ ಕರ್ನಾಟಕದ ತುಂಬ ಪರಿಚಯಿಸಿದವರು. ಅದರಲ್ಲೂ ರಾಜಶೇಖರಣ್ಣ ಲೋಹಿಯಾ ಪ್ರಕಾಶನದ ಮೊದಲ ಲೇಖಕ; ಪ್ರಕಾಶನದ ಜೀವಜೀವಾಳ.\u003c\/p\u003e\n\u003cp\u003eರಾಜಶೇಖರಣ್ಣ ಮಾನವೀಯತೆಯ ನೆಲೆಯಲ್ಲಿ ಕಥೆ ಕಟ್ಟುವ ಕಥಾಶಿಲ್ಪಿ. ಇಲ್ಲಿರುವ ಅವರ ಕಥೆಗಳು ಹೊಸ ಲೇಖಕರಿಗೆ ಮಾದರಿಯಾದವುಗಳು; ಈಗಿರುವ ಲೇಖಕರಿಗೆ ಮರು ಓದಿಗೆ ಪಕ್ಕಾಗಿಸಿ, ಹೊಸ ಅರ್ಥವನ್ನು ನೀಡುವಂತಹವುಗಳು.\u003c\/p\u003e\n\u003cp\u003e- ಸರಜೂ ಕಾಟ್ಕರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49383076725019,"sku":"","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dr-rajashekhara-neeramanvi-samagra-kategalu-5304403.jpg?v=1767537067","url":"https:\/\/beetlebookshop.com\/kn\/products\/dr-rajashekhara-neeramanvi-samagra-kategalu","provider":"Beetle Book Shop","version":"1.0","type":"link"}